Shoaib Akhtar Reaction: ಭಾರತ ತಂಡದ ಅಜೇಯ ಪಯಣ 2023ರ ವಿಶ್ವಕಪ್‌’ನಲ್ಲಿ ಮುಂದುವರಿದಿದೆ. ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 243 ರನ್‌’ಗಳಿಂದ ಸೋಲಿಸುವ ಮೂಲಕ ಟೂರ್ನಿಯಲ್ಲಿ ಸತತ ಎಂಟನೇ ಗೆಲುವು ದಾಖಲಿಸಿದೆ. ಈ ಗೆಲುವಿನ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ದ.ಆಫ್ರಿಕಾ ವಿರುದ್ಧ ಭಾರತ ಗೆಲ್ಲಲು ಕಾರಣ ಈ ಆಟಗಾರ ಎಂದು ಕೊಂಡಾಡಿದ ನಾಯಕ ರೋಹಿತ್ ಶರ್ಮಾ


ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದೆ. ಇಲ್ಲಿಯವರೆಗೆ 2023ರ ವಿಶ್ವಕಪ್‌’ನಲ್ಲಿ ಭಾರತವನ್ನು ಸೋಲಿಸಲು ಯಾವುದೇ ತಂಡಕ್ಕೆ ಸಾಧ್ಯವಾಗಿಲ್ಲ. ಈ ಪಂದ್ಯದಲ್ಲಿಯೂ ಮೊದಲು ಬ್ಯಾಟ್ ಮಾಡಿದ ಭಾರತ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರ ಇನ್ನಿಂಗ್ಸ್‌’ನಿಂದ 5 ವಿಕೆಟ್‌’ಗೆ 326 ರನ್ ಗಳಿಸಿತು. ಆದರೆ ಆ ಬಳಿಕ ಬ್ಯಾಟಿಂಗ್’ಗೆ ಬಂದ ದಕ್ಷಿಣ ಆಫ್ರಿಕಾವನ್ನು ಭಾರತ 27.1 ಓವರ್‌’ಗಳಲ್ಲಿ ಕೇವಲ 83 ರನ್‌’ಗಳಿಗೆ ಆಲೌಟ್ ಮಾಡಿತು. ತಂಡದ ಪರ ರವೀಂದ್ರ ಜಡೇಜಾ ಗರಿಷ್ಠ 5 ವಿಕೆಟ್ ಪಡೆದರೆ, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಶಮಿ ತಲಾ 2 ವಿಕೆಟ್ ಪಡೆದಿದ್ದರು. ಇನ್ನು ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.


ಶೋಯೆಬ್ ಹೇಳಿಕೆ:


ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ವಿಶ್ವಕಪ್ 2023ರ ಬಗ್ಗೆ ಬಹಳಷ್ಟು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಭಾರತದ ಗೆಲುವಿನ ಬಗ್ಗೆಯೂ ಮಾತನಾಡಿದ ಅವರು, “ದಕ್ಷಿಣ ಆಫ್ರಿಕಾ ಪ್ರಯತ್ನಿಸಿದೆ. ಆದರೆ ಏನಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ” ಎಂದು ಹೇಳಿದ್ದಾರೆ.


ಇದನ್ನೂ ಓದಿ:  ಹಾರ್ದಿಕ್ ಪಾಂಡ್ಯ ಹೊರಬಿದ್ದ ಬೆನ್ನಲ್ಲೇ ಈ ಆಟಗಾರನಿಗೆ ಒಲಿದ ಟೀಂ ಇಂಡಿಯಾದ ಉಪನಾಯಕತ್ವ!


ಟೀಂ ಇಂಡಿಯಾದ ಆಟಗಾರರ ಬಗ್ಗೆ ತಮಾಷೆಯಾಗಿ ಹೇಳಿದ ಶೋಯೆಬ್ ಅಖ್ತರ್, “ನನ್ನ ಪ್ರಕಾರ ರಿವ್ಯೂ ಸಿಸ್ಟಮ್ ಸರಿಯಾಗಿಲ್ಲ. ಚೆಂಡು ಸ್ಟಂಪ್‌’ಗೆ ಬಡಿಯುತ್ತಿರಲಿಲ್ಲ. ಬುಮ್ರಾ ಚೆಂಡನ್ನು ಸೀಮ್ ಮಾಡುತ್ತಿದ್ದಾರಾ ಎಂಬ ಅನುಮಾನ ನನಗಿದೆ. ನನಗೆ ಸಿರಾಜ್ ಬಗ್ಗೆ ಒಳ್ಳೆ ಭಾವನೆ ಇಲ್ಲ. ಮೊಹಮ್ಮದ್ ಶಮಿ ಏಕೆ ಫಾರ್ಮ್‌’ನಲ್ಲಿ ಇಲ್ಲ ಎಂಬುದು ಗೊತ್ತಿಲ್ಲ” ಎಂದು ಹೇಳುತ್ತಾ ಪರೋಕ್ಷವಾಗಿ ಟೀಂ ಇಂಡಿಯಾದ ಆಟಗಾರರನ್ನು ಹೊಗಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ