World Cup 2023: ಪಾಕಿಸ್ತಾನದ ವಿಕೆಟ್‌ ಕೀಪರ್-ಬ್ಯಾಟ್ಸ್‌’ಮನ್ ಮೊಹಮ್ಮದ್ ರಿಜ್ವಾನ್, ಬ್ಯಾಟಿಂಗ್ ಸ್ನೇಹಿ ವಿಕೆಟ್ ಸಿದ್ಧಪಡಿಸಿದ ಹೈದರಾಬಾದ್‌’ನ ಕ್ಯುರೇಟರ್ ಅನ್ನು ಶ್ಲಾಘಿಸಿದ್ದಾರೆ. ಈ ಪಿಚ್’ನಿಂದಲೇ ಅವರಿಗೆ ಶತಕ ಗಳಿಸಲು ಮತ್ತು ವಿಶ್ವಕಪ್‌’ನಲ್ಲಿ ಶ್ರೀಲಂಕಾ ವಿರುದ್ಧ ಅತಿದೊಡ್ಡ ಗುರಿಯನ್ನು ಸಾಧಿಸಲು ಸಹಾಯವಾಯಿತು ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಭಾಗಗಳಲ್ಲಿ ಮುಂದಿನ 3 ದಿನ ಜಲಪ್ರಳಯದ ಭೀತಿ! ಭಾರೀ ಮಳೆ ಜೊತೆ ಗುಡುಗು-ಮಿಂಚು, ಬಿರುಗಾಳಿಯ ಮುನ್ನೆಚ್ಚರಿಕೆ


ರಿಜ್ವಾನ್ 121 ಎಸೆತಗಳಲ್ಲಿ ಅಜೇಯ 131 ರನ್ ಗಳಿಸಿದ ಕಾರಣ ಪಾಕಿಸ್ತಾನ ನಾಲ್ಕು ವಿಕೆಟ್‌’ಗೆ 345 ರನ್ ಗಳಿಸುವ ಮೂಲಕ ವಿಶ್ವಕಪ್‌’ನಲ್ಲಿ ಅತಿದೊಡ್ಡ ಗುರಿಯನ್ನು ಸಾಧಿಸಿದ ಹೊಸ ದಾಖಲೆಯನ್ನು ಮಾಡಿದೆ.


“ರಾವಲ್ಪಿಂಡಿಯಲ್ಲಿ ಪಂದ್ಯ ಆಡುತ್ತಿರುವಂತೆ ಭಾಸವಾಯಿತು. ಪ್ರೇಕ್ಷಕರು ನನಗೆ ಮಾತ್ರವಲ್ಲದೆ ಇಡೀ ತಂಡವನ್ನು ಬೆಂಬಲಿಸಿದರು. ಶ್ರೀಲಂಕಾ ತಂಡಕ್ಕೂ ಬೆಂಬಲ ನೀಡುತ್ತಿದ್ದರು. ಹೈದರಾಬಾದ್ ನ ಪ್ರೇಕ್ಷಕರು ಕ್ರಿಕೆಟ್ ಗೆ ಬೆಂಬಲ ನೀಡಿ ಉಭಯ ತಂಡಗಳನ್ನು ಪ್ರೋತ್ಸಾಹಿಸಿದ್ದು ನನಗೆ ತುಂಬಾ ಖುಷಿ ತಂದಿದೆ” ಎಂದು ಹೈದ್ರಾಬಾದ್ ನ ಆತಿಥ್ಯಕ್ಕೆ ರಿಜ್ವಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಮುನಿರತ್ನ ಭೇಟಿಗೆ ಅವಕಾಶ ಕೇಳಿದ್ದರೆ ನೀಡುತ್ತಿದ್ದೆ, ಸೀನ್ ಕ್ರಿಯೇಟ್ ಮಾಡುವ ಅಗತ್ಯವಿರಲಿಲ್ಲ..!


ರಿಜ್ವಾನ್ ಮತ್ತು ಮತ್ತೊಬ್ಬ ಶತಕವೀರ ಅಬ್ದುಲ್ಲಾ ಶಫೀಕ್ ಅವರ 176 ರನ್ ಜೊತೆಯಾಟವು ಪಾಕಿಸ್ತಾನದ ಗೆಲುವಿಗೆ ಅಡಿಪಾಯ ಹಾಕಿತು. ಫಖರ್ ಜಮಾನ್ ಬದಲಿಗೆ ಶಫೀಕ್ ಅವರನ್ನು ತಂಡದಲ್ಲಿ ಸೇರ್ಪಡೆಗೊಳಿಸಿದ ಆ ನಿರ್ಧಾರ ಸರಿಯಾಗಿದೆ ಎಂದು ಸಾಬೀತಾಯಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.