ಅಫ್ಘಾನಿಸ್ತಾನ ವಿರುದ್ಧದ ಗೆಲುವಿನ ಮೂಲಕ ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವ ಭಾರತ
ಐದು ದಿನಗಳ ಅಂತರದ ನಂತರ ಭಾರತೀಯ ಕ್ರಿಕೆಟ್ ತಂಡವು ಶನಿವಾರದಂದು ಅಫಘಾನಿಸ್ತಾನ ತಂಡದ ವಿರುದ್ಧ ದಿ ರೋಸ್ ಬೌಲ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ಮೂಲಕ ತನ್ನ ಸೆಮಿಫೈನಲ್ ಕನಸನ್ನು ಸುಲಭ ಮಾಡುವತ್ತ ಗಮನ ಹರಿಸಿದೆ.
ನವದೆಹಲಿ: ಐದು ದಿನಗಳ ಅಂತರದ ನಂತರ ಭಾರತೀಯ ಕ್ರಿಕೆಟ್ ತಂಡವು ಶನಿವಾರದಂದು ಅಫಘಾನಿಸ್ತಾನ ತಂಡದ ವಿರುದ್ಧ ದಿ ರೋಸ್ ಬೌಲ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ಮೂಲಕ ತನ್ನ ಸೆಮಿಫೈನಲ್ ಕನಸನ್ನು ಸುಲಭ ಮಾಡುವತ್ತ ಗಮನ ಹರಿಸಿದೆ.
ಇದುವರೆಗೆ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಪಂದ್ಯವು ಮಳೆಯಿಂದ ರದ್ಧಾಗಿದ್ದು ಬಿಟ್ಟರೆ ಉಳಿದ ಮೂರು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ನಾಲ್ಕು ಪಂದ್ಯಗಳಲ್ಲಿ ಏಳು ಅಂಕಗಳನ್ನು ಗಳಿಸಿದೆ.ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ನಿರ್ಗಮಿಸಿರುವುದು ನಿಜಕ್ಕೂ ಆಘಾತ ತರಿಸಿದೆ.ಈಗ ಅವರ ಬದಲಾಗಿ ರಿಶಬ್ ಪಂತ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತ ಈಗ ಅಂಕಪಟ್ಟಿಯಲ್ಲಿ ಏಳು ಅಂಕಗಳನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಈಗ ಅಫಘಾನಿಸ್ತಾನ ತಂಡದ ವಿರುದ್ಧ ಗೆಲುವು ಸಾಧಿಸಿದಲ್ಲಿ 9 ಅಂಕಗಳನ್ನು ಪಡೆಯಲಿದೆ ಎನ್ನಲಾಗಿದೆ. ಇನ್ನೊಂದೆಡೆಗೆ ಅಫಘಾನಿಸ್ತಾನ ಇದುವರೆಗೆ ಆಡಿರುವ ಎಲ್ಲ ಐದು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ.
ಭಾರತ ತಂಡ :
1) ಕೆ.ಎಲ್.ರಾಹುಲ್, 2 ರೋಹಿತ್ ಶರ್ಮಾ, 3 ವಿರಾಟ್ ಕೊಹ್ಲಿ (ಕ್ಯಾಪ್ಟನ್), 4 ವಿಜಯ್ ಶಂಕರ್, 5 ಎಂ.ಎಸ್.ಧೋನಿ (ವಾರ), 6 ಕೇದಾರ್ ಜಾಧವ್, 7 ಹಾರ್ದಿಕ್ ಪಾಂಡ್ಯ, 8 ಕುಲದೀಪ್ ಯಾದವ್, 9 ಮೊಹಮ್ಮದ್ ಶಮಿ, 10 ಜಸ್ಪ್ರೀತ್ ಬುಮ್ರಾ, 11 ಯುಜ್ವೇಂದ್ರ ಚಹಾಲ್
ಅಫ್ಘಾನಿಸ್ತಾನ ತಂಡ:
1) ನೂರ್ ಅಲಿ ಖಾದ್ರಾನ್, 2 ಗುಲ್ಬಾದೀನ್ ನಾಯಬ್, 3) ರಹಮತ್ ಷಾ, 4)ಹಶ್ಮತುಲ್ಲಾ ಶಾಹಿದಿ, 5) ಅಸ್ಗರ್ ಅಫಘಾನ್, 6) ಮೊಹಮ್ಮದ್ ನಬಿ, 7) ನಜೀಬುಲ್ಲಾ ಖಾದ್ರಾನ್, 8) ರಶೀದ್ ಖಾನ್, 9) ಇಕ್ರಮ್ ಅಲಿಖಿಲ್ (ವಾರ), 10) ದವ್ಲತ್ ಜದ್ರಾನ್ -ಉರ್-ರಹಮಾನ್