Lahiru Kumara Injury: ಮಾಜಿ ಚಾಂಪಿಯನ್ ಶ್ರೀಲಂಕಾ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್’ನಲ್ಲಿ ಸೆಮಿಫೈನಲ್‌ ಪ್ರವೇಶಿಸಲು ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಈ ಬೆನ್ನೆಲ್ಲೇ ತಂಡಕ್ಕೆ ಶಾಕಿಂಗ್ ಸುದ್ದಿಯೊಂದು ಬಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “5 ತಿಂಗಳಿಂದ ಸಂಬಳ ಇಲ್ಲ, ತಂಡದಿಂದ ಮತ್ತಿನ್ನೇನು ನಿರೀಕ್ಷಿಸಬಹುದು”: ಪಾಕ್ ಆಟಗಾರನ ಹೇಳಿಕೆ ವೈರಲ್


ತಂಡದ ಇನ್ ಫಾರ್ಮ್ ವೇಗದ ಬೌಲರ್ ಲಹಿರು ಕುಮಾರ ಪಂದ್ಯಾವಳಿಯ ಉಳಿದ ಪಂದ್ಯಗಳಿಂದ ಇದ್ದಕ್ಕಿದ್ದಂತೆ ಹೊರಗುಳಿದಿದ್ದಾರೆ. ಶ್ರೀಲಂಕಾ ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿದ್ದು, 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.


ಪುಣೆಯ ಎಂಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾದ ಪ್ರಮುಖ ಪಂದ್ಯ ನಾಳೆ ಅಂದರೆ ಅಕ್ಟೋಬರ್ 30ರಂದು ನಡೆಯಲಿದೆ. ಈ ಸಂದರ್ಭಕ್ಕೂ ಮುನ್ನ ತರಬೇತಿ ವೇಳೆ ಲಹಿರು ಕುಮಾರ ಎಡತೊಡೆಗೆ ಗಾಯ ಮಾಡಿಕೊಂಡಿದ್ದಾರೆ.


ಈ ಕಾರಣದಿಂದ ಶ್ರೀಲಂಕಾ ತಂಡ ಅವರಿಲ್ಲದೇ ಟೂರ್ನಿಯ ಉಳಿದ ಪಂದ್ಯಗಳನ್ನು ಆಡಬೇಕಿದೆ. ಅವರ ಬದಲಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) 31ರ ಹರೆಯದ ಬಲಗೈ ಫಾಸ್ಟ್ ಬೌಲರ್ ದುಷ್ಮಂತ ಚಮೀರಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.


ದುಷ್ಮಂತ ಚಮೀರ ಅವರ ಸೇರ್ಪಡೆಗೆ ಈವೆಂಟ್ ತಾಂತ್ರಿಕ ಸಮಿತಿ ಭಾನುವಾರ ಅನುಮೋದನೆ ನೀಡಿದೆ. ದುಷ್ಮಂತ ಅತ್ಯಂತ ಅನುಭವಿಯಾಗಿದ್ದು, ಲಂಕಾ ತಂಡದ ಪರ 100ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ.


ಇದನ್ನೂ ಓದಿ: ಮಹಿಳೆಯ ದೇಹದ ಈ ಭಾಗ ನೋಡಿ ಹೇಳಬಹುದು ಆಕೆ ಎಂಥವಳು ಅಂತಾ!!


ಗುರುವಾರ ಬೆಂಗಳೂರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಅದ್ಭುತ ಗೆಲುವಿನಲ್ಲಿ ಕುಮಾರ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಶ್ರೀಲಂಕಾ ತಂಡಕ್ಕೆ ಕುಮಾರ ಅನುಪಸ್ಥಿತಿ ಕಾಡುವುದು ಖಚಿತ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ