World Cup 2023: ಬುಧವಾರ ನಡೆದ ವಿಶ್ವಕಪ್ 2023 ಪಂದ್ಯದಲ್ಲಿ ಆಸ್ಟ್ರೇಲಿಯಾ ನೆದರ್ಲೆಂಡ್ಸ್ ತಂಡವನ್ನು 309 ರನ್‌’ಗಳ ಬೃಹತ್ ಅಂತರದಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 399 ರನ್ ಗಳಿಸಿ ನೆದರ್ಲೆಂಡ್ಸ್‌’ಗೆ 400 ರನ್‌’ಗಳ ಗೆಲುವಿನ ಗುರಿ ನೀಡಿತ್ತು.


COMMERCIAL BREAK
SCROLL TO CONTINUE READING

ಆಸ್ಟ್ರೇಲಿಯಾ ಪರ ಗ್ಲೆನ್ ಮ್ಯಾಕ್ಸ್‌ವೆಲ್ 44 ಎಸೆತಗಳಲ್ಲಿ 106 ರನ್‌’ಗಳ ಇನ್ನಿಂಗ್ಸ್ ಆಡಿದರು. ಇದಲ್ಲದೇ, ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ 93 ಎಸೆತಗಳಲ್ಲಿ 104 ರನ್‌’ಗಳ ಬೆಸ್ಟ್ ಇನ್ನಿಂಗ್ಸ್ ಆಡಿದ್ದರು.


ವಿಶ್ವಕಪ್ ಇತಿಹಾಸದಲ್ಲಿ ಅತಿದೊಡ್ಡ ಗೆಲುವು:


ನೆದರ್ಲೆಂಡ್ಸ್ ತಂಡ 21 ಓವರ್‌’ಗಳಲ್ಲಿ 90 ರನ್‌’ಗಳಿಗೆ ಕುಸಿಯಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 309 ರನ್‌’ಗಳ ಭರ್ಜರಿ ಜಯ ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಇದು ವಿಶ್ವಕಪ್‌’ನ ಇತಿಹಾಸದಲ್ಲಿ ಅತಿದೊಡ್ಡ ಗೆಲುವಿನ ವಿಶ್ವ ದಾಖಲೆಯಾಗಿದೆ. 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯ 309 ರನ್‌’ಗಳ ಭರ್ಜರಿ ಜಯ ದಾಖಲಿಸಿದೆ.


ಈ ಮೂಲಕ ಆಸ್ಟ್ರೇಲಿಯಾ ತನ್ನ ಹಳೆಯ ದಾಖಲೆಯನ್ನು ಮುರಿದಿದೆ. ಈ ಹಿಂದೆಯೂ ವಿಶ್ವಕಪ್ ಇತಿಹಾಸದಲ್ಲಿ ರನ್‌’ಗಳ ವಿಷಯದಲ್ಲಿ ಅತಿ ದೊಡ್ಡ ಗೆಲುವಿನ ದಾಖಲೆ ಆಸ್ಟ್ರೇಲಿಯಾದ ಹೆಸರಿನಲ್ಲಿತ್ತು. ಮಾರ್ಚ್ 2015 ರಲ್ಲಿ ನಡೆದ ವಿಶ್ವಕಪ್‌’ನಲ್ಲಿ ಆಸ್ಟ್ರೇಲಿಯಾ 275 ರನ್‌’ಗಳಿಂದ ಅಫ್ಘಾನಿಸ್ತಾನವನ್ನು ಸೋಲಿಸಿತು. ಈ ಪಟ್ಟಿಯಲ್ಲಿ ಭಾರತದ ಹೆಸರು ಮೂರನೇ ಸ್ಥಾನದಲ್ಲಿದೆ. ಮಾರ್ಚ್ 2007 ರಲ್ಲಿ ನಡೆದ ವಿಶ್ವಕಪ್‌’ನಲ್ಲಿ ಭಾರತವು ಬರ್ಮುಡಾವನ್ನು 257 ರನ್‌’ಗಳಿಂದ ಸೋಲಿಸಿತು.


ODI ವಿಶ್ವಕಪ್ ಇತಿಹಾಸದಲ್ಲಿ ಅತಿ ದೊಡ್ಡ ಗೆಲುವು (ರನ್‌’ಗಳ ವಿಷಯದಲ್ಲಿ)


1. ಆಸ್ಟ್ರೇಲಿಯಾ vs ನೆದರ್ಲೆಂಡ್ಸ್ - ಆಸ್ಟ್ರೇಲಿಯಾಗೆ 309 ರನ್‌’ಗಳ ಗೆಲುವು (2023 ವಿಶ್ವಕಪ್)


2. ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ - ಆಸ್ಟ್ರೇಲಿಯಾ 275 ರನ್‌’ಗಳ ಗೆಲುವು (2015 ವಿಶ್ವಕಪ್)


3. ಭಾರತ vs ಬರ್ಮುಡಾ - ಭಾರತ 257 ರನ್‌’ಗಳ ಗೆಲುವು (2007 ವಿಶ್ವಕಪ್)


4. ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ - ದಕ್ಷಿಣ ಆಫ್ರಿಕಾ 257 ರನ್‌’ಗಳ ಗೆಲುವು (2015 ವಿಶ್ವಕಪ್)


5. ಆಸ್ಟ್ರೇಲಿಯಾ vs ನಮೀಬಿಯಾ - ಆಸ್ಟ್ರೇಲಿಯಾ 256 ರನ್‌’ಗಳ ಗೆಲುವು (2003 ವಿಶ್ವಕಪ್)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ