Mohammed Shami, World Cup 2023: ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ವಿಶ್ವಕಪ್ 2023 ಪಂದ್ಯದಲ್ಲಿ ಟೀಂ ಇಂಡಿಯಾ 302 ರನ್’ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್’ನಲ್ಲಿ ಮಿಂಚಿದ್ದ ಟೀಂ ಇಂಡಿಯಾ ಲಂಕಾವನ್ನು ಕೇವಲ 55 ರನ್’ಗಳಿಗೆ ಕಟ್ಟಿಹಾಕಿದೆ.


COMMERCIAL BREAK
SCROLL TO CONTINUE READING

ಎರಡನೇ ಇನಿಂಗ್ಸ್‌ನ ಮೊದಲ ಎಸೆತದಲ್ಲಿ ಬುಮ್ರಾ ಶ್ರೀಲಂಕಾಗೆ ಮೊದಲ ಹೊಡೆತ ನೀಡಿದರು. ಇದಾದ ನಂತರ ಬೌಲಿಂಗ್ ಮಾಡಲು ಬಂದ ಸಿರಾಜ್ ಕೂಡ ಶ್ರೀಲಂಕಾ ಬ್ಯಾಟ್ಸ್‌ಮನ್‌’ಗಳಿಗೆ ಆಡಲು ಅವಕಾಶವೇ ನೀಡಲಿಲ್ಲ. ಈ ಬಳಿಕ ಎಂಟ್ರಿಕೊಟ್ಟ ಶಮಿ ಒಂದಲ್ಲ ಎರಡಲ್ಲ ನಾಲ್ಕು ವಿಕೆಟ್’ಗಳನ್ನು ಕಿತ್ತರು. ಅದೂ ಕೂಡ ಕೇವಲ 1 ರನ್ ನೀಡಿ…


ಇದನ್ನೂ ಓದಿ:  ಜಸ್ಟ್ 12 ರನ್’ನಿಂದ ಮಿಸ್ ಆಯ್ತು ವಿರಾಟ್ 49ನೇ ಶತಕ; ಆದ್ರೂ ಜಗತ್ತಿನ 5 ವಿಶ್ವದಾಖಲೆಗಳು ಬ್ರೇಕ್


ಪ್ರಸ್ತುತ ವಿಶ್ವಕಪ್’ನಲ್ಲಿ ಉತ್ತಮ ಫಾರ್ಮ್ ಕಾಯ್ದುಕೊಂಡಿರುವ ಮೊಹಮ್ಮದ್ ಶಮಿ, ಆಡಿದ 3 ಪಂದ್ಯಗಳಲ್ಲಿ ಒಟ್ಟು 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರ ಫಾರ್ಮ್ ಇದೇ ರೀತಿ ಮುಂದುವರಿದರೆ ಶೀಘ್ರದಲ್ಲೇ 2023ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಲಿದ್ದಾರೆ.


ಅಂದಹಾಗೆ ಇದೀಗ ಮೊಹಮ್ಮದ್ ಶಮಿ ಏಕದಿನ ವಿಶ್ವಕಪ್‌’ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಏಕದಿನ ವಿಶ್ವಕಪ್‌’ನಲ್ಲಿ ಭಾರತ ಪರ ಶಮಿ ಇದುವರೆಗೆ 45 ವಿಕೆಟ್‌’ಗಳನ್ನು ಉರುಳಿಸಿದ್ದಾರೆ.


ಇದನ್ನೂ ಓದಿ: ಗಿಲ್‌ ಶತಕ ಮಿಸ್‌ ಮಾಡಿಕೊಂಡಿದ್ದಕ್ಕೆ ಬೇಸಗೊಂಡ ಸಾರಾ ತೆಂಡೂಲ್ಕರ್..! ವಿಡಿಯೋ ವೈರಲ್


ವಿಶ್ವಕಪ್‌’ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್:


ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅವರ 44 ವಿಕೆಟ್ ಸಾಧನೆಯನ್ನು ಹಿಂದಿಕ್ಕಿದ ಮೊಹಮ್ಮದ್ ಶಮಿ, ವಿಶ್ವಕಪ್‌’ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಕೇವಲ 14 ವಿಶ್ವಕಪ್ ಪಂದ್ಯಗಳಲ್ಲಿ 45 ವಿಕೆಟ್ ಪಡೆದಿದ್ದಾರೆ ಶಮಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.