Rohit Sharma Record: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಫೈನಲ್‌ ಪಂದ್ಯದಲ್ಲಿ ಎಂದಿನಂತೆ ಬಿರುಸಿನ ಆರಂಭ ನೀಡಿದ್ದಾರೆ. ಆದರೆ ಕೆಲ ಕ್ಷಣದಲ್ಲೇ ಔಟ್ ಆದ ಅವರು 47 ರನ್ ಗಳಿಸಿ ಪೆವಿಲಿಯನ್’ಗೆ ಮರಳಿದರು. ಇದರಲ್ಲಿ 4 ಬೌಂಡರಿ ಹಾಗೂ ಮೂರು ಸಿಕ್ಸರ್‌’ಗಳು ಸೇರಿಕೊಂಡಿವೆ.


COMMERCIAL BREAK
SCROLL TO CONTINUE READING

ಅಂದಹಾಗೆ ಹಿಟ್‌ ಮ್ಯಾನ್ ಬೇಗನೇ ಔಟಾದರೂ ಸಹ ನಾಯಕನಾಗಿ ಇತಿಹಾಸ ಸೃಷ್ಟಿಸಿದ್ದಾರೆ. ರೋಹಿತ್ ಶರ್ಮಾ ಅವರ ಇನ್ನಿಂಗ್ಸ್‌’ನಲ್ಲಿ 29 ರನ್ ಗಳಿಸಿದ ತಕ್ಷಣ, ಅವರು ವಿಶ್ವಕಪ್‌’ನ ಒಂದು ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಯಕನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಹಿಂದಿಕ್ಕಿದ್ದಾರೆ.


ಇದನ್ನೂ ಓದಿ: ಸಚಿನ್ ಬಳಿಕ ರಿಕಿ ಪಾಂಟಿಂಗ್ ವಿಶ್ವದಾಖಲೆ ಮುರಿದ ವಿರಾಟ್! ಸಕ್ರಿಯ ಆಟಗಾರನಾಗಿ ಹೊಸ ಇತಿಹಾಸ


ರೋಹಿತ್ ಶರ್ಮಾ ಈಗ ಏಕದಿನ ವಿಶ್ವಕಪ್‌’ನ ಒಂದೇ ಋತುವಿನಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ಋತುವಿನಲ್ಲಿ ಅವರು 597 ರನ್ ಗಳಿಸಿದ್ದಾರೆ. ಇದು ನಾಯಕನಾಗಿ ಯಾವುದೇ ವಿಶ್ವಕಪ್ ಋತುವಿನಲ್ಲಿ ಯಾರೂ ಗಳಿಸಲು ಸಾಧ್ಯವಾಗದಷ್ಟು ಅತ್ಯಧಿಕ ಸ್ಕೋರ್ ಆಗಿದೆ. ಹಿಟ್‌’ಮ್ಯಾನ್‌’ಗಿಂತ ಮೊದಲು, 2019 ರ ವಿಶ್ವಕಪ್‌’ನಲ್ಲಿ ನಾಯಕನಾಗಿ 578 ರನ್ ಗಳಿಸಿದ್ದ ಕೇನ್ ವಿಲಿಯಮ್ಸನ್ ಹೆಸರಿನಲ್ಲಿ ಈ ದಾಖಲೆ ಇತ್ತು. ಇದಲ್ಲದೆ ಮಹೇಲಾ ಜಯವರ್ಧನೆ ಅವರ ಹೆಸರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.


ವಿಶ್ವಕಪ್ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಯಕ


  • 597 ರನ್ - ರೋಹಿತ್ ಶರ್ಮಾ (2023)

  • 578 ರನ್ - ಕೇನ್ ವಿಲಿಯಮ್ಸನ್ (2019)

  • 548 ರನ್ - ಮಹೇಲಾ ಜಯವರ್ಧನೆ (2007)

  • 539 ರನ್ - ರಿಕಿ ಪಾಂಟಿಂಗ್ (2007)

  • 507 ರನ್ - ಆರನ್ ಫಿಂಚ್ (2019)


ಈ ಬಾರಿಯ ವಿಶ್ವಕಪ್‌’ನಲ್ಲಿ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಅತಿ ಹೆಚ್ಚು ಸಿಕ್ಸರ್‌’ಗಳನ್ನು ಬಾರಿಸಿದ ದಾಖಲೆ ಸೇರಿ, ಕ್ಯಾಲೆಂಡರ್ ವರ್ಷದಲ್ಲಿ ಏಕದಿನ ಕ್ರಿಕೆಟ್‌’ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.


ಇದನ್ನೂ ಓದಿ: ICC ವಿಶ್ವಕಪ್ ಟ್ರೋಫಿಯ ಬೆಲೆ ಎಷ್ಟು ಕೋಟಿ ಗೊತ್ತಾ? ನೈಜ ದರ ತಿಳಿದರೆ ದಂಗಾಗೋದು ಖಂಡಿತ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.