14 ವರ್ಷಗಳ ಕ್ರಿಕೆಟ್ ಬದುಕು ಅಂತ್ಯ: ವಿಶ್ವಕಪ್ ಮಧ್ಯೆಯೇ ನಿವೃತ್ತಿ ಘೋಷಿಸಿದ 33ರ ಹರೆಯದ ಎಡಗೈ ಫಾಸ್ಟ್ ಬೌಲರ್
England Cricketer David Willey Retirement, cricket news in kannada: 2023 ರ ವಿಶ್ವಕಪ್’ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಕಳಪೆ ಪ್ರದರ್ಶನದಿಂದ ನೊಂದ 33 ವರ್ಷದ ಎಡಗೈ ವೇಗದ ಬೌಲರ್ ಡೇವಿಡ್ ವಿಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿ ನಿವೃತ್ತಿ ಘೋಷಿಸಿದ್ದಾರೆ.
England Cricketer David Willey Retirement: ವಿಶ್ವಕಪ್ ಮಧ್ಯೆಯೇ ಇಂಗ್ಲೆಂಡ್ ಕ್ರಿಕೆಟ್ ಆಟಗಾರ 33 ವರ್ಷದ ಎಡಗೈ ಫಾಸ್ಟ್ ಬೌಲರ್ ಡೇವಿಡ್ ವಿಲ್ಲಿ ನಿವೃತ್ತಿ ಘೋಷಿಸಿದ್ದಾರೆ. ಈ ಟೂರ್ನಿಯಲ್ಲಿ ಐದು ಪಂದ್ಯಗಳಲ್ಲಿ ಸೋತಿರುವ ಇಂಗ್ಲೆಂಡ್ ತಂಡ ಸೆಮಿಫೈನಲ್ ರೇಸ್’ನಿಂದ ಬಹುತೇಕ ಹೊರಗುಳಿದಿದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ 49ನೇ ಸೆಂಚುರಿಗಾಗಿ ಕಾತುರದಿಂದ ಕಾಯುತ್ತಿದ್ದಾನೆ ಪಾಕಿಸ್ತಾನ ಈ ಬ್ಯಾಟ್ಸ್’ಮನ್
2023 ರ ವಿಶ್ವಕಪ್’ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಕಳಪೆ ಪ್ರದರ್ಶನದಿಂದ ನೊಂದ 33 ವರ್ಷದ ಎಡಗೈ ವೇಗದ ಬೌಲರ್ ಡೇವಿಡ್ ವಿಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ (X) ನಲ್ಲಿ ಸುದೀರ್ಘ ಪೋಸ್ಟ್ ಬರೆದು ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ತಂಡದ ತೀಕ್ಷ್ಣ ಬೌಲರ್’ಗಳಲ್ಲಿ ಒಬ್ಬರಾದ ಡೇವಿಡ್ ವಿಲ್ಲಿ ಅವರ ಈ ಹೆಜ್ಜೆಯಿಂದ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ. ಅಕ್ಟೋಬರ್ 29 ರಂದು ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ ಔಟ್ ಮಾಡಿದ್ದು ಇದೇ ಡೇವಿಡ್ ವಿಲ್ಲಿ.
ಇದನ್ನೂ ಓದಿ: ಸಾರಾ ತೆಂಡೂಲ್ಕರ್ ಜೊತೆ ಶುಭ್ಮನ್ ಗಿಲ್ ಡೇಟಿಂಗ್! ಮಾಲ್’ನಲ್ಲಿ ಕಾಣಿಸಿಕೊಂಡ ಪ್ರೇಮಪಕ್ಷಿಗಳ ವಿಡಿಯೋ
“ನಾನು ಈ ದಿನ ಬರಬೇಕೆಂದು ಎಂದಿಗೂ ಬಯಸಿರಲಿಲ್ಲ. ಬಾಲ್ಯದಿಂದಲೂ ಇಂಗ್ಲೆಂಡ್‌ಗಾಗಿ ಕ್ರಿಕೆಟ್ ಆಡುವ ಕನಸು ಹೊಂದಿದ್ದೆ. ಈ ವಿಶ್ವಕಪ್’ನ ಕೊನೆಯಲ್ಲಿ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಹೊಂದುವ ಸಮಯ ಬಂದಿದೆ. ಈ ವಿಷಯವನ್ನು ಬಹಳ ವಿಷಾದದಿಂದ ಹೇಳಲು ಬಯಸುತ್ತೇನೆ. ನಾನು ಇಂಗ್ಲೆಂಡ್ ಜೆರ್ಸಿಯನ್ನು ಬಹಳ ಹೆಮ್ಮೆಯಿಂದ ಧರಿಸುತ್ತೇನೆ ಮತ್ತು ನನ್ನ ಎದೆಯ ಮೇಲಿನ ಬ್ಯಾಡ್ಜ್’ಗಾಗಿ ಎಲ್ಲವನ್ನೂ ನೀಡಿದ್ದೇನೆ. ವಿಶ್ವದ ಕೆಲವು ಅತ್ಯುತ್ತಮ ಆಟಗಾರರನ್ನು ಹೊಂದಿರುವ ವೈಟ್ ಬಾಲ್ ತಂಡದ ಭಾಗವಾಗಲು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ನನ್ನನ್ನು ಬೆಂಬಲಿಸಿದ ನನ್ನ ಇಡೀ ಕುಟುಂಬಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಪೋಸ್ಟ್ ಬರೆದುಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.