World Cup 2023, IND vs AFG: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ವಿಶ್ವಕಪ್ 2023 ಪಂದ್ಯವು ಬುಧವಾರ ಅಂದರೆ ಅಕ್ಟೋಬರ್ 11 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಆರಂಭಿಕ ಒತ್ತಡ ಎದುರಿಸಿದ ಭಾರತ ತಂಡ ಏಕಪಕ್ಷೀಯ ಗೆಲುವು ದಾಖಲಿಸಿತ್ತು.


COMMERCIAL BREAK
SCROLL TO CONTINUE READING

ಇದೀಗ ನಾಳೆ ನಡೆಯಲಿರುವ ವಿಶ್ವಕಪ್‌’ನ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೆಣಸಾಡಲಿದೆ. ಇದೇ ಸಂದರ್ಭದಲ್ಲಿ, “ಒಂಬತ್ತು ವಿಭಿನ್ನ ಸ್ಥಳಗಳಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಭಾರತದ ಮುಂದಿರುವ ದೊಡ್ಡ ಸವಾಲು” ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.


ಇದನ್ನೂ ಓದಿ: ವಿಶ್ವಕಪ್’ನಿಂದ ಸಂಪೂರ್ಣವಾಗಿ ಹೊರಬಿದ್ದ ಶುಭ್ಮನ್! 28ರ ಹರೆಯದ ಬ್ಯಾಟ್ಸ್’ಮನ್’ಗೆ ಬದಲಿ ಸ್ಥಾನ


ಚೆಪಾಕ್‌’ನಲ್ಲಿ ನಿಧಾನ ಮತ್ತು ಸ್ಪಿನ್ನರ್ ಸ್ನೇಹಿ ಪಿಚ್ ಬಳಿಕ ನಂತರ, ಈಗ ಟೀಂ ಇಂಡಿಯಾ ಫಿರೋಜ್‌ ಶಾ ಕೋಟ್ಲಾದಲ್ಲಿ ಆಡಬೇಕಾಗಿದೆ.  ಈ ಮೈದಾನದಲ್ಲಿ ಕಳೆದ ವಾರ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವೆ ನಡೆದ ಪಂದ್ಯದಲ್ಲಿ 700 ಕ್ಕೂ ಹೆಚ್ಚು ರನ್ ಗಳಿಸಲಾಗಿತ್ತು.


ಇನ್ನು ಡೆಂಗ್ಯೂ ಜ್ವರದ ಕಾರಣದಿಂದ ಶುಭ್ಮನ್ ಗಿಲ್ ಈ ಬಾರಿಯ ಪಂದ್ಯವನ್ನೂ ಸಹ ಆಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರ ಬದಲಿಯಾಗಿ ರೋಹಿತ್ ಶರ್ಮಾ ಜೊತೆ ಇಶಾನ್ ಕಿಶನ್ ಇನ್ನಿಂಗ್ಸ್ ತೆರೆಯುವ ಸಾಧ್ಯತೆ ಇದೆ.


ಈ ಆಟಗಾರರಿಗೆ ಅವಕಾಶ ನೀಡಲಿರುವ ಕ್ಯಾಪ್ಟನ್ ರೋಹಿತ್!


ಆಸ್ಟ್ರೇಲಿಯಾ ವಿರುದ್ಧ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಕಳಪೆ ಪ್ರದರ್ಶನ ನೀಡಿದ್ದರು. ಇದೇ ಕಾರಣದಿಂದ ಭಾರತಕ್ಕೆ ಉತ್ತಮ ಆರಂಭ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಪಂದ್ಯದಿಂದ ಇವರನ್ನು ಹೊರಗಿಡುವ ಸಾಧ್ಯತೆ ಇದೆ.


ವಿರಾಟ್ ಕೊಹ್ಲಿ ಮೇಲೆ ಅಭಿಮಾನಿಗಳ ಕಣ್ಣು!


ಅಫ್ಘಾನಿಸ್ತಾನದ ದಾಳಿಯನ್ನು ಎದುರಿಸುವುದು ಭಾರತಕ್ಕೆ ಕಷ್ಟವೇನಲ್ಲ. ಮೈದಾನ ಚಿಕ್ಕದಾಗಿರುವುದರಿಂದ ಬೌಂಡರಿ, ಸಿಕ್ಸರ್ ಬಾರಿಸುವ ಸಾಧ್ಯತೆಯೂ ಹೆಚ್ಚಿದೆ. ಇಲ್ಲಿನ ಪಿಚ್’ನ ಸ್ವರೂಪವೂ ಬದಲಾಗಿದೆ. ಈ ಪಂದ್ಯ ವಿರಾಟ್ ಕೊಹ್ಲಿ ಅವರ ಹುಟ್ಟೂರಿನಲ್ಲೇ ನಡೆಯಲಿದ್ದು, ಕಳೆದ ಪಂದ್ಯದಂತೆ ಈ ಬಾರಿಯೂ ಅಬ್ಬರಿಸಲಿದ್ದಾರಾ ಎಂದು ಕಾದುನೋಡಬೇಕಿದೆ.


ಇದನ್ನೂ ಓದಿ: 1 ಎಸೆತದಲ್ಲಿ 13 ರನ್…! ಕ್ರಿಕೆಟ್ ಲೋಕದಲ್ಲೇ ಅಸಾಧ್ಯ ದಾಖಲೆ ಬರೆದು ಅಬ್ಬರಿಸಿದ ಸ್ಟಾರ್ ದಾಂಡಿಗ


ಅಶ್ವಿನ್ ಸ್ಥಾನ ಬದಲಿಗೆ ಶಮಿ!


ಆಸ್ಟ್ರೇಲಿಯಾ ವಿರುದ್ಧ ಭಾರತದ ಬೌಲಿಂಗ್ ಸಂಯೋಜನೆ ಅತ್ಯುತ್ತಮವಾಗಿತ್ತು. ಇನ್ನು ಮಧ್ಯಮ ಓವರ್‌’ಗಳಲ್ಲಿ ಭಾರತ ಆರು ವಿಕೆಟ್‌’ಗಳನ್ನು ಕಬಳಿಸಿತು. ಇನ್ನು ಮುಂದಿನ ಪಂದ್ಯಕ್ಕೆ ಬಹುಶಃ ಆರ್ ಅಶ್ವಿನ್ ಬದಲಿಗೆ ಮೊಹಮ್ಮದ್ ಶಮಿಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.