IND vs PAK, World Cup 2023: ವಿಶ್ವಕಪ್ 2023ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಅಕ್ಟೋಬರ್ 14 ರಂದು ಅಹಮದಾಬಾದ್‌’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಅಹಮದಾಬಾದ್‌ನಲ್ಲಿ ನಡೆದ ಅಭ್ಯಾಸದ ವೇಳೆ ಉಭಯ ತಂಡಗಳು ಬೆವರಿಳಿಸಿದ ದೃಶ್ಯ ಕಂಡು ಬಂದಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬಿಗ್’ಬಾಸ್ ಮನೆಗೆ ಹೋಗಿಬಂದ ಅನುಭವದ ಬಗ್ಗೆ ‘ಒಳ್ಳೆ ಹುಡುಗ ಪ್ರಥಮ್’ ಹೇಳಿದ್ದು ಹೀಗೆ…


ಈ ಮಧ್ಯೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭಾರತದ ಸ್ಟಾರ್ ಓಪನಿಂಗ್ ಬ್ಯಾಟ್ಸ್‌’ಮನ್ ಶುಭ್‌ಮನ್ ಗಿಲ್ ಅವರ ಆರೋಗ್ಯದ ಬಗ್ಗೆ ದೊಡ್ಡ ಅಪ್‌ಡೇಟ್ ನೀಡಿದ್ದಾರೆ.


ಶುಭ್‌ಮನ್ ಗಿಲ್ ಅವರು ಡೆಂಗ್ಯೂನಿಂದಾಗಿ ವಿಶ್ವಕಪ್‌’ನ ಮೊದಲ ಎರಡು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದರು. ಆದರೆ ಈಗ ಚೇತರಿಸಿಕೊಂಡಿದ್ದು, ಫಿಟ್ ಆಗಿದ್ದಾರೆ ಎಂದು ತಿಳಿದುಬಂದಿದೆ.


ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಹಲವು ವಿಷಯಗಳನ್ನು ಹೇಳಿದ್ದಾರೆ. ಈ ಸಮಯದಲ್ಲಿ, ಗಿಲ್ ಬಗ್ಗೆ ಮಾತನಾಡುತ್ತಾ, ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. “ಅಹಮದಾಬಾದ್‌’ನಲ್ಲಿ ನಡೆಯಲಿರುವ ಪಂದ್ಯಕ್ಕೆ ಗಿಲ್ 99% ಲಭ್ಯವಿದ್ದಾರೆ” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.


ಇದನ್ನೂ ಓದಿ: ಈ ಬಣ್ಣದ ಅಕ್ಕಿಯ ನೀರಿನ್ನು ಕೂದಲಿಗೆ ಹಚ್ಚಿದರೆ ನಿಮಿಷಗಳಲ್ಲಿ ಬುಡಸಮೇತ ಕಪ್ಪಾಗುತ್ತೆ ಬಿಳಿಕೂದಲು!


ಅಹಮದಾಬಾದ್‌’ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಗಿಲ್ ಟೀಮ್ ಇಂಡಿಯಾದ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯಲಿರುವುದು ಬಹುತೇಕ ಖಚಿತವಾಗಿದೆ. ಇಲ್ಲಿಯವರೆಗೆ ಈ ಮೈದಾನದಲ್ಲಿ ಕೇವಲ ಟಿ20 ಪಂದ್ಯಗಳನ್ನು ಆಡಿದ್ದರೂ ಸಹ ಶುಭಮನ್ ಗಿಲ್ ದಾಖಲೆಯು ಅತ್ಯುತ್ತಮವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.