Australia squad for IND vs AUS T20I series: ಇಂದು ಅಂದರೆ ಅಕ್ಟೋಬರ್ 28ರಂದು ಭಾರತ ವಿರುದ್ಧದ ಐದು ಪಂದ್ಯಗಳ T20I ಸರಣಿಗೆ 15 ಸದಸ್ಯರನ್ನೊಳಗೊಂಡ ತಂಡವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ. ICC ಕ್ರಿಕೆಟ್ ವಿಶ್ವಕಪ್ 2023ರ ಮುಕ್ತಾಯದ ನಂತರ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐದು ಪಂದ್ಯಗಳ T20I ಸರಣಿ ನಡೆಯಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪಾಕ್’ನ್ನು ಸೋಲಿಸಿ 'ಜೈ ಶ್ರೀಹನುಮಾನ್' ಎಂದು ಪೋಸ್ಟ್ ಮಾಡಿದ ಆಂಜನೇಯ ಭಕ್ತ ಈ ಕೇಶವ್ ಮಹರಾಜ್ ಯಾರು ಗೊತ್ತಾ?


ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ T20I ಸರಣಿಯು ನವೆಂಬರ್ 23 ರಂದು ವಿಶಾಖಪಟ್ಟಣದಲ್ಲಿ ಪ್ರಾರಂಭವಾಗಲಿದೆ.


ಆಸ್ಟ್ರೇಲಿಯಾದ ನಿಯಮಿತ ನಾಯಕ ಪ್ಯಾಟ್ ಕಮ್ಮಿನ್ಸ್ ವಿಶ್ವಕಪ್ ಮುಕ್ತಾಯದ ನಂತರ ತವರಿಗೆ ಮರಳಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಮ್ಯಾಥ್ಯೂ ವೇಡ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಜೊತೆಗೆ, ಮಿಚೆಲ್ ಮಾರ್ಷ್, ಜೋಶ್ ಹೇಜಲ್‌ವುಡ್, ಕ್ಯಾಮೆರಾನ್ ಗ್ರೀನ್ ಮತ್ತು ಮಿಚೆಲ್ ಸ್ಟಾರ್ಕ್ ಕೂಡ ವಿಶ್ರಾಂತಿ ಪಡೆಯಲಿದ್ದಾರೆ.


ವಿಶ್ವಕಪ್ ತಂಡದ ಸದಸ್ಯರಾದ ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಝಂಪಾ, ಜೋಶ್ ಇಂಗ್ಲಿಷ್, ಸೀನ್ ಅಬಾಟ್ ಮತ್ತು ಟ್ರಾವೆಲಿಂಗ್ ರಿಸರ್ವ್ ತನ್ವೀರ್ ಸಂಘ ಸರಣಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.  


ಆಸ್ಟ್ರೇಲಿಯಾ T20I ತಂಡ:


ಮ್ಯಾಥ್ಯೂ ವೇಡ್ (c), ಜೇಸನ್ ಬೆಹ್ರೆನ್‌ಡಾರ್ಫ್, ಸೀನ್ ಅಬಾಟ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಷ್, ಸ್ಪೆನ್ಸರ್ ಜಾನ್ಸನ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ.


ಇದನ್ನೂ ಓದಿ: ಟಿ20ಯಲ್ಲಿ ಸತತ 6 ಅರ್ಧಶತಕ ಸಿಡಿಸಿದ ಭಾರತೀಯ ಕ್ರಿಕೆಟಿಗ


ಭಾರತ vs ಆಸ್ಟ್ರೇಲಿಯಾ T20I ಸರಣಿ 2023 ಪೂರ್ಣ ವೇಳಾಪಟ್ಟಿ:


  • IND vs AUS 1ನೇ T20I - ನವೆಂಬರ್ 23: ವಿಶಾಖಪಟ್ಟಣ

  • IND vs AUS 2ನೇ T20I - ನವೆಂಬರ್ 26: ತಿರುವನಂತಪುರಂ

  • IND vs AUS 3ನೇ T20I - ನವೆಂಬರ್ 28: ಗುವಾಹಟಿ

  • IND vs AUS 4 ನೇ T20I - ಡಿಸೆಂಬರ್ 1: ನಾಗ್ಪುರ

  • IND vs AUS 5 ನೇ T20I - ಡಿಸೆಂಬರ್ 3: ಹೈದರಾಬಾದ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ