ಟೀಂ ಇಂಡಿಯಾಗೆ ಬಿಗ್ ಶಾಕ್…! ಗಾಯಕ್ಕೆ ತುತ್ತಾದ ಶುಭ್ಮನ್ ಗಿಲ್ ಪಂದ್ಯದಿಂದ ಔಟ್
Shubamn Gill Retired Hurt: ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದ್ದಾರೆ. ಇನ್ನು ಸಿಕ್ಸರ್’ಗಳ ಸುರಿಮಳೆ ಸುರಿಸಿದ ನಾಯಕ ರೋಹಿತ್ ಶರ್ಮಾ 29 ಎಸೆತಕ್ಕೆ 4 ಸಿಕ್ಸ್, 4 ಬೌಂಡರಿ ಒಳಗೊಂಡಂತೆ 47 ರನ್ ಗಳಿಸಿದ್ದಾರೆ.
IND vs NZ, Shubamn Gill Retired Hurt: ಪ್ರಸಕ್ತ ಏಕದಿನ ವಿಶ್ವಕಪ್ 2023ರ ಲೀಗ್ ಪಂದ್ಯಗಳು ಮುಗಿದಿದ್ದು, ಇದೀಗ ಮೊದಲ ಸೆಮಿಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು.
ಇದನ್ನೂ ಓದಿ: ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ: ಯಾವೊಬ್ಬ ಭಾರತೀಯ ನಾಯಕನೂ ಮಾಡಲು ಸಾಧ್ಯವಾಗದ ವಿಶೇಷ ರೆಕಾರ್ಡ್
ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದ್ದಾರೆ. ಇನ್ನು ಸಿಕ್ಸರ್’ಗಳ ಸುರಿಮಳೆ ಸುರಿಸಿದ ನಾಯಕ ರೋಹಿತ್ ಶರ್ಮಾ 29 ಎಸೆತಕ್ಕೆ 4 ಸಿಕ್ಸ್, 4 ಬೌಂಡರಿ ಒಳಗೊಂಡಂತೆ 47 ರನ್ ಗಳಿಸಿದ್ದಾರೆ.
ಇನ್ನೊಂದೆಡೆ ಶುಭ್ಮನ್ ಗಿಲ್ ಕೂಡ ಅದ್ಭುತವಾಗಿ ಆಟವಾಡಿದ್ದಾರೆ. 65 ಎಸೆತಗಳಲ್ಲಿ 79 ರನ್’ಗಳ ಇನಿಂಗ್ಸ್ ಆಡುತ್ತಿದ್ದರು. ಆದರೆ 23ನೇ ಓವರ್’ನ ನಾಲ್ಕನೇ ಎಸೆತ ವೇಳೆ ಇದ್ದಕ್ಕಿದ್ದಂತೆ ಮಂಡಿರಜ್ಜು ಸಮಸ್ಯೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕ್ರೀಸ್’ನಿಂದ ಹೊರ ನಡೆದಿದ್ದಾರೆ.
ಇದನ್ನೂ ಓದಿ: ಭಾರತ vs ನ್ಯೂಜಿಲೆಂಡ್ ಪಂದ್ಯಕ್ಕೆ 2019ರ ಅಂಪೈರ್ಸ್! ಇವರಿದ್ದಾಗ 3 ಪಂದ್ಯಗಳಲ್ಲಿ ಸೋತಿದ್ದ ಟೀಂ
ಸದ್ಯ ಹಾರ್ದಿಕ್ ಪಾಂಡ್ಯ ಕೂಡ ಗಾಯದಿಂದಾಗಿ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದೀಗ ಟೀಂ ಇಂಡಿಯಾಗೆ ಮತ್ತೊಂದು ಆಘಾತ ಸಂಭವಿಸಿದ್ದು, ಅಭಿಮಾನಿಗಳಲ್ಲಿ ಭಯದ ವಾತಾವರಣ ಮನೆ ಮಾಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.