Shoaib Akhtar Statement: ವಿಶ್ವಕಪ್ 2023ರ 18 ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ 62 ರನ್‌’ಗಳಿಂದ ಹೀನಾಯವಾಗಿ ಸೋಲು ಕಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ, ಡೇವಿಡ್ ವಾರ್ನರ್ (163) ಮತ್ತು ಮಿಚೆಲ್ ಮಾರ್ಷ್ (121) ಅವರ ವೇಗದ ಶತಕಗಳ ನೆರವಿನಿಂದ 367 ರನ್‌’ಗಳ ಬೃಹತ್ ಸ್ಕೋರ್ ಮಾಡಿತು. ಆದರೆ ಪಾಕಿಸ್ತಾನ ತಂಡ 305 ರನ್‌’ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನಕ್ಕೆ ಇದು ಸತತ ಎರಡನೇ ಸೋಲಾಗಿದ್ದು, ಈ ಸೋಲಿನ ಬಳಿಕ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಆಟಗಾರರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಹರಿಣಗಳ ಅಬ್ಬರಕ್ಕೆ ಬೆಚ್ಚಿದ ಹಾಲಿ ವಿಶ್ವಚಾಂಪಿಯನ್ ಇಂಗ್ಲೆಂಡ್, 229 ರನ್‌ ಗಳ ಅಂತರದ ಹೀನಾಯ ಸೋಲು 


ಝೀ ನ್ಯೂಸ್ ಜೊತೆ ಮಾತನಾಡಿದ ಶೋಯೆಬ್ ಅಖ್ತರ್, “ಆಸ್ಟ್ರೇಲಿಯಾ ಸೇಡು ತೀರಿಸಿಕೊಂಡಿದೆ. ನಮ್ಮ ಬೌಲರ್‌’ಗಳನ್ನು ಸಂಪೂರ್ಣವಾಗಿ ದಣಿಸಿದ್ದಾರೆ. ಆಸ್ಟ್ರೇಲಿಯಾ ನಮ್ಮನ್ನು ಕೆಟ್ಟದಾಗಿ ಸೋಲಿಸಿತು. ಇದು ನನಗೆ ತುಂಬಾ ನಿರಾಶೆ ತಂದಿದೆ. ಪಾಕಿಸ್ತಾನ ಯಾಕೆ ಹೀಗೆ ಆಡುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಧರ್ಮಶಾಲಾದಲ್ಲಿ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದ ಇಶಾನ್ ಕಿಶನ್’ಗೆ ಜೇನುನೊಣ ಕಡಿತ!


“ನನಗೆ ನಾಚಿಕೆಯಾಗುತ್ತಿದೆ”


ಪಾಕಿಸ್ತಾನಿ ಆಟಗಾರರ ಪ್ರದರ್ಶನದ ಬಗ್ಗೆ ವಾಗ್ದಾಳಿ ನಡೆಸಿದ ಶೋಯೆಬ್, “ಪಾಕಿಸ್ತಾನ ಆಟಗಾರರ ಆಟದ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ. ಒಂದು ಕಾಲದಲ್ಲಿ ನಮ್ಮ ತಂಡದಲ್ಲಿ ಗಲಾಟೆ ನಡೆಯುತ್ತಿತ್ತು. ಅಂದು ನಾವೇ ಪ್ರಾಬಲ್ಯ ಹೊಂದಿದ್ದೆವು, ಆದರೆ ಈಗ ಹಾಗೆ ಕಾಣುತ್ತಿಲ್ಲ. ಇದು ನನಗೆ ತುಂಬಾ ಆಘಾತಕಾರಿಯಾಗಿದೆ” ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.