ಅದ್ದೂರಿ ಗೆಲುವಿನ ಮಧ್ಯೆ ಕಳಪೆ ದಾಖಲೆ ಬರೆದ ಭಾರತದ ವೇಗಿ! ಏಷ್ಯಾಕಪ್ ಗೆಲುವಿನ ರೂವಾರಿಯಿಂದ ಸೃಷ್ಟಿಯಾಯ್ತು ಕೆಟ್ಟ ರೆಕಾರ್ಡ್
Mohammad Siraj Shameful Record: ಭಾರತದ ಪರ ವೇಗಿ ಜಸ್ಪ್ರೀತ್ ಬುಮ್ರಾ 39 ರನ್ ನೀಡಿ 4 ವಿಕೆಟ್ ಪಡೆದರು. ಇವರಲ್ಲದೆ ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.
IND vs AFG: ವಿಶ್ವಕಪ್ 2023ರ 9ನೇ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನ ವಿರುದ್ಧ ಅದ್ಭುತ ಜಯ ಸಾಧಿಸಿದೆ. ಆದರೆ ಈ ಮಧ್ಯೆ ಭಾರತೀಯ ಆಟಗಾರನೊಬ್ಬನ ಹೆಸರಿನಲ್ಲಿ ಕಳಪೆ ದಾಖಲೆಯೊಂದು ಸೇರ್ಪಡೆಯಾಗಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ನಾಯಕ ಹಶ್ಮತುಲ್ಲಾ ಶಾಹಿದಿ (80) ಮತ್ತು ಅಜ್ಮತುಲ್ಲಾ (62) ಅವರ ಅರ್ಧಶತಕಗಳ ನೆರವಿನಿಂದ ತಂಡ ನಿಗದಿತ 50 ಓವರ್’ಗಳಲ್ಲಿ 8 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿತು. ಇವರಿಬ್ಬರು ನಾಲ್ಕನೇ ವಿಕೆಟ್’ಗೆ 121 ರನ್‌ಗಳ ಜೊತೆಯಾಟ ನೀಡಿದರು. ಶಾಹಿದಿ 88 ಎಸೆತಗಳಲ್ಲಿ 8 ಬೌಂಡರಿ ಹಾಗೂ 21 ಸಿಕ್ಸರ್’ಗಳನ್ನು ಸಿಡಿಸಿದರು.
ಇದನ್ನೂ ಓದಿ: ಶ್ರೀಲೀಲಾಗಿರುವ ಗುಣಗಳು ಎಲ್ಲಾ ನಟಿಯರಲ್ಲಿ ಇರಬೇಕು : ಕನ್ನಡತಿ ಮೆಚ್ಚಿ ಹೊಗಳಿದ ಕಾಜಲ್
ಭಾರತದ ಪರ ವೇಗಿ ಜಸ್ಪ್ರೀತ್ ಬುಮ್ರಾ 39 ರನ್ ನೀಡಿ 4 ವಿಕೆಟ್ ಪಡೆದರು. ಇವರಲ್ಲದೆ ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.
ಪಂದ್ಯದಲ್ಲಿ ಸ್ಪಿನ್ನರ್ ರವೀಂದ್ರ ಜಡೇಜಾ 8 ಓವರ್ ಬೌಲ್ ಮಾಡಿ 38 ರನ್ ನೀಡಿದರೆ, ಸಿರಾಜ್ 9 ಓವರ್ ಬೌಲ್ ಮಾಡಿ 76 ರನ್ ನೀಡಿದರು. ಆದರೆ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಇದು ಏಕದಿನದಲ್ಲಿ ಸಿರಾಜ್ ಅವರ ಜಂಟಿ ಅತ್ಯಂತ ದುಬಾರಿ ಸ್ಪೆಲ್ ಆಗಿದೆ. 2019 ರಲ್ಲಿ ಅಡಿಲೇಡ್ ಓವಲ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಅವರು 10 ಓವರ್’ಗಳಲ್ಲಿ 76 ರನ್’ಗಳನ್ನು ನೀಡಿದ್ದರು.
ಇದರೊಂದಿಗೆ ಮೊಹಮ್ಮದ್ ಸಿರಾಜ್ ವಿಶ್ವಕಪ್’ನ ಇನ್ನಿಂಗ್ಸ್’ವೊಂದರಲ್ಲಿ ಅತಿ ಹೆಚ್ಚು ರನ್ ನೀಡಿದ ಭಾರತೀಯ ಬೌಲರ್’ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಪಟ್ಟಿಯ ಅಗ್ರಸ್ಥಾನದಲ್ಲಿ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಇದ್ದಾರೆ. ನಂತರದ ಸ್ಥಾನಗಳಲ್ಲಿ ಜಾವಗಲ್ ಶ್ರೀನಾಥ್, ಕರ್ಸನ್ ಘಾವ್ರಿ ಇದ್ದಾರೆ.
ಇದನ್ನೂ ಓದಿ: ನಾನು ಶತಕ ಬಾರಿಸಲು ಕಾರಣ ಹೈದರಾಬಾದ್’ನ ಈ ವ್ಯಕ್ತಿ! ಪಾಕ್ ಆಟಗಾರನ ಹೇಳಿಕೆ ವೈರಲ್
ಎಕಾನಮಿ ವಿಷಯದಲ್ಲೂ ಈಗ ಸಿರಾಜ್ ಹೆಸರು ಪಟ್ಟಿಗೆ ಸೇರ್ಪಡೆಯಾಗಿದೆ. ಚಾಹಲ್ (2019 ರಲ್ಲಿ ಇಂಗ್ಲೆಂಡ್ ವಿರುದ್ಧ 8.8) ವಿಶ್ವಕಪ್ ಪಂದ್ಯಗಳಲ್ಲಿ ಅತ್ಯಧಿಕ ಎಕಾನಮಿ ರೇಟ್ ಹೊಂದಿರುವ ಭಾರತೀಯ ಬೌಲರ್’ಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಶ್ರೀನಾಥ್ ಅವರು ಎರಡನೇ ಸ್ಥಾನದಲ್ಲಿದ್ದರೆ, ಮೊಹಮ್ಮದ್ ಸಿರಾಜ್ ಅವರ ಹೆಸರು ಮೂರನೇ ಸ್ಥಾನದಲ್ಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.