ಶ್ರೇಷ್ಠ ದಾಖಲೆ ಬರೆದ ಶಮಿಗೆ ಪ್ರಧಾನಿ ಮೋದಿಯ ವಿಶೇಷ ಸಂದೇಶ ! ಏನಿತ್ತು ಆ ಸಂದೇಶದಲ್ಲಿ ?
PM Modi Special Message to Shami:ಶಮಿಯ ಈ ಅದ್ಭುತ ಆಟಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡಾ ತಲೆ ಬಾಗಿದ್ದಾರೆ. ಶಮಿ ಆಟವನ್ನು ಮೆಚ್ಚಿದ ನರೇಂದ್ರ ಮೋದಿ ಅವರಿಗೆ ವಿಶೇಷ ಸಂದೇಶ ನೀಡಿದ್ದಾರೆ.
PM Modi Special Message to Shami : ಈ ಬಾರಿಯ ವಿಶ್ವಕಪ್ ನಲ್ಲಿ ಭಾರತ ತಂಡದ್ದು ಅದ್ಭುತ ಯಾತ್ರೆ. ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಇದೀಗ ಫೈನಲ್ ಪ್ರವೇಶಿಸಿದೆ. ಲೀಗ್ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ, ಇದೀಗ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟಾಗಿದೆ. ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರ ಅದ್ಭುತ ಬೌಲಿಂಗ್ ಮಾಡಿ ನ್ಯೂಜಿಲೆಂಡ್ ನ 7 ಬ್ಯಾಟ್ಸ್ ಮನ್ ಗಳಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ. ಇದರಲ್ಲಿ ಕಿವೀಸ್ ನ ಟಾಪ್-5 ಬ್ಯಾಟ್ಸ್‌ಮನ್‌ಗಳು ಸೇರಿದ್ದರು ಎನ್ನುವುದು ವಿಶೇಷ. ಶಮಿಯ ಈ ಅದ್ಭುತ ಆಟಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡಾ ತಲೆ ಬಾಗಿದ್ದಾರೆ. ಶಮಿ ಆಟವನ್ನು ಮೆಚ್ಚಿದ ನರೇಂದ್ರ ಮೋದಿ ಅವರಿಗೆ ವಿಶೇಷ ಸಂದೇಶ ನೀಡಿದ್ದಾರೆ.
ಶಮಿ ಅಭಿಮಾನಿಯಾದ ಪ್ರಧಾನಿ ಮೋದಿ :
ಪ್ರಧಾನಿ ನರೇಂದ್ರ ಮೋದಿ ಅವರು ಮೊಹಮ್ಮದ್ ಶಮಿಯನ್ನು ಹಾಡಿ ಹೊಗಳಿದ್ದಾರೆ. ಪ್ರಧಾನಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಟೀಂ ಇಂಡಿಯಾ ಗೆಲುವಿಗೆ ಅಭಿನಂದಿಸಿದ್ದಾರೆ. 'ಇಂದಿನ ಸೆಮಿಫೈನಲ್ ಪಂದ್ಯ ತುಂಬಾ ವಿಶೇಷವಾಗಿದೆ. ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಎಂದು ಕೊಂಡಾಡಿದ್ದಾರೆ. ಇನ್ನು ಶಮಿ ಅವರ ಬೌಲಿಂಗ್ ಬಗ್ಗೆ ಕೂಡಾ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಆಟದಲ್ಲಿ ಮತ್ತು ಇಡೀ ಪಂದ್ಯಾವಳಿಯಲ್ಲಿ ಶಮಿ ಬೌಲಿಂಗ್ ರೀತಿಗೆ ಅವರನ್ನು ಕ್ರಿಕೆಟ್ ಪ್ರೇಮಿಗಳು ಮುಂದಿನ ಅನೇಕ ತಲೆಮಾರಿನವರೆಗೆ ಸ್ಮರಿಸುತ್ತಾರೆ. Well played Shami! ಎಂದು ಹೊಗಳಿದ್ದಾರೆ.
ಸೆಮೀಸ್’ನಲ್ಲಿ ಸೋಲುಂಡು ವಿಶ್ವಕಪ್’ನಿಂದ ಹೊರಬಿದ್ದ ನ್ಯೂಜಿಲೆಂಡ್ ತಂಡಕ್ಕೆ ಸಿಕ್ಕ ಮೊತ್ತ ಎಷ್ಟು ಕೋಟಿ ಗೊತ್ತಾ?
ಅಭಿನಂದನೆ ಸಲ್ಲಿಸಿದ ಅಮಿತ್ ಶಾ :
ದೇಶದ ಗೃಹ ಸಚಿವ ಅಮಿತ್ ಶಾ ಕೂಡಾ ಭಾರತದ ವಿಜಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇಂಡಿಯಾ 'ಬಾಸ್‌ನಂತೆ ಫೈನಲ್‌ಗೆ ಪ್ರವೇಶಿಸುತ್ತಿದೆ. ಎಂತಹ ಅದ್ಭುತ ಆಟ ಎಂದು ಗುಣಗಾನ ಮಾಡಿದ್ದಾರೆ. ಅಲ್ಲದೆ ತಂಡದ ಎಲ್ಲಾ ಆಟಗಾರರಿಗೂ ಧನ್ಯವಾದ ಹೇಳಿದ್ದಾರೆ. ಈಗ ಕಪ್ ಎತ್ತುವ ಸರದಿ ನಿಮ್ಮದು ಎಂದಿದ್ದಾರೆ.
ಇಂದಿನ ಗೆಲುವಿನ ಸಂಪೂರ್ಣ ಕ್ರೆಡಿಟ್ ಈತನಿಗೆ..!- ಫೈನಲ್ ಪ್ರವೇಶಿಸಿದ ನಂತರ ರೋಹಿತ್ ಶರ್ಮಾ ಹೇಳಿಕೆ
2011 ರ ವಿಶ್ವಕಪ್ ನಂತರ ಭಾರತವು ಮೊದಲ ಬಾರಿಗೆ ಸೆಮಿಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ನವೆಂಬರ್ 19 ರಂದು ನಡೆಯಲಿರುವ ಫೈನಲ್ ಕದನದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಪಂದ್ಯದ ವಿಜೇತ ತಂಡವನ್ನು ಭಾರತ ಎದುರಿಸಲಿದೆ. ಈ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಬಿರುಗಾಳಿ ಎಬ್ಬಿಸಿದ ಕೊಹ್ಲಿ-ಅಯ್ಯರ್ ಶಮಿ :
ನ್ಯೂಜಿಲೆಂಡ್ ವಿರುದ್ಧದ ಈ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಭಾರತೀಯ ಬ್ಯಾಟ್ಸ್‌ಮನ್‌ಗಳು ಸಂಚಲನ ಮೂಡಿಸಿದರು. ನಾಯಕ ರೋಹಿತ್ ಶರ್ಮಾ ಶುಭಮನ್ ಗಿಲ್ ಜೊತೆಗೂಡಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇದಾದ ಬಳಿಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ವೇಗದ ಶತಕ ಸಿಡಿಸಿದ್ದರು. ಅದೇ ವೇಳೆ ಕೊನೆಯ ಓವರ್ ಗಳಲ್ಲಿ ಕೆಎಲ್ ರಾಹುಲ್ ಅಬ್ಬರಿಸಿದರು. ಇದರ ಪರಿಣಾಮ ಭಾರತ ನ್ಯೂಜಿಲೆಂಡ್ ಗೆಲುವಿಗೆ 398 ರನ್ ಗಳ ಗುರಿ ನೀಡುವುದು ಸಾಧ್ಯವಾಯಿತು. ಆದರೆ ನ್ಯೂಜಿಲೆಂಡ್ ತಂಡ 327 ರನ್‌ಗಳಿಗೆ ಆಲೌಟ್ ಆಯಿತು. ಶಮಿಯ್ ಬಿರುಸಿನ ಬೌಲಿಂಗ್ ಮುಂದೆ 7 ಕಿವೀಸ್ ಬ್ಯಾಟ್ಸ್‌ಮನ್‌ಗಳ ಬ್ಯಾಟ್ ಮೌನವಾಯಿತು. ಈ ಪಂದ್ಯದಲ್ಲಿ ಟಾಪ್-5 ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದು ಶಮಿ. 70 ರನ್‌ಗಳ ಜಯದೊಂದಿಗೆ ಟೀಂ ಇಂಡಿಯಾ ಫೈನಲ್‌ಗೆ ಟಿಕೆಟ್ ಕಾಯ್ದಿರಿಸಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.