World Cup 2023, Team India: ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ಸೆಮಿಫೈನಲ್ ಟಿಕೆಟ್ ಕನ್ಫರ್ಮ್ ಮಾಡಿಕೊಂಡಿದೆ. ಅಷ್ಟೇ ಅಲ್ಲದೆ, ಪ್ರಸಕ್ತ ಟೂರ್ನಿಯಲ್ಲಿ ಟೀಂ ಇಂಡಿಯಾವೇ ಪ್ರಶಸ್ತಿ ಗೆಲ್ಲುತ್ತೆ ಅಂತಾ ಅನೇಕ ದಿಗ್ಗಜರು ಭವಿಷ್ಯ ನುಡಿದಿದ್ದಾರೆ. ಈ ಬೆನ್ನಲ್ಲೇ 4 ಪ್ರಮುಖ ಕಾರಣಗಳು ಈ ಬಾರಿ ವಿಶ್ವಕಪ್ ಮುಡಿಗೇರಿಸಿಕೊಳ್ಳೋದು ಭಾರತ ಅಂತಾ ಸಾಕ್ಷಿ ನುಡಿಯುತ್ತಿದೆ. ಆ ಕಾರಣಗಳು ಯಾವುವು ಎಂದು ಮುಂದೆ ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಸುಮಾರು 12 ವರ್ಷಗಳ ನಂತರ ಭಾರತ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲಲು ಸರ್ವಪ್ರಯತ್ನಗಳನ್ನು ಮಾಡುತ್ತಿದೆ. ಅಷ್ಟೇ ಅಲ್ಲದೆ, ಅದಕ್ಕೆ ತಕ್ಕಂತೆ ಉತ್ತಮ ಫಾರ್ಮ್ ಕಾಯ್ದುಕೊಂಡಿರುವ ಭಾರತ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದಿದೆ.


ಇದನ್ನೂ ಓದಿ: ನವೆಂಬರ್ 9ರವರೆಗೆ ಈ ಭಾಗಗಳಲ್ಲಿ ಕುಂಭದ್ರೋಣ ಮಳೆ! ಗುಡುಗು-ಬಲವಾದ ಗಾಳಿ ಅಬ್ಬರಕ್ಕೆ ಜಲಪ್ರಳಯದ ಭೀತಿ


 ಒತ್ತಡ ಮುಕ್ತ ಆಟ:


ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೆ ಭಾರತ ಏಳು ಪಂದ್ಯಗಳನ್ನಾಡಿದ್ದು, ಏಳರಲ್ಲೂ ಗೆಲುವು ಸಾಧಿಸಿದೆ. ಈ ಎಲ್ಲಾ ಪಂದ್ಯಗಳನ್ನು ಗಮನಿಸಿದರೆ, ಬೌಲಿಂಗ್, ಬ್ಯಾಟಿಂಗ್ ಎಲ್ಲವೂ ಉತ್ತಮವಾಗಿತ್ತು. ಪಾಕಿಸ್ತಾನ, ನೆದರ್ಲೆಂಡ್ಸ್, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳ ವಿರುದ್ಧ ಅದ್ಭುತ ಗೆಲುವು ಕಂಡ ಭಾರತ ಒತ್ತಡವಿಲ್ಲದೆ ಆಟವಾಡಿದೆ ಎಂಬುದು ಗೋಚರಿಸಿತ್ತು.


ರೋಹಿತ್ ಶರ್ಮಾ ಕ್ಯಾಪ್ಟನ್ಸಿ:


ವಿಶ್ವಕಪ್’ನಲ್ಲಿ ನಾಯಕನ ಸ್ಥಾನವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ರೋಹಿತ್ ಶರ್ಮಾ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಕೂಡ ಮಾಡುತ್ತಿದ್ದಾರೆ. ಇವರ ನಾಯಕತ್ವವನ್ನು ಕಂಡ ಅನೇಕರು ಮಾಜಿ ನಾಯಕ ಧೋನಿಗೆ ಹೋಲಿಕೆ ಮಾಡಿದ್ದಾರೆ. ರೋಹಿತ್ ಶರ್ಮಾ ಇದುವರೆಗೆ 100 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದು, ಅದರಲ್ಲಿ ಭಾರತ 75 ಪಂದ್ಯಗಳನ್ನು ಗೆದ್ದಿದೆ.


ಬೌಲಿಂಗ್-ಬ್ಯಾಟಿಂಗ್:


ಸದ್ಯ ಭಾರತದ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಿಯೇ ಇದೆ. ಆದರೆ ಬೌಲಿಂಗ್ ಮತ್ತಷ್ಟು ಪರಿಣಾಮಕಾರಿಯಾಗಿದ್ದು, ಕಳೆದ 7 ಪಂದ್ಯಗಳನ್ನೂ ಗಮನಿಸಿದರೆ ಬೌಲಿಂಗ್ ಅತ್ಯುತ್ತಮವಾಗಿರುವುದನ್ನು ಕಾಣಬಹುದು. ಇನ್ನು ಬ್ಯಾಟಿಂಗ್’ನಲ್ಲಿ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅಬ್ಬರಿಸುತ್ತಿದ್ದರೆ, ಬೌಲಿಂಗ್’ನಲ್ಲಿ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಸಿರಾಜ್, ಕುಲ್ದೀಪ್ ಯಾದವ್ ಹಾಗೂ ಜಡೇಜಾ ಮಿಂಚುತ್ತಿದ್ದಾರೆ.


ಇದನ್ನೂ ಓದಿ: ನೇಪಾಳದಲ್ಲಿ ವಿನಾಶ ಸೃಷ್ಟಿಸಿದ ಪ್ರಬಲ ಭೂಕಂಪ: 129 ಮಂದಿ ಸಾವು-ಸೇನೆಯಿಂದ ಕಾರ್ಯಾಚರಣೆ


ಒಂದೊಂದು ಪಂದ್ಯ-ಒಬ್ಬೊಬ್ಬ ಮ್ಯಾಚ್ ವಿನ್ನರ್:


ಭಾರತ ಆಡಿರುವ 7 ಪಂದ್ಯಗಳಲ್ಲೂ ಒಬ್ಬೊಬ್ಬ ಮ್ಯಾಚ್ ವಿನ್ನರ್’ಗಳನ್ನು ಕಾಣಬಹುದು. ಶ್ರೀಲಂಕಾ ವಿರುದ್ಧ ಶ್ರೇಯಸ್ ಅಯ್ಯರ್ ಬ್ಯಾಟಿಂಗ್’ನಲ್ಲಿ ಕಮಾಲ್ ಮಾಡಿದ್ರೆ, ಬೌಲಿಂಗ್’ನಲ್ಲಿ ಮೊಹಮ್ಮದ್ ಶಮಿ ಉತ್ತಮ ಪ್ರದರ್ಶನ ನೀಡಿದ್ದರು, ಇನ್ನು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಸ್ಫೋಟಕ ಪ್ರದರ್ಶನ ನೀಡಿದ್ದರು. ಹೀಗೆ ಮೊಹಮ್ಮದ್ ಸಿರಾಜ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಕೊಹ್ಲಿ ಸೇರಿ ಒಂದೊಂದು ಪಂದ್ಯದ ಗೆಲುವಿಗೆ ಒಬ್ಬೊಬ್ಬರು ಕೊಡುಗೆ ನೀಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ