ಇಂದು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ 8ನೇ ಲೀಗ್ ಪಂದ್ಯ ನಡೆಯುತ್ತಿದೆ. ಶ್ರೀಲಂಕಾ ನಾಯಕ ದಾಸುನ್ ಶನಕ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಶ್ರೀಲಂಕಾ ತಂಡದ ಕಸುನ್ ರಜಿತಾ ಬದಲಿಗೆ ಸ್ಪಿನ್ನರ್ ಮಹಿಷ್ ದೀಕ್ಷಣ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.


COMMERCIAL BREAK
SCROLL TO CONTINUE READING

ಏಷ್ಯಾಕಪ್ ವೇಳೆ ಉಂಟಾದ ಗಾಯದಿಂದಾಗಿ ದೀಕ್ಷಾನಾ ಪಂದ್ಯದಿಂದ ಹಿಂದೆ ಸರಿದಿದ್ದರು. ಈ ಕಾರಣದಿಂದಾಗಿ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಸೇರಿಸಲಾಗಿಲ್ಲ. ಇಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ದೀಕ್ಷಣಾ ಅವರನ್ನು ಸೇರಿಸಿಕೊಳ್ಳಲಾಗಿದೆ. ಅದೇ ರೀತಿ ಪಾಕಿಸ್ತಾನ ತಂಡದಲ್ಲೂ ಬದಲಾವಣೆ ಮಾಡಲಾಗಿದೆ. ಅಬ್ದುಲ್ಲಾ ಶಫೀಕ್ ಬದಲಿಗೆ ಫಕರ್ ಜಮಾನ್ ಅವರನ್ನು ನೇಮಕ ಮಾಡಲಾಗಿದೆ.


ಇದನ್ನೂ ಓದಿ-ಏಷ್ಯಾಕಪ್’ಗೆ ತಪ್ಪುತ್ತಿಲ್ಲ ವರುಣನ ಕಾಟ: ಫೈನಲ್ ಪಂದ್ಯ ಕೊಲಂಬೋದಿಂದ ಈ ಮೈದಾನಕ್ಕೆ ಶಿಫ್ಟ್!


ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಶತಾಬ್ ಖಾನ್, ಅಬ್ದುಲ್ಲಾ ಶಫೀಕ್, ಇಮಾಮ್ ಉಲ್ ಹಕ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಶಾಹೀನ್ ಶಾ ಆಫ್ರಿದಿ, ಹರೀಶ್ ರಾಫ್, ಹಸನ್ ಅಲಿ.


ಶ್ರೀಲಂಕಾ ತಂಡ: ದಸುನ್ ಶನಕ (ನಾಯಕ), ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್/ಉಪನಾಯಕ), ಪಡುಮ್ ನಿಶಾಂಕ, ಕುಸಲ್ ಜನಿತ್ ಪೆರೇರಾ, ಸರಿತ್ ಅಸಲಂಗ, ಧನಂಜಯ ಡಿ ಸಿಲ್ವ, ಸತೀರ ಸಮರವಿಕ್ರಮ, ದುನಿತ್ ವೆಲ್ಲಾಲ ಕೆ, ಮಹೇಶ್ ದೀಕ್ಷಣ, ಮದೀಶ ಪತಿರಣ, ದಿಲ್ಶನ್ ಮಧುಶಂಕ.


ಪಾಕಿಸ್ತಾನ ಈಗಾಗಲೇ ನೆದರ್ಲೆಂಡ್ಸ್ ವಿರುದ್ಧದ ಪಂದ್ಯವನ್ನು ಗೆದ್ದಿದೆ. ಅದೇ ರೀತಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ 102 ರನ್ ಗಳಿಂದ ಸೋತಿತ್ತು.


ಉಭಯ ತಂಡಗಳು ಇದಕ್ಕೂ ಮುನ್ನ 156 ಏಕದಿನ ಪಂದ್ಯಗಳನ್ನು ಆಡಿವೆ. ಇದರಲ್ಲಿ ಪಾಕಿಸ್ತಾನ 92 ಹಾಗೂ ಶ್ರೀಲಂಕಾ 59 ಪಂದ್ಯಗಳನ್ನು ಗೆದ್ದಿವೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯಾಕಪ್ ನಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯವನ್ನು ಡಕ್ ವರ್ತ್ ಲೂಯಿಸ್ ವಿಧಾನದಲ್ಲಿ 2 ವಿಕೆಟ್ ಗಳಿಂದ ಗೆದ್ದು ಫೈನಲ್ ಗೆ ಲಗ್ಗೆ ಇಟ್ಟಿತ್ತು.


ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ 8 ಪಂದ್ಯಗಳನ್ನು ಆಡಿವೆ. ಇದರಲ್ಲಿ ಪಾಕಿಸ್ತಾನ 7 ಪಂದ್ಯಗಳನ್ನು ಗೆದ್ದಿದೆ. ಆದರೆ, ಶ್ರೀಲಂಕಾ ಒಂದೇ ಒಂದು ಪಂದ್ಯವನ್ನು ಗೆಲ್ಲಲಿಲ್ಲ.


ಶ್ರೀಲಂಕಾ-ಪಾಕಿಸ್ತಾನ ವಿಶ್ವಕಪ್ ದಾಖಲೆಗಳು:


1975 - ಪಾಕಿಸ್ತಾನಕ್ಕೆ 192 ರನ್‌ಗಳ ಜಯ - ನಾಟಿಂಗ್‌ಹ್ಯಾಮ್


1983 - ಪಾಕಿಸ್ತಾನಕ್ಕೆ 50 ರನ್‌ಗಳ ಜಯ - ಸ್ವಾನ್ಸೀ


1983 - ಪಾಕಿಸ್ತಾನಕ್ಕೆ 15 ರನ್‌ಗಳ ಜಯ - ಲೀಡ್ಸ್


1987 - ಪಾಕಿಸ್ತಾನಕ್ಕೆ 11 ರನ್ ಜಯ - ಹೈದರಾಬಾದ್


1987 - ಪಾಕಿಸ್ತಾನಕ್ಕೆ 13 ರನ್ ಜಯ - ಫೈಸಲಾಬಾದ್


1992 - ಪಾಕಿಸ್ತಾನಕ್ಕೆ 4 ವಿಕೆಟ್‌ಗಳ ಜಯ - ಪರ್ತ್


2011 - ಪಾಕಿಸ್ತಾನಕ್ಕೆ 11 ರನ್ ಜಯ - ಕೊಲಂಬೊ


2019 - ಮಳೆಯಿಂದಾಗಿ ಪಂದ್ಯ ರದ್ದು - ಬ್ರಿಸ್ಟಲ್


ಹಿಂದಿನ ದಾಖಲೆಯಂತೆ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ಗೆಲ್ಲುವ ನಿರೀಕ್ಷೆಯಿದೆ.


ಇದನ್ನೂ ಓದಿ-Asia Cup, 2023: ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಸ್ಪೋಟಕ ಶತಕಕ್ಕೆ  ಬೆದರಿದ ಪಾಕ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.