World Cup 2023: ಬಹುದಿನಗಳಿಂದ ಕಾತುರದಿಂದ ಕಾಯುತ್ತಿದ್ದ ವಿಶ್ವಕಪ್ ಅದಾಗಲೇ ಪ್ರಾರಂಭವಾಗಿ, ಟೀಂ ಇಂಡಿಯಾ ತನ್ನ ಎರಡನೇ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಆಡುತ್ತಿದೆ. ಇನ್ನು ಈ ವರದಿಯಲ್ಲಿ ನಾವಿಂದು ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಬೇಕಾದರೆ, ಟೂರ್ನಿಯಲ್ಲಿ ಎಷ್ಟು ಪಂದ್ಯ ಗೆಲ್ಲಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇಂದು ನನಸಾಗುವುದೇ ವಿರಾಟ್ ಕನಸು! ಸಚಿನ್  ಹೆಸರಿನಲ್ಲಿರುವ ಈ ದಾಖಲೆ ಮುರಿಯುತ್ತಾರಾ ಕೊಹ್ಲಿ ? 


ಐಸಿಸಿ ಏಕದಿನ ವಿಶ್ವಕಪ್‌ 2023 ಆರಂಭಗೊಂಡಿದ್ದು, ದಿನೇ ದಿನೇ ಕ್ರೇಜ್‌ ಹೆಚ್ಚಾಗುತ್ತಿದೆ. ಏಕದಿನ ಮಾದರಿಯಲ್ಲಿ ಈ ಬಾರಿ ಟೂರ್ನಿ ನಡೆಯುತ್ತಿದ್ದು, 10 ತಂಡಗಳು ಕಾದಾಡುತ್ತಿವೆ.


ಈ ಬಾರಿ ವಿಶ್ವಕಪ್‌ ವಿಶ್ವಕಪ್‌’ನಲ್ಲಿ 2 ಗುಂಪುಗಳಾಗಿ ವಿಂಗಡಿಸಲಾಗಿಲ್ಲ. ಬದಲಾಗಿ ಎಲ್ಲಾ ತಂಡಗಳೂ ಎಲ್ಲಾ ತಂಡಗಳ ವಿರುದ್ಧ ಪಂದ್ಯವನ್ನಾಡಲಿದೆ. ಇದೇ ಕಾರಣದಿಂದ ಸೆಮಿ ಫೈನಲ್ ತಲುಪಲು ಭಾರತಕ್ಕೆ ಎಷ್ಟು ಪಂದ್ಯಗಳ ಗೆಲುವಿನ ಅಗತ್ಯತೆ ಇದೆ ಎಂದು ನಾವಿಂದು ತಿಳಿಸಲಿದ್ದೇವೆ.


ಈ ವರ್ಷದ ವಿಶ್ವಕಪ್‌ ಟೂರ್ನಿಯಲ್ಲಿ ಪ್ರತಿ ತಂಡವೂ ಸಹ 9 ಪಂದ್ಯಗಳನ್ನು ಆಡಲಿದೆ. ಹೀಗಾಗಿ ಲೀಗ್‌ ಹಂತದಲ್ಲಿ ಬರೋಬ್ಬರಿ 45 ಪಂದ್ಯ ನಡೆಯಲಿದೆ. ಅಂತಿಮವಾಗಿ ಪಾಯಿಂಟ್ ಟೇಬಲ್’ನಲ್ಲಿ ಟಾಪ್‌ 4ರಲ್ಲಿ ಇರುವ 4 ತಂಡಗಳು ಮಾತ್ರ ಸೆಮಿಫೈನಲ್ ತಲುಪಲಿದೆ. ಬಳಿಕ ಫೈನಲ್‌’ಗಾಗಿ 1 ಮತ್ತು 4ನೇ ಸ್ಥಾನದಲ್ಲಿರುವ ತಂಡಗಳು ಕಾದಾಡಿದರೆ, 2 ಮತ್ತು 3ನೇ ಸ್ಥಾನದಲ್ಲಿರುವ ತಂಡಗಳು ಸೆಣಸಾಡಲಿದೆ. ಇಲ್ಲಿ ಗೆದ್ದ 2 ತಂಡಗಳು ಫೈನಲ್‌ ಪ್ರವೇಶಿಸಲಿದೆ.


ಇದನ್ನೂ ಓದಿ: ಇನ್ನೆರಡು ವಾರದಲ್ಲಿ ವರ್ಷದ ಕೊನೆಯ ಚಂದ್ರಗ್ರಹಣ: ಈ 3 ರಾಶಿಯವರಿಗೆ ಧನಸಂಪತ್ತಿನ ಹೊನಲು, ಕೀರ್ತಿ ಜೊತೆ ಆಯಸ್ಸು ವೃದ್ಧಿ


ವಿಶ್ವಕಪ್‌ 2023ರಲ್ಲಿ ಪ್ರತಿ ತಂಡವು 9 ಪಂದ್ಯವನ್ನು ಆಡುತ್ತದೆ. ಈ ವೇಳೆ 9 ಪಂದ್ಯಗಳಲ್ಲಿ ಕನಿಷ್ಠ 7 ಪಂದ್ಯವನ್ನಾದರು ಗೆದ್ದರೆ ಆ ತಂಡ ಸೆಮಿಫೈನಲ್‌ ಹಂತಕ್ಕೆ ತಲುಪುತ್ತದೆ. ಆದರೆ 7 ಪಂದ್ಯವನ್ನು 4ಕ್ಕಿಂತ ಹೆಚ್ಚು ತಂಡಗಳು ಸಮಾನವಾಗಿ ಗೆದ್ದಿದ್ದರೆ ಆಗ ನೆಟ್ ರನ್‌ ರೇಟ್ ಆಧಾರವನ್ನಾಗಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.