PAK vs AUS: ಶುಕ್ರವಾರ ಬೆಂಗಳೂರಿನಲ್ಲಿ ಪಾಕಿಸ್ತಾನ ತಂಡವು ಕಠಿಣ ಪ್ರಯತ್ನ ಮಾಡಿದರೂ ಆಸ್ಟ್ರೇಲಿಯಾದ ವಿರುದ್ಧ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 62 ರನ್‌’ಗಳಿಂದ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸುತ್ತು. ಆದರೆ ಈ ಪಂದ್ಯದಲ್ಲಿ ಸೋಲುಂಡ ಬಳಿಕ ಪಾಕ್ ನಾಯಕ ಬಾಬರ್ ಅಜಂ ಹೇಳಿಕೆಯೊಂದನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “ಕಸಿದುಕೊಂಡಿದ್ದೇನೆ ಕ್ಷಮಿಸು…”-ಶತಕ ಸಿಡಿಸಿದ ಬಳಿಕ ಜಡೇಜಾ ಬಳಿಕ ಕ್ಷಮೆ ಕೇಳಿದ ಕೊಹ್ಲಿ! ಕಾರಣ…?


ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ವಿಶ್ವಕಪ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್‌’ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 367 ರನ್‌’ಗಳ ಬೃಹತ್ ಸ್ಕೋರ್ ಮಾಡಿತು. ಇದಾದ ಬಳಿಕ ಪಾಕಿಸ್ತಾನ ತಂಡ 300ರ ಗಡಿ ದಾಟಿದರೂ ಅಂತಿಮವಾಗಿ ಪಂದ್ಯವನ್ನು 62 ರನ್‌’ಗಳಿಂದ ಕಳೆದುಕೊಂಡಿತು. ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡ 45.3 ಓವರ್‌’ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 305 ರನ್‌’ಗಳಿಗೆ ಆಲೌಟ್ ಆಯಿತು.


ಸೋಲಿನ ನಂತರ ಮಾತನಾಡಿದ ಪಾಕಿಸ್ತಾನದ ನಾಯಕ ಬಾಬರ್ ಆಜಮ್, “ನಾವು ಬೌಲಿಂಗ್’ನಲ್ಲಿ ಉತ್ತಮವಾಗಿಲ್ಲ. ಡೇವಿಡ್ ವಾರ್ನರ್ ಅವರಂತಹ ಶ್ರೇಷ್ಠ ಬ್ಯಾಟ್ಸ್‌’ಮನ್‌’ನ ಕ್ಯಾಚ್ ಅನ್ನು ನೀವು ಕೈಬಿಟ್ಟರೆ, ಅವರು ನಿಮ್ಮನ್ನು ಬಿಡುವುದಿಲ್ಲ. ಇದು ದೊಡ್ಡ ಸ್ಕೋರಿಂಗ್ ಮೈದಾನವಾಗಿದೆ” ಎಂದಿದ್ದಾರೆ.


ಕೊನೆಯ ಕೆಲವು ಓವರ್‌’ಗಳಲ್ಲಿ ನಾವು ಪುನರಾಗಮನ ಮಾಡಿದ ರೀತಿಯಲ್ಲಿ, ಸಂಪೂರ್ಣ ಕ್ರೆಡಿಟ್ ವೇಗದ ಬೌಲರ್‌’ಗಳು ಮತ್ತು ಸ್ಪಿನ್ನರ್‌’ಗಳಿಗೆ ಸಲ್ಲುತ್ತದೆ ಎಂದು ಬಾಬರ್ ಹೇಳಿದರು.


ಇದನ್ನೂ ಓದಿ: 4 ರನ್’ಗೆ 2 ವಿಕೆಟ್ ಕಿತ್ತ ಕಿಲಾಡಿ! ಮಾವನ ದಾಖಲೆಯನ್ನೇ ಮುರಿದು ವಿಶ್ವದಾಖಲೆ ಬರೆದ ಸ್ಟಾರ್ ವೇಗಿ


“ನಾವು ಗುರಿಯನ್ನು ಬೆನ್ನಟ್ಟಲು ಹೊರಟಾಗ ನನ್ನ ಗುರಿಯನ್ನು ಮುಟ್ಟಬೇಕೆಂಬ ನನ್ನ ಸಂದೇಶವು ಎಲ್ಲರಿಗೂ ಸ್ಪಷ್ಟವಾಗಿತ್ತು.  ಮಧ್ಯಮ ಓವರ್‌’ಗಳಲ್ಲಿ ದೊಡ್ಡ ಜೊತೆಯಾಟ ಕಾಣಲಿಲ್ಲ. ಮೊದಲ 10 ಓವರ್‌’ಗಳಲ್ಲಿ ಚೆಂಡನ್ನು ಮತ್ತು ಮಧ್ಯಮ ಓವರ್‌’ಗಳಲ್ಲಿ ಬ್ಯಾಟ್‌ನೊಂದಿಗೆ ಉತ್ತಮವಾಗಿರಬೇಕಾದ ಅಗತ್ಯವಿದೆ” ಎಂದು ಹೇಳಿದರು.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.