ಓವಲ್ (ಲಂಡನ್): ಐಸಿಸಿ ವಿಶ್ವಕಪ್ 2019 ರ 14 ನೇ ಪಂದ್ಯವು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಆರಂಭವಾಗಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.  



COMMERCIAL BREAK
SCROLL TO CONTINUE READING

ವಿಶ್ವಕಪ್ 2019ರಲ್ಲಿ ಜೂನ್ 5ರಂದು ನಡೆದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಭಾರತ, ಆಸೀಸ್ ವಿರುದ್ಧವೂ ಗೆಲುವಿನ ಓಟ ವಿಸ್ತರಿಸುವ ಲೆಕ್ಕಾಚಾರದಲ್ಲಿದೆ. ಹಾಗಾಗಿಯೇ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಭರ್ಜರಿ ಆಟ ಆರಂಭಿಸಿದೆ.


ಮೊದಲ ಪಂದ್ಯದ ಗೆಲುವಿನ ರೂವಾರಿ ರೋಹಿತ್ ಶರ್ಮ ಮತ್ತೊಮ್ಮೆ ಎರಡನೇ ಪಂದ್ಯದಲ್ಲಿಯೂ ಕೇಂದ್ರ ಬಿಂದುವಾಗಿದ್ದಾರೆ. 2011ರ ವಿಶ್ವಕಪ್ ವಿಜೇತ ಎಂ.ಎಸ್.ಧೋನಿ, ಕೆ.ಎಲ್.ರಾಹುಲ್ ಮಾತ್ತು ಹಾರ್ದಿಕ್ ಪಾಂಡ್ಯ ಸಹ ಉತ್ತಮ ಆಲ್ ರೌಂಡರ್ ಆಗಿ ಹೊರಹೊಮ್ಮಿದ್ದಾರೆ. ಆಸ್ಟ್ರೇಲಿಯಾ ತಂಡದ ನಿರ್ವಹಣೆಯನ್ನು ಚೆನ್ನಾಗಿ ಅರಿತಿರುವ ಭಾರತ ತಂಡಕ್ಕೆ ಜಸ್ಪ್ರೀತ್ ಬುರ್ಮಾ ಮತ್ತು ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ನೆರವಾಗಲಿದೆ. 


ಮತ್ತೊಂದೆಡೆ ಆಸ್ಟ್ರೇಲಿಯಾ ಕೂಡ ಉತ್ತಮ ಸ್ಥಾನದಲ್ಲಿದ್ದು, ಮೊದಲ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ತನ್ನ ಮೊದಲ ಪಂದ್ಯದಲ್ಲಿ ಆಫ್ಘಾನಿಸ್ತಾನದ ವಿರುದ್ಧ ಏಳು ವಿಕೆಟ್ ಗಳ ಭರ್ಜರಿ ಗೆಲುವಿನ ಬಳಿಕ, ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 15 ರನ್ ಗಳ ಗೆಲುವು ಸಾಧಿಸಿ ಮುನ್ನಡೆ ಸಾಧಿಸಿದೆ. ಹೀಗಾಗಿ ಇಂದು ನಡೆಯುತ್ತಿರುವ ಭಾರತ vsಆಸ್ಟ್ರೇಲಿಯ ಪಂದ್ಯ ಭಾರೀ ಕುತೂಹಲ ಮೂಡಿಸಿದೆ.