Gurkeerat Singh Mann Retirement: 2016 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತದ ಪರ 3 ODI ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಗುರುಕೀರತ್ ಸಿಂಗ್ ಮಾನ್ ಶುಕ್ರವಾರ ಅಂತರರಾಷ್ಟ್ರೀಯ ಮತ್ತು ಭಾರತೀಯ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “ರೋಹಿತ್’ಗೆ ಒತ್ತಾಯವಾಗಿ ನಾಯಕತ್ವ ನೀಡಲಾಗಿದೆ, ಇಲ್ಲದಿದ್ದರೆ…”-ವಿಶ್ವಕಪ್ ಮಧ್ಯೆ ಕ್ಯಾಪ್ಟನ್ಸಿ ಬಗ್ಗೆ ಸೌರವ್ ಗಂಗೂಲಿ ಹೇಳಿದ್ದು ಹೀಗೆ…


ಭಾರತದ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರ ಜೊತೆಗೆ, ಗುರುಕೀರತ್ ಸಿಂಗ್ ಮಾನ್ ಈ ಪಂದ್ಯಗಳಲ್ಲಿ ಆಫ್ ಸ್ಪಿನ್ನರ್ ಆಗಿ 10 ಓವರ್ ಬೌಲ್ ಮಾಡಿದ್ದರು. ಇನ್ನು 2020ರಿಂದ ಐಪಿಎಲ್‌’ನಲ್ಲಿ ಆಡಲು ಸಾಧ್ಯವಾಗದ ಕಾರಣ, ಗುರುಕೀರತ್ ಸಿಂಗ್ ಮಾನ್ ನಿವೃತ್ತರಾಗಲು ನಿರ್ಧರಿಸಿದ್ದಾರೆ.


“ಇಂದು ನನ್ನ ನಂಬಲಾಗದ ಕ್ರಿಕೆಟ್ ಪ್ರಯಾಣದ ಕೊನೆಯ ದಿನ. ಭಾರತವನ್ನು ಪ್ರತಿನಿಧಿಸುವುದು ಒಂದು ಗೌರವ ಮತ್ತು ಸಂತಸ. ನನ್ನನ್ನು ಬೆಂಬಲಿಸಿದ್ದಕ್ಕಾಗಿ ನನ್ನ ಕುಟುಂಬ, ಸ್ನೇಹಿತರು, ತರಬೇತುದಾರರು ಮತ್ತು ಸಹ ಆಟಗಾರರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನನ್ನ ವೃತ್ತಿ ಜೀವನದಲ್ಲಿ ನೀವೆಲ್ಲರೂ ಪ್ರಮುಖ ಪಾತ್ರ ವಹಿಸಿದ್ದೀರಿ” ಎಂದು ಇನ್’ಸ್ಟಾಗ್ರಾಂ ಪೋಸ್ಟ್ ಮಾಡುವ ಮೂಲಕ ನಿವೃತ್ತಿ ವಿಷಯ ತಿಳಿಸಿದ್ದಾರೆ.


ಇದನ್ನೂ ಓದಿ:  ಕೈಯಿಂದಲ್ಲ.. ಬೆನ್ನಿಂದ ಕ್ಯಾಚ್ ಹಿಡಿದ ವಿಕೆಟ್ ಕೀಪರ್! ಕ್ರಿಕೆಟ್ ಇತಿಹಾಸದಲ್ಲೇ ಕಂಡಿರದ ಅತ್ಯುತ್ತಮ ಫೀಲ್ಡಿಂಗ್ ಇದು…


2011ರಲ್ಲಿ ಸಿ.ಕೆ.ನಾಯುಡು ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಜನರ ಗಮನ ಸೆಳೆದಿದ್ದರು. ಇದಾದ ಬಳಿಕ 2015-16ರಲ್ಲಿ ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ದ್ವಿಶತಕವನ್ನೂ ಬಾರಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ