ICC World Cup 2023: ಒಂದೇ ಹೊಡೆತಕ್ಕೆ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಈ 3 ತಂಡಗಳು!
ಐಸಿಸಿ ವಿಶ್ವಕಪ್ 2023: ಭಾರತ ತಂಡ ಈ ವರ್ಷ ತನ್ನ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ ಆಡಲಿದೆ. ಈ ಐಸಿಸಿ ಪಂದ್ಯಾವಳಿಯು ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದ್ದು, ಇದರ ವೇಳಾಪಟ್ಟಿಯನ್ನು ಶೀಘ್ರವೇ ಪ್ರಕಟವಾಗಲಿದೆ. ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿದ್ದು, ಅದಕ್ಕೂ ಮುನ್ನ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ.
ICC World Cup 2023: ಭಾರತದ ಆತಿಥ್ಯದಲ್ಲಿ ಈ ವರ್ಷ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಟ್ರೋಫಿ ಗೆಲ್ಲಲು ಟೀಂ ಇಂಡಿಯಾ ಪ್ರಬಲ ಸ್ಪರ್ಧಿಯಾಗಿದ್ದು, ಡ್ಯಾಶಿಂಗ್ ಓಪನರ್ ರೋಹಿತ್ ಶರ್ಮಾ ನಾಯಕತ್ವ ವಹಿಸಲಿದ್ದಾರೆ. ಈ ಐಸಿಸಿ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ವಿಶ್ವಕಪ್ ಟೂರ್ನಿಗೂ ಮುನ್ನವೇ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ.
ರೋಹಿತ್ ಮೇಲೆ ದೊಡ್ಡ ಜವಾಬ್ದಾರಿ!
ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಭಾರತ ಆತಿಥ್ಯ ವಹಿಸಲಿದೆ. ಕಳೆದ 12 ವರ್ಷಗಳಿಂದ ಈ ಟೂರ್ನಿ ಗೆಲ್ಲಲು ಟೀಂ ಇಂಡಿಯಾಕ್ಕೆ ಸಾಧ್ಯವಾಗಿಲ್ಲ. ಎಂ.ಎಸ್.ಧೋನಿ ನೇತೃತ್ವದಲ್ಲಿ ಟೀಂ ಇಂಡಿಯಾ 2011ರಲ್ಲಿ ಶ್ರೀಲಂಕಾವನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿತ್ತು. ಇದೀಗ ಮತ್ತೊಮ್ಮೆ ಭಾರತದ ಕೋಟ್ಯಂತರ ಅಭಿಮಾನಿಗಳಿಗೆ ಸಂಭ್ರಮಿಸಲು ದೊಡ್ಡ ಅವಕಾಶವಿದೆ. ರೋಹಿತ್ ಶರ್ಮಾ ಅವರು ಈ ಕನಸನ್ನು ನನಸು ಮಾಡುತ್ತಾರಾ ಅನ್ನೋ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: Sarfaraz Khan: ಆಯ್ಕೆಗಾರರನ್ನು ತರಾಟೆಗೆ ತೆಗೆದುಕೊಂಡ ಸರ್ಫರಾಜ್ ಖಾನ್; ವಿಡಿಯೋ ಹಂಚಿಕೊಂಡು ಆಕ್ರೋಶ!
10 ತಂಡಗಳು ಭಾಗವಹಿಸಲಿವೆ
ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ 10 ತಂಡಗಳು ಭಾಗವಹಿಸಲಿವೆ. ಆತಿಥೇಯ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ, ಅಫ್ಘಾನಿಸ್ತಾನ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶವನ್ನು ಒಳಗೊಂಡಿರುವ 8 ತಂಡಗಳು ನೇರ ಅರ್ಹ ಗಳಸಿಸಿದ್ದರೆ, ಉಳಿದ 2 ತಂಡಗಳಿಗೆ ಕ್ವಾಲಿಫೈಯರ್ ಪಂದ್ಯಗಳು ನಡೆಯುತ್ತಿವೆ.
ಇದನ್ನೂ ಓದಿ: Watch: ವಿಮಾನದಲ್ಲಿ ಧೋನಿಗೆ ಚಾಕಲೇಟ್ ನೀಡಿದ ಗಗನ ಸಖಿ...!
ಈ 3 ತಂಡಗಳು ವಿಶ್ವಕಪ್ ಟೂರ್ನಿಯಿಂದ ಹೊರಕ್ಕೆ!
ವಿಶ್ವಕಪ್ ಅರ್ಹತಾ ಪಂದ್ಯಗಳ ಸಂಪೂರ್ಣ ಫಲಿತಾಂಶ ಇನ್ನೂ ಬರಬೇಕಿದೆ. ಆದರೆ 3 ತಂಡಗಳು ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿವೆ. ಇವುಗಳಲ್ಲಿ ಭಾರತದ ನೆರೆಯ ನೇಪಾಳ ಮತ್ತು ಅಮೆರಿಕ (USA) ಸೇರಿವೆ. ಇದರ ಹೊರತಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತಂಡವು ಐಸಿಸಿ ಪಂದ್ಯಾವಳಿಯ ಮುಖ್ಯ ಗುಂಪಿನ ಅರ್ಹತೆ ಕಳೆದುಕೊಂಡಿದೆ. ನೇಪಾಳ 4 ಪಂದ್ಯಗಳಲ್ಲಿ 3ರಲ್ಲಿ ಸೋತಿದ್ದರೆ, ಅಮೆರಿಕ ತನ್ನ ಎಲ್ಲಾ 3 ಪಂದ್ಯಗಳನ್ನು ಸೋತಿದೆ. ಯುಎಇ ತಂಡ ಕೂಡ ಆಡಿದ ಎಲ್ಲಾ 3 ಪಂದ್ಯಗಳಲ್ಲಿ ಸೋತು ಗ್ರೂಪ್- Bಯಿಂದ ಹೊರಬಿದ್ದಿದೆ. ಅರ್ಹತಾ ಸುತ್ತಿನಲ್ಲಿ 10 ತಂಡಗಳು ಭಾಗವಹಿಸುತ್ತಿವೆ. ಈ ಪೈಕಿ 6 ತಂಡಗಳು ಸೂಪರ್-6ಗೆ ಅರ್ಹತೆ ಪಡೆಯಲಿದ್ದು, ನಂತರ 2 ತಂಡಗಳು ಮುಖ್ಯ ಗುಂಪಿನಲ್ಲಿ ಸ್ಥಾನ ಪಡೆಯಲಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.