“ಟೀಂ ಇಂಡಿಯಾ DRSನ್ನು ತನಗೆ ಬೇಕಾದಂತೆ ಬಳಸುತ್ತಿದೆ”- ಪಾಕ್ ಕ್ರಿಕೆಟಿಗನ ಶಾಕಿಂಗ್ ಹೇಳಿಕೆ ವೈರಲ್
Hasan Raza DRS Statement: ವಿಶ್ವಕಪ್ 2023ರ 37 ನೇ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 243 ರನ್’ಗಳಿಂದ ಸೋಲಿಸಿತು. ಈ ಪಂದ್ಯಾವಳಿಯಲ್ಲಿ ಭಾರತ ಸತತ ಎಂಟನೇ ಗೆಲುವನ್ನು ದಾಖಲಿಸಿದೆ. ಈಡನ್ ಗಾರ್ಡನ್’ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾಕ್ಕೆ 327 ರನ್’ಗಳ ಗುರಿಯನ್ನು ನೀಡಿತ್ತು. ಅದನ್ನು ಬೆನ್ನಟ್ಟಿದ ಎದುರಾಳಿ ತಂಡ ಕೇವಲ 83 ರನ್’ಗಳಿಗೆ ಕುಸಿಯಿತು
Hasan Raza DRS Statement: 2023ರ ವಿಶ್ವಕಪ್’ಗೆ ಆತಿಥ್ಯ ವಹಿಸುತ್ತಿರುವ ಟೀಂ ಇಂಡಿಯಾವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಜಾ ನಿರಂತರವಾಗಿ ದೂರುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಗೆಲುವಿನ ನಂತರ ಹಸನ್ ರಜಾ ಟೀಮ್ ಇಂಡಿಯಾದ ಗೆಲುವಿನ ಹಿಂದಿನ ಕಾರಣ ಡಿ ಆರ್ ಎಸ್’ನ್ನು ತನಗೆ ಬೇಕಾದಂತೆ ಬಳಸಿಕೊಂಡಿರುವುದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ವಿಶ್ವಕಪ್’ನಲ್ಲಿ ಶಮಿ ಪ್ರದರ್ಶನ ಹೇಗಿತ್ತು?- ಪ್ರಶ್ನೆಗೆ ಪತ್ನಿ ಹಸಿನ್ ಜಹಾನ್ ಕೊಟ್ಟ ಉತ್ತರ ಹೀಗಿದ
ವಿಶ್ವಕಪ್ 2023ರ 37 ನೇ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 243 ರನ್’ಗಳಿಂದ ಸೋಲಿಸಿತು. ಈ ಪಂದ್ಯಾವಳಿಯಲ್ಲಿ ಭಾರತ ಸತತ ಎಂಟನೇ ಗೆಲುವನ್ನು ದಾಖಲಿಸಿದೆ. ಈಡನ್ ಗಾರ್ಡನ್’ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾಕ್ಕೆ 327 ರನ್’ಗಳ ಗುರಿಯನ್ನು ನೀಡಿತ್ತು. ಅದನ್ನು ಬೆನ್ನಟ್ಟಿದ ಎದುರಾಳಿ ತಂಡ ಕೇವಲ 83 ರನ್’ಗಳಿಗೆ ಕುಸಿಯಿತು.
ಆದರೆ ಭಾರತದ ಸತತ ಗೆಲುವಿನ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಜಾ ಮತ್ತೊಮ್ಮೆ ಟೀಂ ಇಂಡಿಯಾವನ್ನು ಟಾರ್ಗೆಟ್ ಮಾಡಿದ್ದಾರೆ. ತಂಡವು ಡಿ ಆರ್ ಎಸ್ ಅನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.
ಡಿ ಆರ್ ಎಸ್’ನಲ್ಲಿ ದುರ್ಬಳಕೆ ಆರೋಪ:
2023ರ ವಿಶ್ವಕಪ್’ಗೆ ಆತಿಥ್ಯ ವಹಿಸುತ್ತಿರುವ ಟೀಂ ಇಂಡಿಯಾವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಜಾ ನಿರಂತರವಾಗಿ ದೂರುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಗೆಲುವಿನ ನಂತರ ಹಸನ್ ರಜಾ ಟೀಮ್ ಇಂಡಿಯಾದ ಗೆಲುವಿನ ಹಿಂದಿನ ಕಾರಣ ಡಿ ಆರ್ ಎಸ್’ನ್ನು ತನಗೆ ಬೇಕಾದಂತೆ ಬಳಸಿಕೊಂಡಿರುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಚಿನ್-ವಿರಾಟ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ಅಪ್ಘನ್ ಆಟಗಾರ!
“ನಾನು ನನ್ನ ಅಭಿಪ್ರಾಯವನ್ನು ಮಾತ್ರ ಹಂಚಿಕೊಳ್ಳುತ್ತಿದ್ದೇನೆ. ಈ ವಿಷಯಗಳನ್ನು ಪರಿಶೀಲಿಸಬೇಕು ಎಂದು ನಾನು ಹೇಳುತ್ತಿದ್ದೇನೆ. ಡಿ ಆರ್ ಎಸ್’ನ್ನು ತನಗೆ ಬೇಕಾದಂತೆ ಬಳಸಿಕೊಂಡಿದೆ ಮತ್ತು ಅದು ಸ್ಪಷ್ಟವಾಗಿ ಗೋಚರಿಸುತ್ತದೆ” ಎಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ