Women`s T20 World Cup Group B Match: ವಿಶ್ವಕಪ್ ಪಂದ್ಯದಲ್ಲಿ ಪಾಕ್ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ ಮಹಿಳಾಮಣಿಗಳು
Women`s T20 World Cup Group B Match: ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡದ ನಾಯಕು ಬಿಸ್ಮಾ ಮರೂಫ್ ಅವರ ಅದ್ಭುತ ಇನ್ನಿಂಗ್ಸ್‌ನಿಂದಾಗಿ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು. ಮರೂಫ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದಿದ್ದು, 55 ಎಸೆತಗಳಲ್ಲಿ 68 ರನ್ ಗಳಿಸಿ ಅಜೇಯರಾಗಿ ಮರಳಿದರು. ಹರ್ಮನ್‌ಪ್ರೀತ್ ಕೌರ್ ಈ ಟೂರ್ನಿಯಲ್ಲಿ ಭಾರತ ಮಹಿಳಾ ತಂಡದ ನಾಯಕಿಯಾಗಿದ್ದಾರೆ.
Women's T20 World Cup Group B Match: ಮಹಿಳೆಯರ T20 ವಿಶ್ವಕಪ್ ನ ಗುಂಪು-ಬಿ ಪಂದ್ಯವು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು ಮಣಿಸಿದೆ. ಟಾಸ್ ಗೆದ್ದಿದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಈ ವೇಳೆ ಪಾಕಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 149 ರನ್ ಪೇರಿಸಿತು. ಈ ಗುರಿ ಬೆನ್ನತ್ತಿದ ಭಾರತ ತಂಡ 19 ಓವರ್ ನಲ್ಲಿ 151 ರನ್ ಕಲೆ ಹಾಕಿ ಗೆಲುವು ಸಾಧಿಸಿದೆ.
ಇದನ್ನೂ ಓದಿ: ಟೀಂ ಇಂಡಿಯಾಗೆ ‘RRR’ ಬಲ: ಸಖತ್ ವೈರಲ್ ಆಗ್ತಿರೋ ಸಚಿನ್ ತೆಂಡೂಲ್ಕರ್ ಟ್ವೀಟ್ ಹೇಳುತ್ತಿರೋದೇನು?
ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡದ ನಾಯಕು ಬಿಸ್ಮಾ ಮರೂಫ್ ಅವರ ಅದ್ಭುತ ಇನ್ನಿಂಗ್ಸ್‌ನಿಂದಾಗಿ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು. ಮರೂಫ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದಿದ್ದು, 55 ಎಸೆತಗಳಲ್ಲಿ 68 ರನ್ ಗಳಿಸಿ ಅಜೇಯರಾಗಿ ಮರಳಿದರು. ಹರ್ಮನ್‌ಪ್ರೀತ್ ಕೌರ್ ಈ ಟೂರ್ನಿಯಲ್ಲಿ ಭಾರತ ಮಹಿಳಾ ತಂಡದ ನಾಯಕಿಯಾಗಿದ್ದಾರೆ.
ಭಾರತ (ಪ್ಲೇಯಿಂಗ್-11): ಶೆಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್‌ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್ ಮತ್ತು ರೇಣುಕಾ ಠಾಕೂರ್
ಇದನ್ನೂ ಓದಿ: ‘ನನ್ನ ಮುಖ ಏನ್ ತೋರಿಸೋದು ಅಲ್ಲಿ ತೋರಿಸಿ’ ಮೈದಾನದಲ್ಲಿಯೇ ಕೋಪಗೊಂಡ Rohit Sharma ಬೈದಿದ್ದು ಯಾರಿಗೆ?
ಪಾಕಿಸ್ತಾನ (ಪ್ಲೇಯಿಂಗ್-11): ಜವೇರಿಯಾ ಖಾನ್, ಮುನೀಬಾ ಅಲಿ (ವಿಕೆಟ್ ಕೀಪರ್), ಬಿಸ್ಮಾ ಮರೂಫ್ (ನಾಯಕ), ನಿದಾ ದಾರ್, ಸಿದ್ರಾ ಅಮೀನ್, ಆಲಿಯಾ ರಿಯಾಜ್, ಆಯೇಶಾ ನಸೀಮ್, ಫಾತಿಮಾ ಸನಾ, ಐಮನ್ ಅನ್ವರ್, ನಶ್ರಾ ಸಂಧು ಮತ್ತು ಸಾದಿಯಾ ಇಕ್ಬಾಲ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.