ನವದೆಹಲಿ: ಕಪಿಲ್ ದೇವ್ ಅವರ 1983 ರ ವಿಶ್ವಕಪ್ ಗೆಲುವು ಮತ್ತು 2011 ರ ನಡುವೆ, 2003 ರಲ್ಲಿ ಭಾರತ ಕ್ರಿಕೆಟ್ ತಂಡದ ಟ್ರೋಫಿಯನ್ನು ಗೆಲ್ಲುವ ನಿಟ್ಟಿನಲ್ಲಿ ಸೌರವ್ ಗಂಗೂಲಿ ನಾಯಕತ್ವದ ತಂಡ ದಕ್ಷಿಣ ಆಫ್ರಿಕಾದಲ್ಲಿ ಫೈನಲ್ ತಲುಪಿತ್ತು. ಆ ಸೋಲಿನ ಹದಿನೈದು ವರ್ಷಗಳ ನಂತರ, ಇದೀಗ ಗಂಗೂಲಿ 'ಎ ಸೆಂಚುರಿ ಈಸ್ ನಾಟ್ ಎನಫ್' ಎಂಬ ಆತ್ಮಚರಿತ್ರೆಯನ್ನು ಹೊರತಂದಿದ್ದಾರೆ. ಅದರಲ್ಲಿ ಅವರು, 2003 ರ ವಿಶ್ವ ಕಪ್ ತಂಡದಲ್ಲಿ ಎಂ.ಎಸ್.ಧೋನಿ ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

"ಪಂದ್ಯದಲ್ಲಿ ಒತ್ತಡದ ಪರಿಸ್ಥಿತಿ ಇದ್ದಾಗಲೂ ಸ್ಥಿರವಾಗಿ ಉಳಿಯುವ ಮತ್ತು ಪಂದ್ಯದ ಧಾಟಿಯನ್ನು ಬದಲಿಸುವ ಸಾಮರ್ಥ್ಯ ಹೊಂದಿರುವ ಆಟಗಾರರಿಗಾಗಿ ನಾನು ಸತತವಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದೆ. ಆಗ 2004 ರಲ್ಲಿ ನನ್ನ ಗಮನಕ್ಕೆ ಬಂದದ್ದು, ಮಹೇಂದ್ರ ಸಿಂಗ್ ಧೋನಿ. ಧೋನಿಯ ಆಗಮನ ನನ್ನ ಆಲೋಚನೆಯ ನೈಸರ್ಗಿಕ ನೈಸರ್ಗಿಕ ಪ್ರಗತಿಯಾಗಿದೆ" ಎಂದು ಗಂಗೂಲಿ ಅವರ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.


"2003 ರ ವಿಶ್ವಕಪ್ ವಿಶ್ವಕಪ್ ತಂಡದಲ್ಲಿ ಧೋನಿ ಇರಬೇಕಿತ್ತು. ಆದರೆ ಅವರು ಆಗಿನ್ನೂ ಭಾರತೀಯ ರೈಲ್ವೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದರು. ಖಂಡಿತಾ ಇದು ನಂಬಲಸಾಧ್ಯ! ಎಂದು ಗಂಗೂಲಿ ಹೇಳಿದ್ದಾರೆ. 


"ಇಂದು ನಾನು ಅಂದುಕೊಂಡಿದ್ದು ಸಾಬೀತಾಗಿದೆ. ನಾನು ಖುಷಿಪಟ್ಟಿದ್ದೇನೆ. ಅವರು ಈ ಸ್ಥಾನವನ್ನು ಪಡೆಯಲು ಅದೆಷ್ಟು ಹಂತಗಳನ್ನು ದಾಟಿದ್ದಾರೆ ಎಂಬುದು ಕಂಡರೆ ನಿಜಕ್ಕೂ ಆಶ್ಚರ್ಯವಾಗುತ್ತದೆ " ಎಂದು ಗಂಗೂಲಿ ಹೇಳಿದ್ದಾರೆ.


2014 ರಲ್ಲಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಪಡೆದ ಧೋನಿ, ಈಗ ಸೀಮಿತ ಓವರುಗಳ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಲಕ್ಷಣಗಳಿವೆ ಎಂದು ಅವರು ಹೇಳಿದ್ದಾರೆ.