Ricky Ponting Prediction: ಟೀಂ ಇಂಡಿಯಾ ಪ್ರಸ್ತುತ ವಿಶ್ವಕಪ್ ಫೈನಲ್ ಹಂತಕ್ಕೆ ಬಂದು ನಿಂತಿದೆ. ಒಂದೇ ಒಂದು ಪಂದ್ಯವನ್ನೂ ಸೋಲದೆ ಅಜೇಯರಾಗಿ ಫೈನಲ್ ತಲುಪಿದ ಭಾರತಕ್ಕೆ ಇಂದು ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ. 20 ವರ್ಷಗಳ ಬಳಿಕ ಮತ್ತೆ ಉಭಯ ತಂಡಗಳು ಫೈನಲ್’ನಲ್ಲಿ ಹೋರಾಡಲಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸೆಮೀಸ್’ನಲ್ಲಿ ಸೋಲುಂಡು ವಿಶ್ವಕಪ್’ನಿಂದ ಹೊರಬಿದ್ದ ನ್ಯೂಜಿಲೆಂಡ್ ತಂಡಕ್ಕೆ ಸಿಕ್ಕ ಮೊತ್ತ ಎಷ್ಟು ಕೋಟಿ ಗೊತ್ತಾ?


ಇದಕ್ಕೂ ಮುನ್ನ ಆಸೀಸ್ ದಿಗ್ಗಜ ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದು, “ನಾಯಕ ರೋಹಿತ್ ಶರ್ಮಾ ತನ್ನ ತವರು ನೆಲದಲ್ಲಿ ಎರಡನೇ ಬಾರಿ ವಿಶ್ವಕಪ್ ಗೆಲ್ಲಬಲ್ಲರು” ಎಂದು ಭವಿಷ್ಯ ನುಡಿದಿದ್ದಾರೆ.


ವಿಶ್ವಕಪ್ ಆರಂಭದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದ ರಿಕಿ ಪಾಂಟಿಂಗ್, “ರೋಹಿತ್ ಶರ್ಮಾ ಅವರು ಸಂಪೂರ್ಣವಾಗಿ ನಿರಾತಂಕ ನಾಯಕ. ಇದು ಅವರ ಆಟದಲ್ಲೂ ಗೋಚರಿಸುತ್ತದೆ. ಮೈದಾನದ ಒಳಗೆ ಮತ್ತು ಹೊರಗೆ ಅವರು ಅದ್ಭುತ ಬ್ಯಾಟ್ಸ್‌ಮನ್ ಎಂಬುದನ್ನು ನಿರೂಪಿಸುತ್ತಾರೆ” ಎಂದು ಹೇಳಿದ್ದರು.


ಇನ್ನು ಭಾರತ ವಿಶ್ವಕಪ್ ಟೂರ್ನಿಯಲ್ಲಿ 10 ಪಂದ್ಯಗಳನ್ನಾಡಿದ್ದು 10ರಲ್ಲೂ ಭರ್ಜರಿ ಗೆಲುವು ಕಂಡಿದೆ.


ಇದನ್ನೂ ಓದಿ: ಭಾರತದ ಗೆಲುವಿನ ಮಧ್ಯೆ ಶ್ರೇಷ್ಠ ದಾಖಲೆ ಬರೆದ ಶಮಿ: 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಯಾರೂ ಮಾಡಿದರದ ರೆಕಾರ್ಡ್ ಅದು


ಇನ್ನಷ್ಟು ಮಾತನಾಡಿದ ರಿಕಿ ಅವರು, “ವಿರಾಟ್ ತುಂಬಾ ಭಾವನಾತ್ಮಕ ಆಟಗಾರ. ಅವರು ಅಭಿಮಾನಿಗಳ ಮಾತನ್ನು ಕೇಳುತ್ತಾರೆ, ಅವರಿಗೆ ಪ್ರತಿಕ್ರಿಯಿಸುತ್ತಾರೆ. ಅವರಂತಹ ವ್ಯಕ್ತಿಗೆ ಈ ಕಾರ್ಯ ಸ್ವಲ್ಪ ಕಷ್ಟವಾಗುತ್ತಿತ್ತು. ಆದರೆ ರೋಹಿತ್‌’ಗೆ ಅಂತಹದ್ದು ಯಾವುದೂ ಸಹ ತೊಂದರೆಯಾಗುವುದಿಲ್ಲ. ಆತ ಅದ್ಭುತ ಆಟಗಾರ ಮಾತ್ರವಲ್ಲ, ನಾಯಕತ್ವವನ್ನು ಸಹ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಸ್ವಂತ ದೇಶದಲ್ಲಿ ಆಡುವಾಗ ಉತ್ತಮ ಪ್ರದರ್ಶನ ನೀಡಬೇಕೆಂಬ ಒತ್ತಡವಿರುತ್ತದೆ. ಆದರೆ ರೋಹಿತ್ ಅದನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ” ಎಂದು ಹೊಗಳಿದ್ದಾರೆ.  


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.