Team India semi-final date: ಭಾರತ ತಂಡವು ತನ್ನ ಮೊದಲ ಎಂಟು ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವಕಪ್ 2023ರಲ್ಲಿ ಸೆಮಿಫೈನಲ್‌’ಗೆ ಪ್ರವೇಶಿಸಿದೆ. ದಕ್ಷಿಣ ಆಫ್ರಿಕಾ ತಂಡವು ಟಾಪ್ 4 ತಂಡಗಳ್ಲಲಿ ಎರಡನೇ ಸ್ಥಾನದಲ್ಲಿದೆ. ಈಗ ಉಳಿದಿರುವ ಕೊನೆಯ ಎರಡು ಸ್ಥಾನಗಳಿಗೆ ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ತಂಡ ಕಾದಾಡುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ 4 ರಾಶಿಗೆ ದೀಪಾವಳಿ ಮುಗಿಯುತ್ತಿದ್ದಂತೆ ಶುಕ್ರದೆಸೆ ಶುರು: ಮಹಾಲಕ್ಷ್ಮೀ ಒಲುಮೆಯಿಂದ ಅದೃಷ್ಟ-ಸಂಪತ್ತಿನ ಜೊತೆ ಕೈ ಸೇರಲಿದೆ ಸರ್ಕಾರಿ ನೌಕರಿ


ಇನ್ನು ನಿಗದಿತ ವೇಳಾಪಟ್ಟಿಯನ್ನು ನೋಡಿದರೆ, ಲೀಗ್ ಹಂತದಲ್ಲಿ ಅಗ್ರ ತಂಡವು ನವೆಂಬರ್ 15 ರಂದು ಮುಂಬೈನ ವಾಂಖೆಡೆಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ತಂಡದ ವಿರುದ್ಧ ಸೆಮಿಫೈನಲ್ ಪಂದ್ಯವನ್ನು ಆಡಲಿದೆ. ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಅಗ್ರಸ್ಥಾನದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಹೀಗಿರುವಾಗ ನಾಲ್ಕನೇ ಸ್ಥಾನಕ್ಕೆ ಯಾರು ಸೆಮಿಫೈನಲ್‌’ನಲ್ಲಿ ಭಾರತವನ್ನು ಎದುರಿಸಲಿದ್ದಾರೆ ಎಂಬುದು ಈಗ ಪ್ರಶ್ನೆಯಾಗಿದೆ.


ಪಾಕಿಸ್ತಾನ ನಾಲ್ಕನೇ ತಂಡವಾದರೆ ಸೆಮಿಫೈನಲ್‌’ನ ದಿನಾಂಕ ಬದಲಾಗಲಿದೆ ಎಂಬುದು ಒಂದು ಲೆಕ್ಕಾಚಾರ. ಆ ಲೆಕ್ಕಾಚಾರ ಏನು ಎಂಬುದನ್ನು ತಿಳಿಯೋಣ.


ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದಾಗ, ಒಂದು ವೇಳೆ ಪಾಕಿಸ್ತಾನವು ಸೆಮಿಫೈನಲ್‌’ಗೆ ತಲುಪಿದರೆ, ಆ ಪಂದ್ಯವು ಕೋಲ್ಕತ್ತಾದಲ್ಲಿ ನಡೆಯುತ್ತದೆ ಎಂಬುದು ಐಸಿಸಿ ಮತ್ತು ಬಿಸಿಸಿಐ ಜಂಟಿಯಾಗಿ ತಿಳಿಸಿತ್ತು. ಅಂದರೆ, ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿ ಉಳಿದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಸೆಮಿಫೈನಲ್ ನವೆಂಬರ್ 15 ರಂದು ಮುಂಬೈನಲ್ಲಿ ನಡೆಯುವುದಿಲ್ಲ. ಬದಲಾಗಿ ನವೆಂಬರ್ 16 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಒಂದು ವೇಳೆ ಪಾಕಿಸ್ತಾನ ಮೂರನೇ ಸ್ಥಾನದಲ್ಲಿ ಉಳಿದರೆ ಸೆಮಿಫೈನಲ್ ಪಂದ್ಯಗಳು ನಿಗದಿಯಂತೆ ನಡೆಯಲಿದೆ.


ವೇಳಾಪಟ್ಟಿಯ ಪ್ರಕಾರ, ಮೊದಲ ಸೆಮಿಫೈನಲ್ (ನಂ. 1 ಮತ್ತು 4) ನವೆಂಬರ್ 15 ರಂದು ಮುಂಬೈನಲ್ಲಿ ನಡೆಯಲಿದೆ. ಎರಡನೇ ಸೆಮಿಫೈನಲ್ (ನಂ. 2 ಮತ್ತು 3) ನವೆಂಬರ್ 16 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ


ಇದನ್ನೂ ಓದಿ: ಭಾರತದ ನಿಜವಾದ ಮ್ಯಾಚ್ ವಿನ್ನರ್ ಶಮಿ, ಕೊಹ್ಲಿ, ಸಿರಾಜ್ ಅಲ್ಲ.. ಈ ಆಟಗಾರ!


ದಿನಾಂಕವನ್ನು ಬದಲಾಯಿಸಲು ಕಾರಣವೇನು?


ಈಗ ದಿನಾಂಕ ಬದಲಿಸಲು ಕಾರಣವೇನೆಂದರೆ, 2008ರ ಮುಂಬೈ ದಾಳಿ. ಇದಾದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧಕ್ಕೆ ಧಕ್ಕೆಯಾಯಿತು. ಉಭಯ ತಂಡಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಪರಿಣಾಮದಿಂದಾಗಿ ಭಾರತವು ಆ ನಂತರ ಪಾಕಿಸ್ತಾನಕ್ಕೆ ಪ್ರವಾಸ ಮಾಡಿರಲಿಲ್ಲ. ಪಾಕಿಸ್ತಾನದಿಂದ ಬಂದಿದ್ದ ಅಜ್ಮಲ್ ಕಸಬ್ ಮತ್ತು ಆತನ ಸಹಚರರು ಈ ದಾಳಿಗೆ ಕಾರಣರಾಗಿದ್ದರು. ಹೀಗಾಗಿ ವಿಶ್ವಕಪ್‌’ನಲ್ಲಿ ಪಾಕ್ ತಂಡ ಮುಂಬೈನಲ್ಲಿ ಆಡಿದರೆ ವಿವಾದವಾಗ ಕಾಣಿಸಿಕೊಳ್ಳಬಾರದು ಎಂಬ ನಿರ್ಧಾರಕ್ಕೆ ಮಂಡಳಿ ಬಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ