ಬೌಂಡರಿ ಲೈನ್’ನಲ್ಲಿ ಎಸಗಿದ ಈ ಕೃತ್ಯಕ್ಕೆ ಐಸಿಸಿಯಿಂದ ದಂಡನೆ! ಸ್ಟಾರ್ ಆಟಗಾರನಿಗೆ ವಿಶ್ವಕಪ್ ಮಧ್ಯೆ ಮುಖಭಂಗ
Rahmanullah Gurbaz Violation of ICC Code of Conduct: ಅಫ್ಘಾನಿಸ್ತಾನದ ಇನ್ನಿಂಗ್ಸ್’ನ 19 ನೇ ಓವರ್’ನಲ್ಲಿ ಗುರ್ಬಾಜ್ ಔಟಾದ ನಂತರ ಬೌಂಡರಿ ಲೈನ್ ಮತ್ತು ಕುರ್ಚಿಯ ಮೇಲೆ ಬ್ಯಾಟ್ ನಿಂದ ಹೊಡೆದಿದ್ದರು. ಇದೇ ಕಾರಣಕ್ಕೆ ಐಸಿಸಿ ಶಿಕ್ಷೆ ವಿಧಿಸಿದೆ.
ODI World Cup 2023: ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ICC ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಅಫ್ಘಾನಿಸ್ತಾನದ ಬ್ಯಾಟ್ಸ್’ಮನ್ ರಹಮಾನುಲ್ಲಾ ಗುರ್ಬಾಜ್ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ. ಆಟಗಾರರು ಮತ್ತು ಬೆಂಬಲ ಸಿಬ್ಬಂದಿಗಾಗಿ ಇರುವ ಐಸಿಸಿ ನೀತಿ ಸಂಹಿತೆಯ ಸೆಕ್ಷನ್ 2.2 ಅನ್ನು ಉಲ್ಲಂಘಿಸಿದ್ದಾರೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿದ್ದ ಸ್ಟಾರ್ ಕ್ರಿಕೆಟಿಗನ ಮೇಲಿನ ನಿಷೇಧ ತೆರವು!
ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್ ರಹಮಾನುಲ್ಲಾ ಗುರ್ಬಾಜ್ ಅವರ ಶಿಸ್ತಿನ ದಾಖಲೆಗೆ ಐಸಿಸಿ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಿದೆ.
ಇದನ್ನೂ ಓದಿ: 13 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್!
ಅಫ್ಘಾನಿಸ್ತಾನದ ಇನ್ನಿಂಗ್ಸ್’ನ 19 ನೇ ಓವರ್’ನಲ್ಲಿ ಗುರ್ಬಾಜ್ ಔಟಾದ ನಂತರ ಬೌಂಡರಿ ಲೈನ್ ಮತ್ತು ಕುರ್ಚಿಯ ಮೇಲೆ ಬ್ಯಾಟ್ ನಿಂದ ಹೊಡೆದಿದ್ದರು. ಇದೇ ಕಾರಣಕ್ಕೆ ಐಸಿಸಿ ಶಿಕ್ಷೆ ವಿಧಿಸಿದೆ. ಗುರ್ಬಾಜ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದರಿಂದ, ಐಸಿಸಿ ಎಲೈಟ್ ಪ್ಯಾನೆಲ್’ನ ಮ್ಯಾಚ್ ರೆಫರಿ ಜೆಫ್ ಕ್ರೋವ್ ನೀಡಿದ ಶಿಕ್ಷೆಗೆ ಔಪಚಾರಿಕ ವಿಚಾರಣೆಯ ಅಗತ್ಯ ಬಂದಿರಲಿಲ್ಲ. ಇನ್ನು ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 69 ರನ್‌ಗಳಿಂದ ಸೋಲಿಸುವ ಮೂಲಕ ಅಫ್ಘಾನಿಸ್ತಾನ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್