ನವದೆಹಲಿ : ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರು ಪಾಕಿಸ್ತಾನಿ ಟಿವಿ ಸುದ್ದಿ ವಾಹಿನಿಯೊಂದರಲ್ಲಿ ಗಂಭೀರ ಆರೋಪ ಮಾಡಿದ್ದಾರೆ. 2023 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಂಚನೆ ಮಾಡಿದೆ ಎಂದು ಆರೋಪಿಸಿದ್ದಾರೆ. ಬಿಸಿಸಿಐ/ಐಸಿಸಿ ಸೀಮ್ ಮತ್ತು ಸ್ವಿಂಗ್ ಚಲನೆಗೆ ಸಹಾಯ ಮಾಡಲು ಭಾರತಕ್ಕೆ ವಿಭಿನ್ನ ಚೆಂಡುಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 


COMMERCIAL BREAK
SCROLL TO CONTINUE READING

ಪಾಕಿಸ್ತಾನಿ ಕ್ರಿಕೆಟಿಗ ಹಸನ್ ರಜಾ ಬಗ್ಗೆ ಬಹುತೇಕ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿರುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದ ವಿಶ್ವದಾಖಲೆ ಹಸನ್ ರಜಾ ಹೆಸರಿನಲ್ಲಿದೆ. ಅವರು 14 ವರ್ಷಕ್ಕೆ ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ಪದಾರ್ಪಣೆ ಮಾಡಿದರು. 


ಇದನ್ನೂ ಓದಿ: ತಿರುಪತಿಗೆ ಭೇಟಿ ನೀಡಿದ ರಿಷಬ್ ಪಂತ್ ಮತ್ತು ಅಕ್ಸರ್ ಪಟೇಲ್ 


ಹಸನ್ ರಜಾ ಅವರು ಕ್ರಿಕೆಟ್ ಮೈದಾನದಲ್ಲಿ ಅದ್ಭುತ‌  ದಾಖಲೆಗಳನ್ನ ಬರೆಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ತಂಡದಿಂದ ಹೊರಗುಳಿಯ ಬೇಕಾಯಿತು. ಬಹುಶಃ 14 ವರ್ಷದ ಮಗು ಕೂಡ ಯೋಚಿಸಲು ಸಾಧ್ಯವಾಗದಂತಹ ಹೇಳಿಕೆಯನ್ನು ಈಗ 41 ನೇ ವಯಸ್ಸಿನ ಹಸನ್ ರಜಾ ಅವರು ನೀಡಿದ್ದಾರೆ.


ಶ್ರೀಲಂಕಾ ವಿರುದ್ಧ ಭಾರತದ ಗೆಲುವಿನ ನಂತರ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಜಾ ವಿಚಿತ್ರವಾದ ಹೇಳಿಕೆ ನೀಡಿದ್ದಾರೆ. ಭಾರತ ತಂಡಕ್ಕೆ ಬೌಲಿಂಗ್ ಮಾಡಲು ಐಸಿಸಿ ಪ್ರತ್ಯೇಕ ಚೆಂಡುಗಳನ್ನು ಒದಗಿಸುತ್ತದೆ ಎಂದು ಅವರು ಹೇಳುತ್ತಾರೆ. ಪಾಕಿಸ್ತಾನದ ವಾಹಿನಿಯೊಂದರಲ್ಲಿ ಮಾತನಾಡುತ್ತಿದ್ದ ಅವರು, 'ಭಾರತೀಯ ಆಟಗಾರರು ಬ್ಯಾಟಿಂಗ್ ಮಾಡುವಾಗ ಉತ್ತಮವಾಗಿ ಆಡುತ್ತಾರೆ. ಆದರೆ ಭಾರತ ಬೌಲಿಂಗ್ ಮಾಡಲು ಪ್ರಾರಂಭಿಸಿದಾಗ, ಶಮಿ ಮತ್ತು ಸಿರಾಜ್ ಅವರಂತಹ ಬೌಲರ್‌ಗಳು ದಕ್ಷಿಣ ಆಫ್ರಿಕಾದಲ್ಲಿ ನಾವು ನೋಡುವ ಅಲನ್ ಡೊನಾಲ್ಡ್‌ನಂತೆ ಕಾಣುತ್ತಾರೆ. ನಾವು ದಕ್ಷಿಣ ಆಫ್ರಿಕಾದಲ್ಲಿ ಆಡುತ್ತಿದ್ದ ಚೆಂಡು ಒಂದೆಡೆ ಮಿಂಚಿದೆಯೇ ಹೊರತು ಮತ್ತೊಂದೆಡೆ ಅಲ್ಲ. ಚೆಂಡು ರಿವರ್ಸ್ ಆಗುತ್ತಿತ್ತು, ಸೀಮ್ ಸ್ವಿಂಗ್ ಆಗುತ್ತಿತ್ತು ಎಂದಿದ್ದಾರೆ.


ಆದರೆ ಇಲ್ಲಿ ಚೆಂಡನ್ನು ಬದಲಾಯಿಸಲಾಗಿದೆ ಎಂದು ನಾನು ಭಾವಿಸುತ್ತೇನೆ. ಐಸಿಸಿ ಅಥವಾ ಬಿಸಿಸಿಐ ಬೇರೆಯೇ ಚೆಂಡನ್ನು ನೀಡುತ್ತಿದೆ. ಈ ಚೆಂಡುಗಳನ್ನು ಪರೀಕ್ಷಿಸಬೇಕು ಎಂದು ಹಸನ್ ಹೇಳಿದ್ದಾರೆ.


ಇದನ್ನೂ ಓದಿ: ಪಡೆದದ್ದು ಕೇವಲ ಒಂದೇ ವಿಕೆಟ್ ! ಆದರೆ ಬರೆದದ್ದು ಮಹಾನ್ ದಾಖಲೆ ! ಯಾರು ಆ ಆಟಗಾರ ? 


ಹಸನ್ ರಜಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಜನರು ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಉತ್ತರಿಸಿದ್ದಾರೆ. ಇದು ಗಂಭೀರವಾದ ಕ್ರಿಕೆಟ್ ಶೋ ಹೌದಾ? ಇಲ್ಲ ಅಂತಾದರೆ ದಯವಿಟ್ಟು ಇಂಗ್ಲಿಷ್‌ನಲ್ಲಿ 'ವ್ಯಂಗ್ಯ' ಮತ್ತು 'ಹಾಸ್ಯ' ಎಂದು ಬರೆಯಿರಿ. ಈಗಾಗಲೇ ಉರ್ದುವಿನಲ್ಲಿ ಬರೆದಿರಬಹುದು. ಆದರೆ ನನಗೆ ಓದಲು/ಅರ್ಥವಾಗುತ್ತಿಲ್ಲ ಎಂದು ಕಾಮೆಂಟ್‌ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.