World Cup Final 2023 Calculation: ಪ್ರಸ್ತುತ ದೇಶದಲ್ಲಿ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು, ಸದ್ಯ ಅಂತಿಮ ಹಂತ ತಲುಪಿದೆ. ಅಂದಹಾಗೆ ನವೆಂಬರ್ 15 ಮತ್ತು 16ರಂದು ವಿಶ್ವಕಪ್ ಸೆಮಿಫೈನಲ್ ನಡೆಯಲಿದ್ದು, 19ರಂದು ಫೈನಲ್ ಹಣಾಹಣಿ ನಡೆಯಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ICC WorldCup 2023: ವಿಶ್ವದಾಖಲೆ ಮುರಿಯುವ ಸನೀಯದಲ್ಲಿ ಹಿಟ್‍ಮ್ಯಾನ್ ರೋಹಿತ್ ಶರ್ಮಾ..!


ಆದರೆ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ ಮಾಡಿದರೆ ಪಂದ್ಯವನ್ನು ರದ್ದುಗೊಳಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ತಲೆಎತ್ತುವ ಪ್ರಶ್ನೆ ಅಂದ್ರೆ, ಯಾವ ತಂಡ ಫೈನಲ್’ಗೆ ಅರ್ಹತೆ ಪಡೆಯುತ್ತದೆ ಎಂದು.


ಟೀಂ ಇಂಡಿಯಾ ಈ ಬಾರಿಯ ವಿಶ್ವಕಪ್’ನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಅಷ್ಟೇ ಅಲ್ಲದೆ, ಒಂದೇ ಒಂದು ಸೋಲು ಕಾಣದ ಭಾರತ, ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿದೆ. ಪ್ರಸ್ತುತ ಭಾರತದ ನೆಟ್ ರನ್ ರೇಟ್ ಅಧಿಕವಾಗಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.


ಇವೆಲ್ಲದರ ನಡುವೆ, ಸೆಮಿಫೈನಲ್ ಪಂದ್ಯ ನಡೆಯುವ ದಿನ ಮಳೆ ಬಂದು, ಪಂದ್ಯವನ್ನೇ ರದ್ದು ಮಾಡಬೇಕು ಎನ್ನುವ ಪರಿಸ್ಥಿತಿ ಎದುರಾದರೆ ಯಾವ ತಂಡ ಫೈನಲ್’ಗೆ ಪ್ರವೇಶ ಪಡೆಯುತ್ತೆ? ಈ ಬಗ್ಗೆ ನಿಯಮಗಳು ಹೇಳುವುದೇನು? ಇದಕ್ಕೆ ಸಂಬಂಧಿಸಿದ ವರದಿ ಇಲ್ಲಿದೆ.


ವಿಶ್ವಕಪ್ ಸೆಮಿಫೈನಲ್ ಪಂದ್ಯಗಳು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ, ಅದರಲ್ಲಿ ಟೀಂ ಇಂಡಿಯಾ ತನ್ನ ಸೆಮೀಸ್ ಪಂದ್ಯವನ್ನು ಮುಂಬೈ ಮೈದಾನದಲ್ಲಿ ಆಡಲಿದೆ.


ಒಂದು ವೇಳೆ ಸೆಮಿಫೈನಲ್ ದಿನ ಮಳೆಯಾದರೆ ಅಂತ ಆ ಪಂದ್ಯಕ್ಕೆ ಮೀಸಲು ದಿನವನ್ನು ಇರಿಸಲಾಗಿದೆ. ಆದರೆ ಆ ದಿನವೂ ಮಳೆಯಾಗಿ ಪಂದ್ಯ ನಡೆಯೇ ಹೋದಲ್ಲಿ, ಅಂಕಪಟ್ಟಿಯಲ್ಲಿ ಯಾವ ತಂಡ ಹೆಚ್ಚು ಸ್ಕೋರ್ ಮತ್ತು ನೆಟ್ ರನ್ ರೇಟ್ ಹೊಂದಿರುತ್ತದೆಯೋ ಆ ತಂಡ ಫೈನಲ್’ಗೆ ಎಂಟ್ರಿ ಪಡೆಯಲಿದೆ.


ವಿಶ್ವಕಪ್ 2023ರ ಫೈನಲ್ ಪಂದ್ಯವು ಅಹಮದಾಬಾದ್‌’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಸಹ ಮೀಸಲು ದಿನವನ್ನು ಇಡಲಾಗಿದೆ. ಫೈನಲ್ ಮಳೆಯಿಂದಾಗಿ ರದ್ದಾದರೆ ಮರುದಿನ ಅಂದರೆ ನವೆಂಬರ್ 20ರಂದು ಈ  ಪಂದ್ಯವನ್ನು ಆಯೋಜಿಸಲಾಗುತ್ತದೆ.


ಇದನ್ನೂ ಓದಿ: ಶಾಕಿಂಗ್…! ಜಸ್ಪ್ರೀತ್ ಬುಮ್ರಾ ಎಸೆದ ಬಾಲ್ ಹೊಟ್ಟೆಗೆ ಬಡಿದು ಕುಸಿದುಬಿದ್ದ ಟೀಂ ಇಂಡಿಯಾದ ಸ್ಟಾರ್ ಆಟಗಾರ!


ಮೀಸಲು ದಿನವೂ ಮಳೆ ಬಂದು ಪಂದ್ಯ ನಡೆಯದಿದ್ದರೆ ಆಗ ಫೈನಲ್ ತಲುಪಿರುವ 2 ತಂಡಗಳಿಗೆ ಪ್ರಶಸ್ತಿ ಹಂಚಿಕೆ ಆಗಲಿದೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ