Rahul Dravid press conference: ವಿಶ್ವಕಪ್‌’ಗೆ ಮುನ್ನ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌’ಗಳು, ಮುಖ್ಯವಾಗಿ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಬಗ್ಗೆ ಕೊಂಚ ಗೊಂದಲ ಇತ್ತು, ಆದರೆ ಇಲ್ಲಿಯವರೆಗಿನ ಪ್ರದರ್ಶನ ನೋಡಿ ಸಂತೋಷವಾಗಿದೆ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಗಾಯದಿಂದ ಚೇತರಿಸಿಕೊಂಡ ಬಳಿಕ ರಾಹುಲ್ ಮತ್ತು ಅಯ್ಯರ್ ಇಬ್ಬರೂ ಟೀಂ ಇಂಡಿಯಾಗೆ ಪುನರಾಗಮನ ಮಾಡಿದ್ದರು. ಅಂದಹಾಗೆ ಇಲ್ಲಿಯವರೆಗೆ ರಾಹುಲ್ 245 ರನ್ ಮತ್ತು ಅಯ್ಯರ್ 293 ರನ್ ಗಳಿಸಿದ್ದಾರೆ.


ಇದನ್ನೂ ಓದಿ: ವಿಶ್ವಕಪ್’ನಲ್ಲಿ ಟೀಂ ಇಂಡಿಯಾಗೆ ಸೋಲುಣಿಸಲು ಡಬ್ಬಾ ಐಡಿಯಾ ಕೊಟ್ಟ ಪಾಕ್ ಕ್ರಿಕೆಟಿಗ! ಏನದು ಗೊತ್ತಾ?


ನೆದರ್ಲೆಂಡ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್, '”ಮಧ್ಯಮ ಕ್ರಮಾಂಕವು ಸವಾಲಿನ ಪರಿಸ್ಥಿತಿಗಳಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಟೀಂ ಇಂಡಿಯಾದ ಮಧ್ಯಮ ಕ್ರಮಾಂಕವು ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿತ್ತಿದೆ” ಎಂದು ಹೇಳಿದರು.


“ಅಂಕಿಅಂಶಗಳ ಆಧಾರದ ಮೇಲೆ ನೀವು ಅವರನ್ನು ನಿರ್ಣಯಿಸಲು ಸಾಧ್ಯವಿಲ್ಲ. ಅವರ 30 ಮತ್ತು 40 ರನ್‌’ಗಳ ಇನಿಂಗ್ಸ್‌ಕೂಡ ಬಹಳ ಮುಖ್ಯವಾಗಿವೆ. ನಮ್ಮ ಮಧ್ಯಮ ಕ್ರಮಾಂಕದ ಬ್ಯಾಟರ್’ಗಳಾದ ಶ್ರೇಯಸ್, ರಾಹುಲ್ ಅಥವಾ ಸೂರ್ಯಕುಮಾರ್ ಯಾದವ್ ಪ್ರಮುಖ ಪಾತ್ರ ವಹಿಸಿದ್ದಾರೆ. ಜಡ್ಡು (ರವೀಂದ್ರ ಜಡೇಜಾ) ಕೂಡ ಧರ್ಮಶಾಲಾದಲ್ಲಿ ಪ್ರಮುಖ ಇನ್ನಿಂಗ್ಸ್ ಆಡಿದರು” ಎಂದಿದ್ದಾರೆ.


ರಾಹುಲ್ ಮತ್ತು ಅಯ್ಯರ್ ಹೊರತಾಗಿ, ವಿಶ್ವಕಪ್‌’ಗೆ ಮೊದಲು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಎಡಗೈ ಸ್ಪಿನ್ನರ್ ಜಡೇಜಾ ಅವರ ಫಿಟ್‌ನೆಸ್ ಬಗ್ಗೆ ಟೀಂ ಇಂಡಿಯಾ ಚಿಂತಿಸಿತ್ತು, ಆದರೆ ಈ ಇಬ್ಬರೂ ಆಟಗಾರರು ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತದ ಗೆಲುವಿನ ರೂವಾರಿಯಾಗಿದ್ದಾರೆ. ಬುಮ್ರಾ ಇದುವರೆಗೆ ಎಂಟು ಪಂದ್ಯಗಳಿಂದ 15 ವಿಕೆಟ್ ಪಡೆದಿದ್ದಾರೆ.


ಇದನ್ನೂ ಓದಿ: ಟೀಂ ಇಂಡಿಯಾ ಸತತ ಗೆಲುವು ಕಂಡಿದ್ದು ಶಮಿ, ಕೊಹ್ಲಿಯಿಂದಲ್ಲ, ಈತನಿಂದ; ಈತನೇ ನಿಜವಾದ ನಾಯಕ”- ದ್ರಾವಿಡ್ ಹೇಳಿಕೆ


“ಈ ಆಟಗಾರರು ಟೂರ್ನಿಗೆ ಮುನ್ನವೇ ಫಿಟ್ ಆಗಿ ಮರಳಿದ್ದು ನಮಗೆ ತುಂಬಾ ಒಳ್ಳೆಯದಾಗಿದೆ. ಇದಕ್ಕೆಲ್ಲಾ ಸ್ವಲ್ಪ ಅದೃಷ್ಟವೂ ಬೇಕು” ಎಂದು ಹೇಳಿದರು. ಈ ಹೇಳಿಕೆಗಳ ಮೂಲಕ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾದ ಪ್ಲೇಯಿಂಗ್ 11ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದಂತಿತ್ತು.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ