ನವದೆಹಲಿ: ಮುಂಬರುವ ಕ್ರಿಕೆಟ್ ವಿಶ್ವಕಪ್ ಗೆಲ್ಲುವುದಾಗಿ ಹೇಳಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವಕಪ್ ನ್ನು ಭಾರತೀಯ ಸೈನಿಕರಿಗೆ ಅರ್ಪಿಸಲಾಗುವುದು ಎಂದು ತಿಳಿಸಿದ್ದಾರೆ.ಮೇ 30 ರಿಂದ ಇಂಗ್ಲೆಂಡ್ ನಲ್ಲಿ ಪ್ರಾರಂಭವಾಗಲಿರುವ ವಿಶ್ವಕಪ್ ಟೂರ್ನಿಗೆ ತೆರಳುವ  ಮೊದಲು ಪತ್ರಿಕಾಗೋಷ್ಠಿ ನಡೆಸಿದ ವಿರಾಟ್ ಕೊಹ್ಲಿಭಾರತದ ಸಶಸ್ತ್ರ ಪಡೆಗಳ ಧೈರ್ಯವನ್ನು ಪ್ರಶಂಸಿಸಿದ್ದಾರೆ.


COMMERCIAL BREAK
SCROLL TO CONTINUE READING

"ನಾವು ಭಾರತೀಯ ಸೈನಿಕರಿಗಾಗಿ  ಈ ಬಾರಿ ವಿಶ್ವಕಪ್ ಗೆಲ್ಲುತ್ತೇನೆ ನೀವು ಸಾಕಷ್ಟು ಮೂಲಗಳಿಂದ ಪ್ರೇರಣೆ ಪಡೆಯಬಹುದು ಆದರೆ ಸೈನಿಕರಿಗಿಂತ ಯಾವುದೇ ದೊಡ್ಡ ಪ್ರೇರಣೆ ಇಲ್ಲ ಎಂದು ನಾನು ಭಾವಿಸುತ್ತೇನೆ.ನಿಮ್ಮ ಪಾತ್ರವನ್ನು ಯಾವತ್ತಿಗೂ ಕೂಡ ಸೈನ್ಯಕ್ಕೆ ಹೋಲಿಸಬೇಡಿ. ಕೆಲವು  ಆಟಗಾರರು ತಮ್ಮ ಕುಟುಂಬದಿಂದ ಪ್ರೇರಣೆ ಪಡೆದುಕೊಳ್ಳಬಹುದು, ಆದರೆ ನಾವು ಬಯಸುವುದಕ್ಕಿಂತ ಹೆಚ್ಚಿನ ಪ್ರೇರಣೆಯನ್ನು ಸೈನ್ಯಕ್ಕೆ ವಿಶ್ವಕಪ್ ಗೆಲ್ಲುವ ಮೂಲಕ ಪಡೆಯಲಾಗುತ್ತದೆ " ಎಂದು ಕೊಹ್ಲಿ ಹೇಳಿದರು.


ಇದೇ ವೇಳೆ ಪತ್ರಕರ್ತರು ಪನಿರೀಕ್ಷೆಗಳನ್ನು ಹೇಗೆ ನಿಭಾಯಿಸುತ್ತಿರಿ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಕೊಹ್ಲಿ " ಒತ್ತಡವನ್ನು ನಿಭಾಯಿಸುವುದು ಮುಖ್ಯವಾದ ಅಂಶವಾಗಿದೆ. ನಮ್ಮ ಬೌಲರ್ ಗಳು ಫ್ರೆಶ್ ಆಗಿದ್ದಾರೆ ಯಾರೂ ಕೂಡ ಆಯಾಸಗೊಂಡಂತೆ ಕಾಣುವುದಿಲ್ಲವೆಂದು ಕೊಹ್ಲಿ ಉತ್ತರಿಸಿದರು.