ಬೆಂಗಳೂರು: ICC ಪುರುಷರ ಕ್ರಿಕೆಟ್ ವಿಶ್ವಕಪ್ 2023 ಆರಂಭವಾಗಿದೆ.  ಕೋಕಾ-ಕೋಲಾ ಇಂಡಿಯಾ ಮತ್ತು ಐ‌ಸಿ‌ಸಿಗಳೆರಡೂ ಜೊತೆಗೂಡಿ ಸುಸ್ಥಿರತೆಯ ಬದ್ಧತೆಯೊಂದಿಗೆ ಕ್ರಿಕೆಟ್‌ಗಾಗಿ ದೇಶದ ಉತ್ಸಾಹವನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿವೆ. ICC ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಪಂದ್ಯದ ಉದ್ಘಾಟನಾ ಸಮಾರಂಭದಲ್ಲಿ, ಕೋಕಾ-ಕೋಲಾ ಇಂಡಿಯಾ ಮತ್ತು ICCಗಳು ಬಳಸಿದ  ಗ್ರಾಹಕ PET ಬಾಟಲಿಗಳಿಂದ ತಯಾರಿಸಿದ ರಾಷ್ಟ್ರೀಯ ಧ್ವಜಗಳನ್ನು ಪ್ರಸ್ತುತ ಪಡಿಸಿದವು. ನೂಲನ್ನು ಉತ್ಪಾದಿಸಲು ಈ PET ಬಾಟಲಿಗಳನ್ನು ಮರುಬಳಕೆ ಮಾಡಲಾಯಿತು, ನಂತರ ಅದನ್ನು ಧ್ವಜಗಳ ತಯಾರಿಕೆಯಲ್ಲಿ ಬಳಸಲಾಯಿತು. ಈ ಧ್ವಜಗಳನ್ನು ಕ್ರೀಡಾಂಗಣಗಳಲ್ಲಿ ಪ್ರತಿ ಪಂದ್ಯ ನಡೆಯುವ ಮೊದಲು 'ರಾಷ್ಟ್ರಗೀತೆಯ ಸಮಾರಂಭ' ದಲ್ಲಿ ಬಳಸಲಾಗುತ್ತದೆ.


COMMERCIAL BREAK
SCROLL TO CONTINUE READING

ಪರಿಸರದ ಜವಾಬ್ದಾರಿಯ ಹೊಸ ಯುಗವನ್ನು ತಿಳಿಸುವುದರ ಸಂಕೇತವಾಗಿ, ಕೋಕಾ-ಕೋಲಾ ಇಂಡಿಯಾ ಭಾಗವಹಿಸುತ್ತಿರುವ ಹತ್ತು ರಾಷ್ಟ್ರಗಳ ರಾಷ್ಟ್ರೀಯ ಧ್ವಜಗಳನ್ನು ಮತ್ತು ಹತ್ತು ICC ಏಕತೆಯ ಧ್ವಜಗಳ ರಚನೆಯನ್ನು ಸಕ್ರಿಯಗೊಳಿಸಿದೆ. ಇದು ಕೋಕಾ-ಕೋಲಾ ಇಂಡಿಯಾವನ್ನು ಕ್ರಿಕೆಟ್ ಕ್ರೀಡೆಯಲ್ಲಿ ಮರುಬಳಕೆಯ PET ಬಾಟಲ್ ಗಳಿಂದ  ತಯಾರಿಸಿದ ರಾಷ್ಟ್ರೀಯ ಧ್ವಜಗಳನ್ನು ಪರಿಚಯಿಸುವ ವಿಶ್ವದ ಮೊದಲ ಕಂಪನಿಯನ್ನಾಗಿಸಿದ್ದು,  ಭವಿಷ್ಯದ ಕಾರ್ಯಗಳಿಗೆ ಪೂರ್ವನಿದರ್ಶನವಾಗಿದೆ.


ಇದನ್ನೂ ಓದಿ- ರಚಿನ್ ರವೀಂದ್ರ ಯಾರು? ಇವರಿಗೂ ನಮ್ಮ ಭಾರತಕ್ಕೂ ಇದೆಯೇ ನಂಟು?


ಸರಿಸುಮಾರು, ಒಂದು ರಾಷ್ಟ್ರೀಯ ಧ್ವಜವನ್ನು ತಯಾರಿಸಲು 11,000 PET ಬಾಟಲಿಗಳನ್ನು ಮತ್ತು ICC ಏಕತೆಯ  ಧ್ವಜವನ್ನು ತಯಾರಿಸಲು ಸುಮಾರು 2000 ಬಾಟಲಿಗಳನ್ನು ಬಳಸಲಾಗಿದೆ. ಮರುಬಳಕೆಯ ನೂಲು ಮತ್ತು ಉಡುಪುಗಳ ತಯಾರಿಕೆಯಲ್ಲಿ ತೊಡಗಿರುವ ಗಣೇಶ ಇಕೋವರ್ಸ್ ಲಿಮಿಟೆಡ್‌ನಿಂದ ಧ್ವಜಗಳನ್ನು ಗೋರಿವೈಸ್ ತಯಾರಿಸಿದೆ. 100 ಕಾರ್ಮಿಕರ ಬದ್ಧ ತಂಡವು ಈ ಅದ್ಭುತವಾದ ಧ್ವಜಗಳಿಗೆ ಜೀವ ತುಂಬಲು 25 ದಿನಗಳು ಮತ್ತು 300 ಕ್ಕೂ ಹೆಚ್ಚು ಗಂಟೆಗಳ ಸಮಯವನ್ನು ಮೀಸಲಿಟ್ಟಿದೆ.


ICC ಪುರುಷರ ಕ್ರಿಕೆಟ್ ವಿಶ್ವಕಪ್ ಇಂಡಿಯಾ 2023 ಗಾಗಿ ಥಮ್ಸ್ ಅಪ್ ಮತ್ತು ಲಿಮ್ಕಾ ಸ್ಪೋರ್ಟ್ಜ್ ಗಳು ಅಧಿಕೃತ ಪಾನೀಯಗಳು ಮತ್ತು ಕ್ರೀಡಾ ಪಾನೀಯಗಳ ಪಾಲುದಾರರಾಗಿದ್ದಾರೆ. ಕೋಕಾ-ಕೋಲಾ ಇಂಡಿಯಾ ವಿಶ್ವ ಕಪ್ ಸಮಯದಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಅಭಿಮಾನಿಗಳು ಮತ್ತು ಗ್ರಾಹಕರ ತೊಡಗಿಸಿಕೊಳ್ಳುವಿಕೆಗಳು ಸೇರಿದಂತೆ ತ್ಯಾಜ್ಯ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲು ಹಲವು ಚಟುವಟಿಕೆಗಳನ್ನು ಕೈಗೊಳ್ಳುತ್ತದೆ. 


ಕೋಕಾ-ಕೋಲಾ ಇಂಡಿಯಾ ಮತ್ತು ನೈಋತ್ಯ ಏಷ್ಯಾದ  ಮಾರ್ಕೆಟಿಂಗ್ ನ ಉಪಾಧ್ಯಕ್ಷರಾದ ಅರ್ನಬ್ ರಾಯ್, "ಎಲ್ಲಾ ಕ್ರೀಡಾಕೂಟಗಳ ಅವಿಭಾಜ್ಯ ಅಂಗವಾಗಿ ಸುಸ್ಥಿರತೆಯ ಪ್ರಯತ್ನಗಳನ್ನು ಬೆಂಬಲಿಸುವ ಧ್ಯೇಯವನ್ನು ಕೋಕಾ ಕೋಲಾ ಹೊಂದಿದೆ. ಈ ಧ್ಯೇಯಕ್ಕೆ ಅನುಗುಣವಾಗಿ, ಇಂದು ICC ಪುರುಷರ ಕ್ರಿಕೆಟ್ ವಿಶ್ವಕಪ್ 2023 ನಲ್ಲಿ ಮರುಬಳಕೆಯ PET ನೊಂದಿಗೆ ಮಾಡಿದ ರಾಷ್ಟ್ರೀಯ ಧ್ವಜಗಳನ್ನು ಅನಾವರಣಗೊಳಿಸಲು ನಾವು ಹೆಮ್ಮೆಪಡುತ್ತೇವೆ. ಈ ಮರುಬಳಕೆಯ ರಾಷ್ಟ್ರೀಯ ಮತ್ತು ICC ಏಕತಾ ಧ್ವಜಗಳೊಂದಿಗೆ ವರ್ತುಲ ಆರ್ಥಿಕತೆಯ ತತ್ವಗಳನ್ನು ಮುನ್ನಡೆಸಲು ನಾವು ಬದ್ಧರಾಗಿದ್ದೇವೆ" ಎಂದರು. 


ಇದನ್ನೂ ಓದಿ- ಪತ್ನಿಗೆ ವಿವಾಹ ವಿಚ್ಛೇದನ ನೀಡಿದ ಕ್ರಿಕೆಟಿಕ ಶಿಖರ್ ಧವನ್!


ಕ್ರೀಡೆಯು ಎರಡೂ ಸಂಸ್ಥೆಗಳ ವ್ಯಕ್ತಿತ್ವಗಳ  ಅವಿಭಾಜ್ಯ ಅಂಗವಾಗಿರುವುದರಿಂದ ಮತ್ತು ಕ್ರಿಕೆಟ್ ಭಾರತದಲ್ಲಿನ ಅತಿದೊಡ್ಡ ಕ್ರೀಡೆಯಾಗಿರುವುದರಿಂದ, ಕೋಕಾ-ಕೋಲಾ ಇಂಡಿಯಾ ಮತ್ತು ICC ಗಳು ಈ ವಿಶ್ವಕಪ್‌ನಲ್ಲಿ ಸುಸ್ಥಿರ ಕ್ರೀಡಾ ಅನುಭವವನ್ನು ತರಲು ಬದ್ಧವಾಗಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.