IND Vs NZ: ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಮಣಿಸಿದ ಬಳಿಕ ಮೊಹಮ್ಮದ್ ಶಮಿ ಹೇಳಿದ್ದೇನು ಗೊತ್ತಾ?
World Cup 2023: ಭಾರತ vs ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲಿಗೆ ಕೇನ್ ವಿಲಿಯಮ್ಸನ್ ಕ್ಯಾಚ್ ಕೈಬಿಡುವ ಮೂಲಕ ಭಾರತೀಯ ಕ್ರಿಕೆಟ್ ಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದ್ದ ಮೊಹಮ್ಮದ್ ಶಮಿ, ಅದೇ ಓವರ್‌ನಲ್ಲಿ ವಿಲಿಯಮ್ಸನ್ ಮತ್ತು ಟಾಮ್ ಲ್ಯಾಥಮ್ ಅವರನ್ನು ಔಟ್ ಮಾಡುವ ಮೂಲಕ ಮತ್ತೆ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದರು.
World Cup IND Vs NZ: 2023 ರ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಿನ್ನೆ (ನವೆಂಬರ್ 15, 2023) ನಡೆದ ಪಂದ್ಯದಲ್ಲಿ ಭಾರತ 70 ರನ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸುವ ಮೂಲಕ ಫೈನಲ್ ಪಂದ್ಯಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ.
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 4 ವಿಕೆಟ್ ನಷ್ಟಕ್ಕೆ 397 ರನ್ ಗಳಿಸಿ ಎದುರಾಳಿ ತಂಡಕ್ಕೆ ಬೃಹತ್ ಮೊತ್ತದ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 327 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಗೆಲುವಿಗೆ ಬ್ಯಾಟ್ಸ್‌ಮನ್‌ಗಳ ಕೊಡುಗೆ ಮಾತ್ರವಲ್ಲದೆ, ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ ಅದ್ಭುತವಾಗಿತ್ತು. ಈ ಪಂದ್ಯದಲ್ಲಿ ಬರೋಬ್ಬರಿ ಏಳು ವಿಕೆಟ್ ಪಡೆದ ಮೊಹಮ್ಮದ್ ಶಮಿ ವಿಶ್ವಕಪ್‌ನ ನಾಕ್‌ಔಟ್ ಪಂದ್ಯದಲ್ಲಿ ಯಾವುದೇ ಬೌಲರ್ ಕೂಡ ನೀಡ ಅತ್ಯುತ್ತಮ ಪ್ರದರ್ಶನವನ್ನು ನೀಡಿದರು. ಇದರೊಂದಿಗೆ ಹೊಸ ಇತಿಹಾಸ ಸೃಷ್ಟಿಸಿದರು.
ಪಂದ್ಯದ ಬಳಿಕ ಮಾತನಾಡಿದ ಮೊಹಮ್ಮದ್ ಶಮಿ, 'ನಾನು ನನ್ನ ಸರದಿಗಾಗಿ ಕಾಯುತ್ತಿದ್ದೆ. ನಾನು ದೀರ್ಘಕಾಲ ಸೀಮಿತ ಓವರ್‌ಗಳ ಮಾದರಿಯಲ್ಲಿ ಆಡುತ್ತಿರಲಿಲ್ಲ. ಏಕದಿನ ಕೆಟ್‌ನಲ್ಲಿ ನಾವು ಯಾರ್ಕರ್‌ಗಳು, ನಿಧಾನಗತಿಯ ಚೆಂಡುಗಳು ಮತ್ತು ವ್ಯತ್ಯಾಸಗಳ ಬಗ್ಗೆ ಸಾಕಷ್ಟು ಮಾತನಾಡುತ್ತೇವೆ. ಹೊಸ ಚೆಂಡನ್ನು ಸರಿಯಾದ ಸ್ಥಳದಲ್ಲಿ ಪಿಚ್ ಮಾಡುವ ಮೂಲಕ ನಾನು ವಿಕೆಟ್ ಪಡೆಯಲು ಬಯಸುತ್ತೇನೆ. ಹೊಸ ಚೆಂಡಿನಲ್ಲಿ ಸಾಧ್ಯವಾದಷ್ಟು ವಿಕೆಟ್‌ಗಳನ್ನು ಕಬಳಿಸಲು ಪ್ರಯತ್ನಿಸುತ್ತೇನೆ' ಎಂದು ಹೇಳಿದರು.
ಇದನ್ನೂ ಓದಿ- ಕೀವೀಸ್ ವಿರುದ್ಧ ಟೀಂ ಇಂಡಿಯಾಗೆ ಐತಿಹಾಸಿಕ ಗೆಲುವು: ವಿಶ್ವಕಪ್ 2023ರ ಫೈನಲ್’ಗೆ ಅಜೇಯ ‘ಭಾರತ’ ಗ್ರ್ಯಾಂಡ್ ಎಂಟ್ರಿ
ಭಾರತ vs ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲಿಗೆ ಕೇನ್ ವಿಲಿಯಮ್ಸನ್ ಕ್ಯಾಚ್ ಕೈಬಿಡುವ ಮೂಲಕ ಭಾರತೀಯ ಕ್ರಿಕೆಟ್ ಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದ್ದ ಮೊಹಮ್ಮದ್ ಶಮಿ, ಅದೇ ಓವರ್‌ನಲ್ಲಿ ವಿಲಿಯಮ್ಸನ್ ಮತ್ತು ಟಾಮ್ ಲ್ಯಾಥಮ್ ಅವರನ್ನು ಔಟ್ ಮಾಡುವ ಮೂಲಕ ಮತ್ತೆ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದರು.
ಪಂದ್ಯದ ಬಳಿಕ ಈ ಬಗ್ಗೆಯೂ ಮಾತನಾಡಿರುವ ಮೊಹಮ್ಮದ್ ಶಮಿ, ಕೇನ್ ವಿಲಿಯಮ್ಸನ್ ಅವರ ಕ್ಯಾಚ್ ಕೈಬಿಟ್ಟಾಗ ನನಗೆ ತುಂಬಾ ಬೇಸರವಾಯಿತು. ಆ ಸಮಯದಲ್ಲಿ ಆ ಕ್ಯಾಚ್ ಮಿಸ್ ಆಗಬಾರದಿತ್ತು ಎಂದು ತುಂಬಾ ನೋವಾಗಿತ್ತು. ಅವರು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದರು, ರನ್‌ಗಳು ನಿರಂತರವಾಗಿ ದಾಖಲಾಗುತ್ತಿದ್ದವು. ಈ ಸಂದರ್ಭದಲ್ಲಿ ನಾನು ರಿಸ್ಕ್ ತೆಗೆದುಕೊಂಡೆ, ಅವರ ವಿಕೆಟ್ ಪಡೆದೆ. ವಿಕೆಟ್ ಚೆನ್ನಾಗಿತ್ತು ಎಂದು ವಿಲಿಯಮ್ಸನ್ ವಿಕೆಟ್ ಕಬಳಿಸಿದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ- ವಿರಾಟ್ ಸಾಧನೆಗೆ ʼಕ್ರಿಕೆಟ್ ದೇವರʼ ಶುಭ ಸಂದೇಶ..! ಕೊಹ್ಲಿ ಹೊಗಳಿದ ಸಚಿನ್
ಈ ಹಿಂದೆ ಎರಡು ವಿಶ್ವಕಪ್‌ಗಳ ಸೆಮಿಫೈನಲ್‌ನಲ್ಲಿ ಸೋತಿದ್ದ ಭಾರತ:
ಈ ಸಂದರ್ಭದಲ್ಲಿ ಹಿಂದಿನ ವಿಶ್ವಕಪ್ ಪಂದ್ಯಗಳ ಬಗ್ಗೆಯೂ ಮಾತನಾಡಿದ ಮೊಹಮ್ಮದ್ ಶಮಿ, ನಾವು ಈ ಹಿಂದೆ 2015 ಮತ್ತು 2019ರಲ್ಲಿ ಸೆಮಿಫೈನಲ್‌ನಲ್ಲಿ ಸೋತಿದ್ದೇವೆ. ಆದರೆ, ಈ ಬಾರಿ ಹಾಗಾಗುವುದಿಲ್ಲ. ಗೊತ್ತಿಲ್ಲ. ಆದರೆ, ಈಗ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುವೆ ಎಂದು ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.