ಪಾಕ್ ವಿರುದ್ಧದ ಪಂದ್ಯದಲ್ಲಿ ಬಾಲ್’ಗೆ ಹೇಳಿದ ಮಂತ್ರ ಯಾವುದೆಂದು ಕೊನೆಗೂ ಬಾಯ್ಬಿಟ್ಟ ಹಾರ್ದಿಕ್ ಪಾಂಡ್ಯ!
Hardik Pandya, India vs Pakistan: ಭಾರತ ತಂಡ 30.3 ಓವರ್’ಗಳಲ್ಲಿ 7 ವಿಕೆಟ್’ಗಳಿಂದ ಪಾಕ್ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 34 ರನ್’ಗಳಿಗೆ 2 ವಿಕೆಟ್ ಪಡೆದಿದ್ದರು. ಅದರಲ್ಲೂ ಒಂದು ಘಟನೆ ಸಾಕಷ್ಟು ವೈರಲ್ ಆಗಿತ್ತು.
Hardik Pandya, India vs Pakistan, World Cup 2023: ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಭಾರತ ತಂಡದ ಶ್ರೇಷ್ಠ ಪ್ರಯಾಣ ಮುಂದುವರಿಯುತ್ತಿದೆ. ಮೊದಲ ಮೂರು ಪಂದ್ಯಗಳಲ್ಲಿ ತಂಡ ಗೆಲುವು ಸಾಧಿಸಿದೆ. ಅಂದಹಾಗೆ ಮೂರನೇ ಪಂದ್ಯ ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 14ರಂದು ಅಹಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿತ್ತು.
ಇದನ್ನೂ ಓದಿ: ಲೆಗ್ ಸ್ಪಿನ್ನರ್ ಸೇರಿ ತಂಡದ 5 ಸ್ಟಾರ್ ಕ್ರಿಕೆಟಿಗರಿಗೆ ತೀವ್ರ ಎದೆನೋವು-ಜ್ವರ
ಭಾರತ ತಂಡ 30.3 ಓವರ್’ಗಳಲ್ಲಿ 7 ವಿಕೆಟ್’ಗಳಿಂದ ಪಾಕ್ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 34 ರನ್’ಗಳಿಗೆ 2 ವಿಕೆಟ್ ಪಡೆದಿದ್ದರು. ಅದರಲ್ಲೂ ಒಂದು ಘಟನೆ ಸಾಕಷ್ಟು ವೈರಲ್ ಆಗಿತ್ತು. ಅದೇನೆಂದರೆ, ಪಾಂಡ್ಯ ತನ್ನ ಕೈಯಲ್ಲಿ ಚೆಂಡನ್ನು ಹಿಡಿದು, ಅದಕ್ಕೆ ಏನೋ ಮಂತ್ರ ಹೇಳಿದಂತೆ ಕಾಣಿಸಿತ್ತು. ಅಷ್ಟೇ ಅಲ್ಲ, ಹೀಗೆ ಪಠಿಸಿದ ನಂತರ ಅವರು ಬೌಲ್ ಮಾಡಿದ್ದು, ತಕ್ಷಣವೇ ಒಂದು ವಿಕೆಟ್ ಉರುಳಿತ್ತು. ಮತ್ತು ಮುಂದಿನ ಎಸೆತದಲ್ಲಿ
ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಪಾಂಡ್ಯ ಏನ್ ಮಾಡಿದ್ರು ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿತ್ತು. ಇದೀಗ ಸ್ವತಃ ಈ ವಿಷಯವನ್ನು ಅವರೇ ಬಹಿರಂಗಪಡಿಸಿದ್ದಾರೆ. ಪಂದ್ಯದ ನಂತರ ಮಾಜಿ ದಿಗ್ಗಜರಾದ ಗೌತಮ್ ಗಂಭೀರ್ ಮತ್ತು ಇರ್ಫಾನ್ ಪಠಾಣ್ ಅವರೊಂದಿಗೆ ಮಾತನಾಡುವಾಗ ಪಾಂಡ್ಯ ಅವರು ತಮ್ಮನ್ನು ನಿಂದಿಸಿಕೊಂಡಿದ್ದಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ.
ಪಾಕಿಸ್ತಾನದ ಇನಿಂಗ್ಸ್’ನ 13 ನೇ ಓವರ್’ನಲ್ಲಿ ವೇಗದ ಬೌಲರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿದ್ದರು. ಮೂರನೇ ಎಸೆತವನ್ನು ಬೌಲಿಂಗ್ ಮಾಡುವ ಮುನ್ನ ಹಾರ್ದಿಕ್ ತನ್ನ ಎರಡೂ ಕೈಗಳಲ್ಲಿ ಚೆಂಡನ್ನು ಹಿಡಿದುಕೊಂಡು ಏನೋ ಹೇಳುತ್ತಿರುವುದು ಕಂಡುಬಂತು. ಏನನ್ನೋ ಹೇಳಿದ ಪಾಂಡ್ಯ ಮೂರನೇ ಎಸೆತವನ್ನು ಬೀಸಿ ಬೌಲ್ಡ್ ಮಾಡಿದ್ದರು. ಇಮಾಮ್ ಉಲ್ ಹಕ್ ಸ್ಟ್ರೈಕ್ ನಲ್ಲಿದ್ದರು. ಆ ಎಸೆತದಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್’ಗೆ ಕ್ಯಾಚಿತ್ತು ಔಟಾದರು.
ಇದನ್ನೂ ಓದಿ: ಬ್ಲೌಸ್ ಬಟನ್ ಹಾಕದೇ ಮೈಮಾಟ ಪ್ರದರ್ಶಿಸಿದ ಪ್ರಿಯಾ ವಾರಿಯರ್: ಕಣ್ಸನ್ನೆ ಬೆಡಗಿಯ ಹಾಟ್ ಲುಕ್’ಗೆ ಫ್ಯಾನ್ಸ್ ಫಿದಾ
ಪಂದ್ಯದ ನಂತರ ಘಟನೆಯ ಕುರಿತು ಬಹಿರಂಗಪಡಿಸಿದ ಹಾರ್ದಿಕ್ , “ನಾನು ನನ್ನೊಂದಿಗೆ ತುಂಬಾ ಸರಳವಾಗಿ ಮಾತನಾಡಿದ್ದೇನೆ. ನಿಜ ಹೇಳಬೇಕೆಂದರೆ ನನ್ನನ್ನು ನಿಂದಿಸಿಕೊಂಡಿದ್ದೇನೆ” ಎಂದು ನಗುತ್ತಾ ಹೇಳಿಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್