ಭಾರತ vs ನ್ಯೂಜಿಲೆಂಡ್ ಪಂದ್ಯಕ್ಕೆ 2019ರ ಅಂಪೈರ್ಸ್! ಇವರಿದ್ದಾಗ 3 ನಾಕೌಟ್ ಪಂದ್ಯಗಳಲ್ಲಿ ಸೋತಿದ್ದ ಟೀಂ ಇಂಡಿಯಾ
Umpires For World Cup Semi-final 2023: ಭಾರತೀಯ ಕ್ರಿಕೆಟ್ ತಂಡವು ಪಂದ್ಯಾವಳಿಗಳಲ್ಲಿ ಎಲ್ಲಾ ಲೀಗ್ ಪಂದ್ಯಗಳನ್ನು ಗೆದ್ದಿದೆ. ಇನ್ನು 5 ಪಂದ್ಯಗಳನ್ನು ಗೆದ್ದ ನ್ಯೂಜಿಲೆಂಡ್ 4ನೇ ಸ್ಥಾನದಲ್ಲಿದೆ. ಮೊದಲ ಸೆಮಿ -ಫೈನಲ್ ಪಂದ್ಯ ಮೊದಲ ಮತ್ತು ನಾಲ್ಕನೇ ತಂಡಗಳ ನಡುವೆ ನಡೆದರೆ, ಎರಡನೇ ಸೆಮಿ -ಫೈನಲ್ ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ತಂಡಗಳ ನಡುವೆ ನಡೆಯಲಿದೆ.
Umpires For World Cup Semi-final 2023: ಏಕದಿನ ವಿಶ್ವಕಪ್ 2023ರ ಲೀಗ್ ಪಂದ್ಯಗಳು ಮುಗಿದಿದ್ದು, ಇದೀಗ ಮೊದಲ ಸೆಮಿ ಫೈನಲ್ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಅಂಪೈರ್’ಗಳಾಗಿ ರಿಚರ್ಡ್ ಇಲಿಂಗ್ವರ್ತ್ ಮತ್ತು ರಾಡ್ ಟಕರ್ ಮೈದಾನದಲ್ಲಿದ್ದರೆ, ಥರ್ಡ್ ಅಂಪೈರ್ ಆಗಿ ಜೋಯೆಲ್ ವಿಲ್ಸನ್ ಕಾರ್ಯ ನಿರ್ವಹಿಸಲಿದ್ದಾರೆ.
ಇದನ್ನೂ ಓದಿ: 2023ರ ವಿಶ್ವಕಪ್’ನಲ್ಲಿ ರನ್ ಸೋರಲು ಬಿಡದೆ ಅತಿ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್ ಯಾರು ಗೊತ್ತಾ?
ಭಾರತೀಯ ಕ್ರಿಕೆಟ್ ತಂಡವು ಪಂದ್ಯಾವಳಿಗಳಲ್ಲಿ ಎಲ್ಲಾ ಲೀಗ್ ಪಂದ್ಯಗಳನ್ನು ಗೆದ್ದಿದೆ. ಇನ್ನು 5 ಪಂದ್ಯಗಳನ್ನು ಗೆದ್ದ ನ್ಯೂಜಿಲೆಂಡ್ 4ನೇ ಸ್ಥಾನದಲ್ಲಿದೆ. ಮೊದಲ ಸೆಮಿ -ಫೈನಲ್ ಪಂದ್ಯ ಮೊದಲ ಮತ್ತು ನಾಲ್ಕನೇ ತಂಡಗಳ ನಡುವೆ ನಡೆದರೆ, ಎರಡನೇ ಸೆಮಿ -ಫೈನಲ್ ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ತಂಡಗಳ ನಡುವೆ ನಡೆಯಲಿದೆ.
ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ 7-7 ಗೆಲುವುಗಳೊಂದಿಗೆ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದೆ. ಪಂದ್ಯಾವಳಿಯ ಎರಡನೇ ಸೆಮಿ -ಫೈನಲ್ ಗುರುವಾರ ಅಂದರೆ ನಾಳೆ ಕೋಲ್ಕತ್ತಾದ ಈಡನ್ ಗಾರ್ಡನ್’ನಲ್ಲಿ ನಡೆಯಲಿದೆ. ಫೈನಲ್ ಪಂದ್ಯವು ನವೆಂಬರ್ 19 ರಂದು ಭಾನುವಾರ ಅಹಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಂದ್ಯಾವಳಿಯ ಲೀಗ್ ಹಂತದಲ್ಲಿ ಅಜೇಯರಾಗಿ ಉಳಿದಿರುವ ಏಕೈಕ ತಂಡ ಆತಿಥೇಯ ಭಾರತ. ರೋಹಿತ್ ಶರ್ಮಾ ನಾಯಕತ್ವದ ಭಾರತೀಯ ತಂಡವು 9 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಗೆದ್ದುಕೊಂಡಿದೆ.
ಇದನ್ನೂ ಓದಿ: ಒಂದೇ ಓವರ್ ನಲ್ಲಿ ಆರು ವಿಕೆಟ್ ಪತನ ! ಇದು ಹ್ಯಾಟ್ರಿಕ್ ಅಲ್ಲ ಡಬಲ್ ಹ್ಯಾಟ್ರಿಕ್ ದಾಖಲೆ
ಇನ್ನು 2019ರ ಸೆಮಿಫೈನಲ್’ನಲ್ಲಿ ಅಂಪೈರ್ ಗಳಾಗಿದ್ದ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ರಾಡ್ ಟಕರ್ ವಿಶ್ವಕಪ್ 2023ರಲ್ಲಿ ಮೊದಲ ಸೆಮಿಫೈನಲ್’ನಲ್ಲಿ ಅಂಪೈರ್’ಗಳಾಗಿದ್ದಾರೆ. ಈ ಇಬ್ಬರು ಅಂಪೈರಿಂಗ್ ಮಾಡಿದ 3 ನಾಕೌಟ್ ಪಂದ್ಯಗಳಲ್ಲೂ ಭಾರತ ಸೋತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.