India vs South Africa : ತಮ್ಮ 35 ನೇ ಹುಟ್ಟುಹಬ್ಬದಂದು ವಿರಾಟ್ ಕೊಹ್ಲಿ ತನ್ನ ಅಭಿಮಾನಿಗಳಿಗೆ ಅದ್ಭುತ ಉಡುಗೊರೆಯನ್ನು ನೀಡಿದ್ದಾರೆ. ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಅತಿ ಹೆಚ್ಚು ಏಕದಿನ ಶತಕಗಳ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಡೀ ವಿಶ್ವವೇ ವಿರಾಟ್ ಕೊಹ್ಲಿ ಅವರ ಐತಿಹಾಸಿಕ ಶತಕವನ್ನು ಕೊಂಡಾಡುತ್ತಿದೆ. ಆದರೆ ಈ ಆಟಗಾರ ಮಾತ್ರ  ಕೊಹ್ಲಿ  ಸಾಧನೆ ಬಗ್ಗೆ ವಿಚಿತ್ರ ಹೇಳಿಕೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ವಿರಾಟ್ ಕೊಹ್ಲಿ ಐತಿಹಾಸಿಕ ಶತಕ : 
ತನ್ನ ಅಭಿಮಾನಿಗಳಿಗೆ ಸಂತಸದಿಂದ ಸಂಭ್ರಮಿಸುವ ಮತ್ತೊಂದು ಅವಕಾಶವನ್ನು ಕೊಹ್ಲಿ ನಿನ್ನೆ ಪಂದ್ಯದ ಮೂಲಕ ನೀಡಿದ್ದಾರೆ. ನಿನ್ನೆ ದಕ್ಷಿಣ ಆಫ್ರಿಕಾದ ವಿರುದ್ದ ನಡೆದ ಪಂದ್ಯದಲ್ಲಿ ಕೊಹ್ಲಿ 101 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಕೊಹ್ಲಿ ಸಿಡಿಸಿದ ಈ ಶತಕ ಐತಿಹಾಸಿಕವಾಗಿದೆ. ಈ ಶತಕದ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಕೊಹ್ಲಿ ಬದಿಗಟ್ಟಿದ್ದಾರೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಕೊಹ್ಲಿ ಗಳಿಸಿರುವಷ್ಟು ರನ್ ಗಳಿಸಿಲ್ಲ. ಅಂದರೆ ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಗಳಿಸಿರುವ ರನ್ 101.
ಆದರೆ,  ದಕ್ಷಿಣ ಆಫ್ರಿಕಾ ತಂಡದ ಎಲ್ಲಾ ಬ್ಯಾಟ್ಸ್‌ಮನ್‌ಗಳು
ಗಳಿಸಿರುವ ಒಟ್ಟು ರನ್ 83. 


ಇದನ್ನೂ ಓದಿ : ಬ್ಯಾಟಿಂಗ್ ಮಧ್ಯೆಯೇ ರೋಹಿತ್ ರವಾನಿಸಿದ್ದರಂತೆ ಈ ಸಂದೇಶ ! ಗೆಲುವಿಗೆ ಕಾರಣವಾಗಿದ್ದೇ ಈ ಮಂತ್ರ ಎಂದ ಅಯ್ಯರ್


ನಾನೇಕೆ ಅವನನ್ನು ಅಭಿನಂದಿಸಲಿ ಎಂದ ಈ ಆಟಗಾರ : 
ವಿರಾಟ್ ಕೊಹ್ಲಿ ಶತಕದ ಬಗ್ಗೆ ಶ್ರೀಲಂಕಾ ನಾಯಕ ಕುಸಾಲ್ ಮೆಂಡಿಸ್ ಅವರಲ್ಲಿ ಪ್ರಶ್ನಿಸಿದಾಗ ಅವರು ಬಹಳ ವಿಚಿತ್ರವಾಗಿ ಪ್ರತಿಕ್ರಿಯಿಸಿದ್ದಾರೆ. ವಿರಾಟ್ ಕೊಹ್ಲಿ ತಮ್ಮ 49 ನೇ ಏಕದಿನ ಶತಕವನ್ನು ಪೂರ್ಣಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ಅವರನ್ನು  ಅಭಿನಂದಿಸುವಿರಾ ಎಂದು ಕೇಳಿರುವ ಪ್ರಶ್ನೆಗೆ, ನಾನೇಕೆ ಅವರನ್ನು ಅಭಿನಂದಿಸಲಿ' ಎಂದು ಕುಸಾಲ್ ಮೆಂಡಿಸ ನಗಲು ಆರಂಭಿಸಿದ್ದಾರೆ. ಈ  ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 


 


ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಸಾಧ್ಯತೆ ತೀರಾ ಕಡಿಮೆ. ಸೆಮಿಫೈನಲ್‌ಗೆ ಅರ್ಹತೆ ಪಡೆಯಬೇಕಾದರೆ, ಶ್ರೀಲಂಕಾ ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ. ಇನ್ನು ನಾಳೆ  ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ಬಾಂಗ್ಲಾದೇಶದ  ವಿರುದ್ಧ ಸೆಣೆಸಲಿದೆ. ಬಾಂಗ್ಲಾದೇಶ ತಂಡ ಈಗಾಗಲೇ ವಿಶ್ವಕಪ್‌ನಿಂದ ಹೊರಬಿದ್ದಿದೆ.


ಇದನ್ನೂ ಓದಿ : ದಾಖಲೆಗಾಗಿ ಕೊಹ್ಲಿ ನಿಧಾನವಾಗಿ ಆಡ್ತಾರಾ? ನಾಯಕ ರೋಹಿತ್ ಶರ್ಮಾ ಹೇಳಿದ್ದೇನು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews