Captain Rohit Sharma Statement: ಟೀಂ ಇಂಡಿಯಾ ನಾಯಕ ಮತ್ತು ಆರಂಭಿಕ ಆಟಗಾರ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ODI ವಿಶ್ವಕಪ್-2023ರ ಸೆಮಿಫೈನಲ್‌’ಗೆ ಟಿಕೆಟ್ ಕಾಯ್ದಿರಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾವನ್ನು 302 ರನ್‌’ಗಳ ಬೃಹತ್ ಅಂತರದಿಂದ ಸೋಲಿಸಿತು. ಇದು ವಿಶ್ವಕಪ್ ಇತಿಹಾಸದಲ್ಲಿ ರನ್‌’ಗಳ ವಿಷಯದಲ್ಲಿ ಎರಡನೇ ಅತಿ ದೊಡ್ಡ ಗೆಲುವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:


ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 357 ರನ್’ಗಳ ಬೃಹತ್ ಮೊತ್ತ ಪೇರಿಸಿತ್ತು. ಆದರೆ ಕೊಟ್ಟ ಗುರಿ ಬೆನ್ನತ್ತಿದ ಶ್ರೀಲಂಕಾ ಆರಂಭದಲ್ಲೇ ಬ್ಯಾಕ್ ಟು ಬ್ಯಾಕ್ ಆಘಾತ ಅನುಭವಿಸಿ, 19.4 ಓವರ್’ಗಳಲ್ಲಿ 55 ರನ್’ಗಳಿಗೆ ಆಲೌಟ್ ಆಯಿತು.


ಇನ್ನು ಈ ಐತಿಹಾಸಿಕ ಗೆಲುವಿನ ಬಳಿಕ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದು, ಮ್ಯಾಚ್ ವಿನ್ನರ್ ಬಗ್ಗೆ ಮಾತನಾಡಿದ್ದಾರೆ.


“ನಾವು ಸೆಮಿಫೈನಲ್’ಗೆ ಅಧಿಕೃತವಾಗಿ ಅರ್ಹತೆ ಪಡೆದಿರುವುದು ಸಂತೋಷದ ವಿಷಯ. ಪ್ರತಿಯೊಬ್ಬರೂ ಸಹ ತಂಡಕ್ಕಾಗಿ ಉತ್ತಮ ಪ್ರಯತ್ನಗಳನ್ನು ಮಾಡಿದ್ದಾರೆ. ಮೊದಲು ಅರ್ಹತೆ ಗಳಿಸಿ ನಂತರ ಸ್ಪಷ್ಟವಾಗಿ ಸೆಮಿಫೈನಲ್ ಮತ್ತು ಫೈನಲ್‌’ಗೆ ತಲುಪುವುದು ನಮ್ಮ ಗುರಿಯಾಗಿತ್ತು. ಈ 7 ಪಂದ್ಯಗಳನ್ನು ನಾವು ಆಡಿದ ರೀತಿ ಅದ್ಭುತವಾಗಿತ್ತು. ಎಲ್ಲರೂ ಕೊಡುಗೆ ನೀಡಿದ್ದಾರೆ” ಎಂದು ಶ್ಲಾಘಿಸಿದ್ದಾರೆ.


“ಕೆಲವೊಂದು ಬಾರಿ ಉತ್ತಮ ರನ್ ಕಲೆ ಹಾಕಲು ಬಯಸಿದಾಗ ಅದೇ ಮಾದರಿಯನ್ನು ನಾವು ಅನುಸರಿಸಬೇಕು. ಈ ಪಿಚ್‌’ನಲ್ಲಿ 350 ಉತ್ತಮ ಸ್ಕೋರ್ ಕಲೆಹಾಕಿದ್ದೇವೆ. ಆದರೆ ನಮ್ಮನ್ನು ಆ ಸ್ಕೋರ್‌’ಗೆ ಕೊಂಡೊಯ್ದ ಬ್ಯಾಟಿಂಗ್ ಯೂನಿಟ್‌’ಗೆ ಹೆಚ್ಚಿನ ಶ್ರೇಯ ಸಲ್ಲುತ್ತದೆ. ಬೌಲರ್‌’ಗಳು ಕೂಡ ತಮ್ಮ ಕಾರ್ಯವನ್ನು ಸ್ಪಷ್ಟವಾಗಿ ಮಾಡಿದ್ದರು. ಶ್ರೇಯಸ್ ಅಯ್ಯರ್ ಮಾನಸಿಕವಾಗಿ ತುಂಬಾ ಸದೃಢ ವ್ಯಕ್ತಿ. ಇಂದು ನೀವು ನೋಡಿದಂತೆ ಮೈದಾನಕ್ಕೆ ಬಂದು ತನಗೆ ತೋಚಿದನ್ನು ಮಾಡಿದ್ದಾನೆ. ಇದನ್ನೇ ನಾವು ಅವರಿಂದ ನಿರೀಕ್ಷಿಸುತ್ತೇವೆ. ತಮ್ಮ ಮುಂದಿರುವ ಸವಾಲನ್ನು ಸ್ವೀಕರಿಸಲು ಸಿದ್ಧ” ಎಂದು ಶ್ರೇಯಸ್ ಈ ಪಂದ್ಯದ ಮ್ಯಾಚ್ ವಿನ್ನರ್ ಇದ್ದಂತೆ ಎಂದು ತೋರಿಸಿದರು.


ಇದನ್ನೂ ಓದಿ: ಲಂಕಾ ವಿರುದ್ಧ ಅಬ್ಬರಿಸಿದ ಶಮಿ ಬಗ್ಗೆ ಶೋಯೆಬ್ ಅಖ್ತರ್ ಹೇಳಿದ್ದು ಹೀಗೆ...


“ಸಿರಾಜ್ ನಮಲ್ಲಿರುವ ಗುಣಮಟ್ಟದ ಬೌಲರ್’ಗಳಲ್ಲಿ ಒಬ್ಬ. ಆತನಲ್ಲಿ ಸಾಕಷ್ಟು ಕೌಶಲ್ಯವಿದೆ. ಪ್ರಸ್ತುತ ನಮ್ಮ ವೇಗದ ಬೌಲರ್’ಗಳ ಗುಣಮಟ್ಟವನ್ನು ಗಮನಿಸಿದರೆ, ಸಾಕಷ್ಟು ಸ್ಟ್ರಾಂಗ್ ಆಗಿದ್ದಾರೆ ಎಂದು ಅನಿಸುತ್ತದೆ. ಒಟ್ಟಿನಲ್ಲಿ ಬೌಲರ್‌’ಗಳು ಮೇಲುಗೈ ಸಾಧಿಸುತ್ತಿರುವುದು ಸಂತಸ ತಂದಿದೆ. ಇದನ್ನು ಹೀಗೆ ಮುಂದುವರೆಸುತ್ತಾರೆ ಎಂಬುದು ನನ್ನ ಭರವಸೆ. ದಕ್ಷಿಣ ಆಫ್ರಿಕಾ ತಂಡ ಉತ್ತಮ ಕ್ರಿಕೆಟ್ ಆಡುತ್ತಿದೆ. ಅವರೊಂದಿಗೆ ಉತ್ತಮ ಹೋರಾಟ ನಡೆಯಲಿದೆ ಎಂದು ಭಾವಿಸುತ್ತೇವೆ” ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.