World Cup 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆದರ್ಲೆಂಡ್ಸ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 410 ರನ್ ಗಳಿಸಿತು. ಈ ಸ್ಕೋರ್ ಕಲೆ ಹಾಕುವ ಮೂಲಕ ಟೀಂ ಇಂಡಿಯಾ ವಿಶ್ವಕಪ್ ಇತಿಹಾಸದಲ್ಲಿ ಅಮೋಘ ಸಾಧನೆ ಮಾಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  9 ವರ್ಷಗಳ ಬಳಿಕ ವಿಕೆಟ್ ಕಬಳಿಸಿದ ಚೀಕು! ಬೌಲಿಂಗ್’ನಲ್ಲೂ ವಿರಾಟ್ ಕೊಹ್ಲಿ ಕಮಾಲ್


ಟೀಂ ಇಂಡಿಯಾ 16 ವರ್ಷಗಳ ನಂತರ ವಿಶ್ವಕಪ್‌’ನಲ್ಲಿ ಮತ್ತೆ ತನ್ನ ಹಳೆಯ ವರ್ಚಸ್ಸನ್ನು ಪುನರಾವರ್ತಿಸಿದೆ. ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ನಡುವೆ ನಾಲ್ಕನೇ ವಿಕೆಟ್‌’ಗೆ 208 ರನ್‌’ಗಳ ಜೊತೆಯಾಟ ನಡೆದಿತ್ತು. ಈ ಆಟವೇ ತಂಡದ ಚಿತ್ರಣವನ್ನೇ ಬದಲಾಯಿಸಿದೆ ಎಂದೆನ್ನಬಹುದು.


ವಿಶ್ವಕಪ್ ಇತಿಹಾಸದಲ್ಲಿ ಟೀಂ ಇಂಡಿಯಾ ಎರಡನೇ ಬಾರಿಗೆ 400 ಪ್ಲಸ್ ಸ್ಕೋರ್ ಮಾಡಿದೆ. ಈ ಹಿಂದೆ 2007ರಲ್ಲಿ ಪೋರ್ಟ್ ಆಫ್ ಸ್ಪೇನ್‌’ನಲ್ಲಿ ಬರ್ಮುಡಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ 413 ರನ್ ಗಳಿಸಿತ್ತು. ಇದೀಗ ಭಾರತವು 16 ವರ್ಷಗಳ ನಂತರ ಮತ್ತೊಮ್ಮೆ ತನ್ನದೇ ಆದ ಹಳೆಯ ದಾಖಲೆಯನ್ನು ಸರಿಗಟ್ಟಿದೆ. ವಿಶ್ವಕಪ್‌’ನಲ್ಲಿ ಇದುವರೆಗೆ ಏಳು ಬಾರಿ 400ಕ್ಕೂ ಹೆಚ್ಚು ರನ್‌’ಗಳನ್ನು ಗಳಿಸಿದೆ.


ಅತಿ ಹೆಚ್ಚು ಬಾರಿ 400ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ


ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಬಾರಿ 400ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ದಕ್ಷಿಣ ಆಫ್ರಿಕಾ ಹೊಂದಿದೆ. ಈ ತಂಡ ಮೂರು ಬಾರಿ 400ಕ್ಕೂ ಹೆಚ್ಚು ರನ್ ಗಳಿಸಿದೆ. ಈ ಪಟ್ಟಿಯಲ್ಲಿ ಭಾರತದ ಹೆಸರು ಎರಡನೇ ಸ್ಥಾನದಲ್ಲಿದೆ. ವಿಶ್ವಕಪ್ ಇತಿಹಾಸದಲ್ಲಿ ಭಾರತ ಎರಡು ಬಾರಿ 400ಕ್ಕೂ ಹೆಚ್ಚು ರನ್ ಗಳಿಸಿದೆ. ಭಾರತದ ನಂತರ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಇದ್ದು, ಈ ತಂಡಗಳು ತಲಾ ಒಮ್ಮೆ 400ಕ್ಕೂ ಹೆಚ್ಚು ರನ್ ಗಳಿಸಿವೆ.


ಏಕದಿನ ವಿಶ್ವಕಪ್‌’ನಲ್ಲಿ ಗರಿಷ್ಠ ಸ್ಕೋರ್


1. ದಕ್ಷಿಣ ಆಫ್ರಿಕಾ - 428/5 ವಿರುದ್ಧ ಶ್ರೀಲಂಕಾ, 2023


2. ಆಸ್ಟ್ರೇಲಿಯಾ - 417/6 ವಿರುದ್ಧ ಅಫ್ಘಾನಿಸ್ತಾನ, 2015


3. ಭಾರತ - 413/5 ವಿರುದ್ಧ ಬರ್ಮುಡಾ, 2007


4. ದಕ್ಷಿಣ ಆಫ್ರಿಕಾ - 411/4 ವಿರುದ್ಧ ಐರ್ಲೆಂಡ್, 2015


5. ಭಾರತ - 410/4 ವಿರುದ್ಧ ನೆದರ್ಲ್ಯಾಂಡ್ಸ್, 2023


ಇದನ್ನೂ ಓದಿ: ತೆಂಗಿನೆಣ್ಣೆ ಜೊತೆ ಈ ಎಲೆಯನ್ನು ಅರೆದು ತಲೆಗೆ ಹಚ್ಚಿದರೆ 10 ನಿಮಿಷದಲ್ಲಿ ಬಿಳಿಕೂದಲು ಕಪ್ಪಾಗುತ್ತೆ! ಹಚ್ಚಿದ ಕೂಡಲೇ ಪರ್ಮನೆಂಟ್ ರಿಸಲ್ಟ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ