Anushka Sharma Recaction: ನೆದರ್ಲ್ಯಾಂಡ್ಸ್ ವಿರುದ್ಧದ ವಿಶ್ವಕಪ್ 2023 ಪಂದ್ಯದಲ್ಲಿ, ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವೈಯಕ್ತಿಕ ಸ್ಕೋರ್ 51 ರನ್‌ ಗಳಿಸಿ ಔಟಾದರು. ಈ ಸಂದರ್ಭದಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲದೆ, ಈ ಸಂದರ್ಭದಲ್ಲಿ ಬೇಸರ ಹೊರಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಬ್ಬರದ ನಡುವೆ ಶ್ರೇಷ್ಠ ದಾಖಲೆ ಬರೆದ ಭಾರತ: ವಿಶ್ವಕಪ್ ಇತಿಹಾಸದಲ್ಲೇ ಇದುವರೆಗೆ ಯಾರೂ ಮಾಡದ ದಾಖಲೆ


ಭಾರತೀಯ ಇನ್ನಿಂಗ್ಸ್‌’ನ 29ನೇ ಓವರ್‌’ನಲ್ಲಿ ನೆದರ್ಲೆಂಡ್ಸ್‌’ನ ಎಡಗೈ ಸ್ಪಿನ್ನರ್ ರೋಲೋಫ್ ವ್ಯಾನ್ ಡೆರ್ ಮೆರ್ವೆ ವಿರಾಟ್ ಕೊಹ್ಲಿಯನ್ನು ಬೌಲ್ಡ್ ಮಾಡಿದರು. ವಿರಾಟ್ ಕೊಹ್ಲಿ ಬೌಲ್ಡ್ ಆಗಿದ್ದೇ ತಡ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೇರಿದ್ದ ಫ್ಯಾನ್ಸ್ ಒಂದು ಬಾರಿ ಶಾಕ್’ಗೆ ಒಳಗಾಗಿದ್ದಾರೆ.


ಇದನ್ನೂ ಓದಿ:  CSK ಅಥವಾ RCB.. ಯಾವ ತಂಡದ ಪರ IPL ಆಡುತ್ತೀರಿ?- ಈ ಪ್ರಶ್ನೆಗೆ ರಚಿನ್ ರವೀಂದ್ರ ಕೊಟ್ಟ ಉತ್ತರವೇನು


ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿ ನೆದರ್ಲೆಂಡ್ಸ್ ಗೆ 411 ರನ್ ಗಳ ಗುರಿ ನೀಡಿದೆ. ಭಾರತದ ಬ್ಯಾಟ್ಸ್‌’ಮನ್‌’ಗಳು ನೆದರ್ಲೆಂಡ್ಸ್ ಬೌಲರ್‌’ಗಳನ್ನು ಬೆಂಡೆತ್ತಿರುವುದು ಸುಳ್ಳಲ್ಲ. ಭಾರತದ ಪರ ಶ್ರೇಯಸ್ ಅಯ್ಯರ್ ನಾಲ್ಕನೇ ಏಕದಿನ ಶತಕ ಗಳಿಸಿ 94 ಎಸೆತಗಳಲ್ಲಿ 128 ರನ್ ಗಳಿಸಿದರು. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಕೂಡ 102 ರನ್ ಗಳಿಸಿದರು. ಇದಲ್ಲದೇ ರೋಹಿತ್ ಶರ್ಮಾ 61 ರನ್, ಶುಭಮನ್ ಗಿಲ್ 51 ರನ್, ವಿರಾಟ್ ಕೊಹ್ಲಿ ಕೂಡ 51 ರನ್ ಗಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ