Cheteshwar Poojara on Virat Kohli: ಬಾಂಗ್ಲಾದೇಶ ವಿರುದ್ಧ 48ನೇ ಏಕದಿನ ಶತಕ ಬಾರಿಸಿದ ವಿರಾಟ್ ಕೊಹ್ಲಿ ಬಗ್ಗೆ ಭಾರತದ ಟೆಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಹಾರ್ದಿಕ ಪಾಂಡ್ಯ ಔಟ್: ಉಪನಾಯಕನಾಗಿ 31ರ ಹರೆಯದ ಬಲಗೈ ಬ್ಯಾಟರ್’ಗೆ ಅವಕಾಶ ಕೊಟ್ಟ ರೋಹಿತ್ ಶರ್ಮಾ


ಅಕ್ಟೋಬರ್ 21ರಂದು ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಶತಕ ಸಿಡಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಚೇತೇಶ್ವರ ಪೂಜಾರ, “ತಂಡಕ್ಕೆ ಮೊದಲ ಆದ್ಯತೆ ನೀಡಬೇಕಿತ್ತು. ಇದು ಸ್ವಾರ್ಥವನ್ನು ಸೂಚಿಸುತ್ತದೆ” ಎಂದು ಟೀಕಿಸಿದ್ದಾರೆ.


ಕ್ರಿಕ್​ ಇನ್ಫೋ ಜೊತೆಗೆ ಮಾತನಾಡಿದ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಕೊಹ್ಲಿ ಶತಕದ ಬಗ್ಗೆ ಟೀಕಿಸಿದ್ದಾರೆ. “ವಿರಾಟ್ ಶತಕ ಸಿಡಿಸಲಿ ಎಂಬ ಆಸೆ ನನ್ನಲ್ಲಿಯೂ ಇತ್ತು. ಆದರೆ ತಂಡಕ್ಕೆ ಮೊದಲು ಆದ್ಯತೆ ನೀಡಬೇಕು. ದ್ವಿಪಕ್ಷೀಯ ಸರಣಿ ಬೇರೆ, ಐಸಿಸಿ ಟೂರ್ನಿ ಬೇರೆ. ಇವೆರೆಡರ ನಡುವೆ ತುಂಬಾ ವ್ಯತ್ಯಾಸ ಇದೆ. ಐಸಿಸಿ ಈವೆಂಟ್’​ಗಳಲ್ಲಿ ನೆಟ್​’ರನ್ ರೇಟ್​ ತುಂಬಾ ಮುಖ್ಯವಾಗುತ್ತದೆ. ಉತ್ತಮ ನೆಟ್​ ರನ್​ ರೇಟ್ ಕಾಯ್ದುಕೊಂಡು ಸೆಮಿಫೈನಲ್’ನಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಬೇಕು” ಎಂದರು.


“ಶತಕಕ್ಕಾಗಿ ಸಮಯ ವ್ಯರ್ಥ ಮಾಡಿದ್ದಕ್ಕಿಂತ, ತಂಡಕ್ಕೆ ಬೇಗ ಗೆಲುವು ತಂದುಕೊಟ್ಟಿದ್ದರೆ, ಇನ್ನಷ್ಟು ರನ್ ರೇಟ್​ ಬರುತ್ತಿತ್ತು. ಒಂದು ವೇಳೆ ಮುಂದಿನ ದಿನಗಳಲ್ಲಿ ಇದೇ ನೆಟ್ ​ರನ್​ ರೇಟ್ ಸಮಸ್ಯೆಯನ್ನುಂಟು ಮಾಡಿದರೆ ಆಗ ಪಶ್ಚಾತಾಪಪಡಬೇಕಾಗುತ್ತದೆ. ಹೀಗಾಗಿಯೇ ಈ ಮಾತನ್ನು ಹೇಳುತ್ತಿದ್ದೇನೆ” ಎಂದು ಹೇಳಿದ್ದಾರೆ ಪೂಜಾರ.


ಇದನ್ನೂ ಓದಿ: ಚಂಡಮಾರುತದ ಸುಳಿಗೆ ಸಿಲುಕಲಿದೆ ಈ ಪ್ರದೇಶ! ಮುಂದಿನ 3 ದಿನ ಜಲಪ್ರವಾಹದ ಭೀತಿ- ಗುಡುಗು, ಬಲವಾದ ಗಾಳಿ ಬೀಸುವ ಸಾಧ್ಯತೆ


“ನನ್ನ ಪ್ರಕಾರ, ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ತಂಡದ ಗೆಲುವೇ ಪ್ರಮುಖವಾಗಬೇಕು. ಹೀಗಾಗಿ ಕೆಲ ಸಂದರ್ಭದಲ್ಲಿ ವೈಯಕ್ತಿಕ ದಾಖಲೆಗಳನ್ನು ತ್ಯಾಗ ಮಾಡಬೇಕು.ದಾಖಲೆಗಳಿಂದ ತಂಡಕ್ಕೆ ನಷ್ಟವಾಗಬಾರದು ಎಂಬುದು ನನ್ನ ಉದ್ದೇಶ” ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.