Rohit Sharma insults Ravindra Jadeja: 2023ರ ವಿಶ್ವಕಪ್‌’ನಲ್ಲಿ ಟೀಂ ಇಂಡಿಯಾ ಇದುವರೆಗೆ ಉತ್ತಮ ಪ್ರದರ್ಶನ ನೀಡಿದೆ. ಸತತ 8 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಭಾರತ 243 ರನ್‌’ಗಳಿಂದ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಈ ಪಂದ್ಯದ ವೇಳೆ ನಾಯಕ ರೋಹಿತ್ ಶರ್ಮಾ ನಿಂದಿಸುತ್ತಿರುವ ವಿಡಿಯೋ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಭಾರತದ ಸತತ ಗೆಲುವಿನ ಮಧ್ಯೆ ನಾಯಕತ್ವದ ಬಗ್ಗೆ ಹೀಗಂದ ರವೀಂದ್ರ ಜಡೇಜಾ


ಟೂರ್ನಿಯ 37ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 5 ವಿಕೆಟ್‌’ಗೆ 326 ರನ್‌’ಗಳ ಬೃಹತ್ ಮೊತ್ತ ಕಲೆಹಾಕಿತು. ವಿರಾಟ್ ಕೊಹ್ಲಿ 121 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿದರು. ಆ ಬಳಿಕ ಕಣಕ್ಕಿಳಿದ ದಕ್ಷಿಣ ಆಫ್ರಿಕಾ 27.1 ಓವರ್‌’ಗಳಲ್ಲಿ 83 ರನ್‌’ಗಳಿಗೆ ಆಲೌಟ್ ಆಯಿತು. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ 5 ವಿಕೆಟ್ ಪಡೆದರು.


ದಕ್ಷಿಣ ಆಫ್ರಿಕಾದ ಇನಿಂಗ್ಸ್‌’ನ 13ನೇ ಓವರ್‌’ನ ವಿಡಿಯೋ ವೈರಲ್ ಆಗಿದೆ. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಈ ಓವರ್ ಬೌಲಿಂಗ್ ಮಾಡುತ್ತಿದ್ದರು. 5 ನೇ ಎಸೆತದಲ್ಲಿ, ಹೆನ್ರಿಕ್ ಕ್ಲಾಸೆನ್ ವಿರುದ್ಧ LBWಗೆ ಮನವಿ ಮಾಡಿದರು, ಆದರೆ ಆನ್-ಫೀಲ್ಡ್ ಅಂಪೈರ್ ಔಟ್ ನೀಡಲಿಲ್ಲ. ಇದಾದ ನಂತರ ಜಡೇಜಾ, ನಾಯಕ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಮಾತನಾಡುತ್ತಿರುವುದು ಕಂಡುಬಂದಿದೆ.


2011ರ ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ದಾಖಲೆ ಪುನರಾವರ್ತಿಸಿದ ಸ್ಪಿನ್ನರ್ ರವೀಂದ್ರ ಜಡೇಜಾ


ಆಗ ರೋಹಿತ್ “ಕ್ಯಾ ಯೇ ಏಕ್ ಬ್ಯಾಟ್ಸ್‌ಮನ್ ಹೈ **” ಎಂದು ಬೈದಿರುವುದು ಕಂಡುಬಂದಿದೆ. ಅಂದರೆ ಒಬ್ಬ ಬ್ಯಾಟ್ಸ್‌ಮನ್‌’ಗಾಗಿ ಡಿಆರ್‌ಎಸ್ ತೆಗೆದುಕೊಳ್ಳಬೇಕಾ ಎನ್ನುತ್ತಾ ಕೊನೆಯದಾಗಿ ಸಾರ್ವಜನಿಕವಾಗಿ ಬಳಸಲು ಸಭ್ಯವಲ್ಲದ ಪದವನ್ನು ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಈ ಆಡಿಯೋ ಸ್ಟಂಪ್‌ ಮೈಕ್’ನಲ್ಲಿ ರೆಕಾರ್ಡ್ ಆಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews