MRF T20I Rankingನಲ್ಲಿ ಮಹತ್ವದ ಹೆಜ್ಜೆ ಇಟ್ಟ ಟೀಂ ಇಂಡಿಯಾ ಮಹಿಳಾ ಪಡೆ: ಈ ಸಾಧನೆ ಕಂಡರೆ ಹೆಮ್ಮೆಯಾಗುತ್ತೆ
ಮಹಿಳಾ ಏಷ್ಯಾ ಕಪ್‌ನಲ್ಲಿ ದೀಪ್ತಿ ಶರ್ಮಾ ಆಟ ಅದ್ಭುತವಾಗಿದೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 27 ರನ್ ಗೆ ಮೂರು ವಿಕೆಟ್, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 13 ರನ್ ಗೆ 2 ವಿಕೆಟ್, ಥಾಯ್ಲೆಂಡ್ ವಿರುದ್ಧದ ಪಂದ್ಯದಲ್ಲಿ 10 ರನ್ ಗೆ 2 ವಿಕೆಟ್ ಕಬಳಿಸಿದ್ದಾರೆ.
MRF ಟೈರ್ಸ್ T20I ಬೌಲಿಂಗ್ ಮತ್ತು ಆಲ್-ರೌಂಡರ್‌ಗಳ ಶ್ರೇಯಾಂಕಗಳೆರಡರಲ್ಲೂ ದೀಪ್ತಿ ಶರ್ಮಾ ವೃತ್ತಿಜೀವನದ ಅತ್ಯುತ್ತಮ ಸಾಧನೆಯ ಕಡೆ ಮುಖ ಮಾಡಿದ್ದಾರೆ. ಇವರ ಜೊತೆಗೆ ಇತರ ಭಾರತೀಯ ಆಟಗಾರರು ಸಹ ಶ್ರೇಯಾಂಕದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ವೆಸ್ಟ್ ಇಂಡೀಸ್‌ನ ಇನ್-ಫಾರ್ಮ್ ತಾರೆ ಹೇಯ್ಲಿ ಮ್ಯಾಥ್ಯೂಸ್, ದಕ್ಷಿಣ ಆಫ್ರಿಕಾದ ವೇಗಿ ಶಬ್ನಿಮ್ ಇಸ್ಮಾಯಿಲ್ ಮತ್ತು ಆಸ್ಟ್ರೇಲಿಯಾದ ಮೇಗನ್ ಶುಟ್ ಜೊತೆ ಪೈಪೋಟಿಗೆ ಇಳಿದಿದ್ದ ದೀಪ್ತಿ ಶರ್ಮಾ ಎಮ್‌ಆರ್‌ಎಫ್ ಟೈರ್ಸ್ ಮಹಿಳಾ T20I ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರ ಮೂರನೇ ಸ್ಥಾನವನ್ನು ಪಡೆದಿದ್ದಾರೆ.
ಇದನ್ನೂ ಓದಿ: ICC Player of the Month: ಐಸಿಸಿ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಮಹಿಳೆ ಹರ್ಮನ್ ಪ್ರೀತ್ ಕೌರ್
ಮಹಿಳಾ ಏಷ್ಯಾ ಕಪ್‌ನಲ್ಲಿ ದೀಪ್ತಿ ಶರ್ಮಾ ಆಟ ಅದ್ಭುತವಾಗಿದೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 27 ರನ್ ಗೆ ಮೂರು ವಿಕೆಟ್, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 13 ರನ್ ಗೆ 2 ವಿಕೆಟ್, ಥಾಯ್ಲೆಂಡ್ ವಿರುದ್ಧದ ಪಂದ್ಯದಲ್ಲಿ 10 ರನ್ ಗೆ 2 ವಿಕೆಟ್ ಕಬಳಿಸಿದ್ದಾರೆ.
ಸದ್ಯ ಉತ್ತಮ ಫಾರ್ಮ್ ಹೊರತಾಗಿಯೂ, ಶ್ರೇಯಾಂಕದಲ್ಲಿ ಶರ್ಮಾಗಿಂತ ಇಬ್ಬರು ಇಂಗ್ಲಿಷ್ ಆಟಗಾರರು ಮುಂದಿದ್ದಾರೆ, ಸಾರಾ ಗ್ಲೆನ್ ಎರಡನೇ ಸ್ಥಾನದಲ್ಲಿದ್ದರೆ, ಸೋಫಿ ಎಕ್ಲೆಸ್ಟೋನ್ ಇನ್ನೂ ಮೊದಲ ಸ್ಥಾನ ಅಲಂಕರಿಸಿದ್ದಾರೆ.
ಭಾರತದ ಜೆಮಿಮಾ ರಾಡ್ರಿಗಸ್ ಅವರು MRF ಟೈರ್ಸ್ T20I ಬ್ಯಾಟಿಂಗ್ ಶ್ರೇಯಾಂಕದ ಅಗ್ರ ಹತ್ತರಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಇನ್ನು ಶಫಾಲಿ ವರ್ಮಾ ಮತ್ತು ನ್ಯೂಜಿಲೆಂಡ್ ದಂತಕಥೆ ಸುಜಿ ಬೇಟ್ಸ್ ಆರನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಈ ತಿಂಗಳ ಆರಂಭದಲ್ಲಿ ಶ್ರೀಲಂಕಾ ವಿರುದ್ಧದ ಭಾರತದ ಏಷ್ಯಾ ಕಪ್ ಪಂದ್ಯದಲ್ಲಿ ರೋಡ್ರಿಗಸ್ 76 ರನ್ ಗಳಿಸಿದರು. ಇತ್ತೀಚಿನ ಪಂದ್ಯಗಳಲ್ಲಿ ಅವರು ಉತ್ತಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ.
ಇದನ್ನೂ ಓದಿ: Women’s Asia Cup 2022: ಭಾರತ ಪರ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಸ್ಮೃತಿ ಮಂಧಾನ
MRF ಟೈರ್ಸ್ ಮಹಿಳೆಯರ T20I ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಐದು ಸ್ಥಾನಗಳು ಬದಲಾಗದೆ ಉಳಿದಿವೆ. ಬೆತ್ ಮೂನಿ ಅವರು ಅಗ್ರಸ್ಥಾನದಲ್ಲಿ ಉಳಿದಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.