World Cup 2023 IND vs BAN: ಟೀಂ ಇಂಡಿಯಾದ ಡೇಂಜರಸ್‌ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬಾಂಗ್ಲಾದೇಶದ ವಿರುದ್ಧ ದೊಡ್ಡ ದಾಖಲೆ ಮಾಡಲು ಕೆಲವೇ ಹೆಜ್ಜೆಗಳು ಬಾಕಿ ಉಳಿದಿವೆ. ಕಪಿಲ್ ದೇವ್ ಅವರ 31 ವರ್ಷಗಳ ಹಳೆಯ ದಾಖಲೆಯನ್ನು ಮುರಿಯಬಹುದು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅವರು ಈ ರೆಕಾರ್ಡ್‌ ಮಾಡಬಹುದು. ಪ್ರಸಕ್ತ ವಿಶ್ವಕಪ್ ಸೀಸನ್‌ನಲ್ಲಿ ಇದುವರೆಗೆ ಉತ್ತಮ ಬೌಲಿಂಗ್ ಮಾಡಿದ್ದು, 14 ಪಂದ್ಯಗಳ ನಂತರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಫ್ಘಾನಿಸ್ತಾನದ ವಿರುದ್ಧ ಭಾರತದ ಪ್ಲೇಯಿಂಗ್ 11.. ಈ ಒಂದು ಬದಲಾವಣೆ ಫಿಕ್ಸ್‌..! 


ಹಲವು ತಿಂಗಳ ನಂತರ ಟೀಂ ಇಂಡಿಯಾಗೆ ಮರಳುತ್ತಿರುವ ಜಸ್ಪ್ರೀತ್ ಬುಮ್ರಾ ಪ್ರಸ್ತುತ ಫುಲ್‌ ಫಾರ್ಮ್‌ನಲ್ಲಿದ್ದಾರೆ. 2023ರ ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ನಡೆದ ಮೂರು ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇಲ್ಲಿಯವರೆಗೆ, ಅವರು ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಮಾಡಿರುವ 31 ವರ್ಷಗಳ ಹಳೆಯ ದಾಖಲೆಯ ಮೇಲೆ ಬುಮ್ರಾ ಕಣ್ಣಿಟ್ಟಿದ್ದಾರೆ.


ಜಸ್ಪ್ರೀತ್ ಬುಮ್ರಾ ವಿಶ್ವಕಪ್‌ನಲ್ಲಿ ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ 26 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದಾರೆ. ಅವರ 13ನೇ ವಿಶ್ವಕಪ್ ಪಂದ್ಯ ಬಾಂಗ್ಲಾದೇಶ ವಿರುದ್ಧ ನಡೆಯಲಿದೆ. ಈ ಪಂದ್ಯದಲ್ಲಿ ದಾಖಲೆ ಬರೆಯುವ ಮೂಲಕ ಅವರು ಕಪಿಲ್ ದೇವ್ ಅವರನ್ನು ಹಿಂದಿಕ್ಕಬಹುದು. ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಕಪಿಲ್ ದೇವ್ ಹೆಸರೂ ಸೇರಿದೆ. ಅವರು 1979-1992ರ ಅವಧಿಯಲ್ಲಿ 28 ವಿಕೆಟ್‌ಗಳನ್ನು ಪಡೆದರು. ಅವರನ್ನು ಹಿಂದಿಕ್ಕಲು ಬುಮ್ರಾ ಕೇವಲ 3 ವಿಕೆಟ್‌ಗಳ ಅಂತರದಲ್ಲಿದ್ದಾರೆ. ಮುಂದಿನ ಪಂದ್ಯದಲ್ಲಿ 3 ವಿಕೆಟ್ ಪಡೆದರೆ ಕಪಿಲ್ ದೇವ್ ಅವರನ್ನು ಹಿಂದಿಕ್ಕಲಿದ್ದಾರೆ.


ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು : 


ಜಹೀರ್ ಖಾನ್ - 44


ಜಾವಗಲ್ ಶ್ರೀನಾಥ್ - 44


ಮೊಹಮ್ಮದ್ ಶಮಿ - 31


ಅನಿಲ್ ಕುಂಬ್ಳೆ - 31


ಕಪಿಲ್ ದೇವ್ - 28


ಜಸ್ಪ್ರೀತ್ ಬುಮ್ರಾ - 26


ಇದನ್ನೂ ಓದಿ: ವಿಕೆಟ್ ಕೀಪರ್ ಆಗಿ ಕುಮಾರ ಸಂಗಕ್ಕಾರ ದಾಖಲೆ ಮುರಿದ ಕುಸಾಲ್ ಮೆಂಡಿಸ್! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.