Pakistan Semifinal Dream : 2023ರ ವಿಶ್ವಕಪ್‌ನಲ್ಲಿ ಎಲ್ಲಾ ಪವಾಡಗಳು ನಡೆಯುತ್ತಿವೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅತ್ಯುತ್ತಮ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಪಾಕಿಸ್ತಾನ ಕೂಡ ಇದೇ ಪರಿಸ್ಥಿತಿ ಎದುರಿಸುತ್ತಿದೆ. ಇನ್ನು ಕೆಲವು ಪವಾಡಗಳು ನಡೆದರೆ ಪಾಕಿಸ್ತಾನ ಸೆಮಿಫೈನಲ್ ಆಡುವ ನಿರೀಕ್ಷೆಯಿದೆ ಎನ್ನುತ್ತಾರೆ ಕ್ರೀಡಾ ವಿಶ್ಲೇಷಕರು.  


COMMERCIAL BREAK
SCROLL TO CONTINUE READING

ಪ್ರಸ್ತುತ ದಕ್ಷಿಣ ಆಫ್ರಿಕಾ, ಭಾರತ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ICC ODI ವಿಶ್ವಕಪ್ 2023 ರಲ್ಲಿ ಅಗ್ರ 4 ರಲ್ಲಿವೆ. ಶ್ರೀಲಂಕಾ 5ನೇ ಸ್ಥಾನದಲ್ಲಿದೆ. ಆಡಿರುವ ಆರು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದಿರುವ ಪಾಕಿಸ್ತಾನ 4 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಪಾಕಿಸ್ತಾನ ಇನ್ನೂ ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಆಡಬೇಕಾಗಿದೆ. ಹೀಗಿರುವಾಗ ಪಾಕಿಸ್ತಾನದ ಸೆಮಿಸ್ ಅವಕಾಶ ಬಹುತೇಕ ಶೂನ್ಯ ಎನ್ನಲಾಗಿದೆ. ಆದರೆ ಅಸಾಧ್ಯವಾದುದೊಂದು ಸಾಧ್ಯವಾದರೆ, ಪವಾಡಗಳು ನಡೆದರೆ, ಪಾಕಿಸ್ತಾನ ಸೆಮಿಸ್‌ಗೆ ಪ್ರವೇಶಿಸುವ ಸಾಧ್ಯತೆಗಳಿವೆ. ಅದು ಆಗಬೇಕು..ಅಂದರೆ ಪಾಕಿಸ್ತಾನ ಸೆಮಿಸ್ ತಲುಪಬೇಕಬಹುದು. 


ಇದನ್ನೂ ಓದಿ: ಸತತ ಸೋಲುಗಳಿಂದ ಕಂಗೆಟ್ಟಿರುವ ಪಾಕ್ ತಂಡಕ್ಕೆ ಐಸಿಸಿಯಿಂದ ದೊಡ್ಡ ಶಿಕ್ಷೆ! 


ಇನ್ನುಳಿದ ಮೂರು ಪಂದ್ಯಗಳಲ್ಲಿ ಅಂದರೆ ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಗೆಲ್ಲಲೇಬೇಕಾಗಿದೆ. ಹತ್ತು ಅಂಕಗಳನ್ನು ತಲುಪಬೇಕು. ಈ ಮೂರು ಪಂದ್ಯಗಳೊಂದಿಗೆ ರನ್ ರೇಟ್ ಗಣನೀಯವಾಗಿ ಸುಧಾರಿಸಬೇಕು. 


8 ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಉಳಿದಿರುವ ಎಲ್ಲಾ ಪಂದ್ಯಗಳಲ್ಲೂ ಸೋಲಬೇಕು. 4 ಅಂಕ ಹೊಂದಿರುವ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ 8 ಅಂಕ ದಾಟಬಾರದು. ಈ ಸಮೀಕರಣಗಳನ್ನು ಮೀರಿದರೆ ಮಾತ್ರ ಪಾಕಿಸ್ತಾನದ ಸೆಮಿಸ್ ಅವಕಾಶಗಳು ಜೀವಂತವಾಗಿರುತ್ತವೆ. ಇದರರ್ಥ ಪಾಕಿಸ್ತಾನ ಉಳಿದ ಮೂರು ಪಂದ್ಯಗಳನ್ನು ಗೆಲ್ಲುವುದು ಮಾತ್ರವಲ್ಲದೆ ಉಳಿದ ತಂಡಗಳು ಸೋತರೆ ಸೆಮಿಫೈನಲ್‌ಗೆ ಪ್ರವೇಶಿಸಬಹುದು. ಅದೇ ವೇಳೆ ಭಾರತ ಅಗ್ರ 2ರಿಂದ ಕೆಳಗಿಳಿಯಬಾರದು.


ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಬದಲಿಗೆ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದ್ದಾರೆ ಈ ಆಟಗಾರ: ಕೆಎಲ್ ರಾಹುಲ್ ಹೇಳಿಕೆ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.