ಟೂರ್ನಿಯುದ್ದಕ್ಕೂ ಮಿಂಚಿದ್ದ ಟೀಂ ಇಂಡಿಯಾ ಫೈನಲ್’ನಲ್ಲಿ ಸೋಲಲು ಕಾರಣವಾಗಿದ್ದು ಇವರು… ಈ ಅಂಶಗಳು!!
Reasons why Team India lost: ಈ ಸೋಲು ಟೀಂ ಇಂಡಿಯಾವನ್ನು ದೀರ್ಘಕಾಲದವರೆಗೆ ಕಾಡುತ್ತದೆ ಎಂದು ಈ ಹಿಂದೆ ರವಿಶಾಸ್ತ್ರಿ ಅವರು ಹೇಳಿದ್ದು ನೆನಪಾಗುತ್ತಿದೆ. ತಂಡದ ಅನೇಕ ದಿಗ್ಗಜರು ತಮ್ಮ ಗರಿಷ್ಠ ಫಾರ್ಮ್‌ನಲ್ಲಿದ್ದರೂ ಸಹ ಫೈನಲ್’ನಲ್ಲಿ ಟೀಮ್ ಇಂಡಿಯಾ ಸೋತಿದೆ ಎಂದರೆ ನಂಬಲು ಅಸಾಧ್ಯವಾಗುತ್ತಿದೆ.
Reasons why Team India lost: 2023ರ ವಿಶ್ವಕಪ್ ಟೂರ್ನಿಯುದ್ದಕ್ಕೂ ಅದ್ಭುತವಾಗಿ ಆಟವಾಡಿದ್ದ ಟೀಂ ಇಂಡಿಯಾ ಇಂದು ಮುಗ್ಗರಿಸಿತ್ತು, 12 ವರ್ಷಗಳ ಬಳಿಕ ಟ್ರೋಫಿ ಎತ್ತಿ ಹಿಡಿಯಬೇಕು ಎಂದು ಕನಸು ಕಂಡಿದ್ದ ಭಾರತ ಇಂದು ನಿರಾಶೆ ಅನುಭವಿಸಿದೆ. ಈ ಸೋಲಿಗೆ ಪ್ರಮುಖ ಕಾರಣಗಳು ಹಲವಿದೆ. ಆದರೆ ನಾವಿಂದು 5 ಕಾರಣಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.
ಇದನ್ನೂ ಓದಿ: “ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಇಂಥಾ ನಿರ್ಧಾರ ತೆಗೆದುಕೊಳ್ಳಬಾರದಿತ್ತು”- ಸುನಿಲ್ ಗವಾಸ್ಕರ್
ಈ ಸೋಲು ಟೀಂ ಇಂಡಿಯಾವನ್ನು ದೀರ್ಘಕಾಲದವರೆಗೆ ಕಾಡುತ್ತದೆ ಎಂದು ಈ ಹಿಂದೆ ರವಿಶಾಸ್ತ್ರಿ ಅವರು ಹೇಳಿದ್ದು ನೆನಪಾಗುತ್ತಿದೆ. ತಂಡದ ಅನೇಕ ದಿಗ್ಗಜರು ತಮ್ಮ ಗರಿಷ್ಠ ಫಾರ್ಮ್‌ನಲ್ಲಿದ್ದರೂ ಸಹ ಫೈನಲ್’ನಲ್ಲಿ ಟೀಮ್ ಇಂಡಿಯಾ ಸೋತಿದೆ ಎಂದರೆ ನಂಬಲು ಅಸಾಧ್ಯವಾಗುತ್ತಿದೆ.
ಪಂದ್ಯ ಪ್ರಾರಂಭವಾದಾಗ, ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದರೂ ಸಹ ಶುಭ್‌ಮನ್ ಗಿಲ್ ನಿರಾಸಾದಾಯಕ ಪ್ರದರ್ಶನ ನೀಡಿ ಔಟ್ ಆಗಿರುವುದು ಪ್ರಮುಖ ಕಾರಣ.
ವಿಶ್ವಕಪ್ ಟೂರ್ನಿಯುದ್ದಕ್ಕೂ ರೋಹಿತ್ ಶರ್ಮಾ ಬ್ಯಾಟಿಂಗ್ ಅದ್ಭುತವಾಗಿತ್ತು. ಈ ಪಂದ್ಯದಲ್ಲೂ ಅದೇ ರೀತಿ ಆಡುತ್ತಿದ್ದರು. ಆದರೆ ಅತ್ಯಂತ ವೇಗವಾಗಿ ರನ್ ಗಳಿಸುವ ಪ್ರಯತ್ನದಲ್ಲಿ ಅರೆಕಾಲಿಕ ಬೌಲರ್ ಮ್ಯಾಕ್ಸ್‌ವೆಲ್’ಗೆ ವಿಕೆಟ್ ಒಪ್ಪಿಸಿದರು.
ಶ್ರೇಷ್ಠ ಫಾರ್ಮ್’ನಲ್ಲಿದ್ದ ಶ್ರೇಯಸ್ ಅಯ್ಯರ್ ಕೂಡ ಈ ಪಂದ್ಯದಲ್ಲಿ ವಿಫಲವಾದರು. ಸೆಮಿಫೈನಲ್ ಮತ್ತು ಹಿಂದಿನ ಪಂದ್ಯಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದ ಅವರು, ಈ ಪಂದ್ಯದಲ್ಲಿ ಆಗಮಿಸಿದಂತೆಯೇ, ಪೆವಿಲಿಯನ್’ಗೆ ಮರಳಿದ್ದರು. ಇನ್ನು ಸೂರ್ಯಕುಮಾರ್ ಯಾದವ್ ಅವರ ಪರಿಸ್ಥಿತಿಯೂ ಇದೇ ರೀತಿಯದ್ದಾಗಿತ್ತು.
240 ರನ್ ಗಳಿಸಿದ ಟೀಮ್ ಇಂಡಿಯಾ, ಬೌಲಿಂಗ್’ನಲ್ಲಿ ತನ್ನ ವೇಗಿಗಳು ಎಂದಿನಂತೆ ಮಿಂಚುತ್ತಾರೆ ಎಂದು ನಿರೀಕ್ಷಿಸಿತ್ತು. ಆದರೆ ಭಾರತದ ಬೌಲರ್’ಗಳು ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶಿಸಿದ್ದು ವಿಪರ್ಯಾಸ. ಸ್ಪಿನ್ನರ್’ಗಳು ಕೂಡ ಕೆಲಸ ಮಾಡದೆ ವಿಕೆಟ್ ಪಡೆಯಲು ಪರದಾಡುತ್ತಿದ್ದದ್ದು ಕಂಡು ಬಂತು. ಇದಲ್ಲದೇ ಭಾರತ ತಂಡದ ಫೀಲ್ಡಿಂಗ್ ಕೂಡ ನಿರಾಸೆ ಮೂಡಿಸಿತ್ತು. ಕೆಎಲ್ ರಾಹುಲ್ ಕೂಡ ಕೆಲ ಅವಕಾಶಗಳನ್ನು ಕೈಚೆಲ್ಲಿದ್ದರು.
ಪಂದ್ಯದ ಇನ್ನೊಂದು ವಿಶೇಷವೆಂದರೆ ಆಸ್ಟ್ರೇಲಿಯ ತಂಡ ಅತ್ಯಂತ ಆಕ್ರಮಣಕಾರಿ ಪ್ರದರ್ಶನ ನೀಡಿರುವುದು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಅದ್ಭುತವಾಗಿತ್ತು.
ಇದನ್ನೂ ಓದಿ: ವಿಶ್ವಕಪ್ ಸೋಲಿನ ಬಳಿಕ ತಲೆ ಬಾಗಿಸಿ ಮೈದಾನದಿಂದ ಹೊರಬಂದು ಬಿಕ್ಕಿಬಿಕ್ಕಿ ಅತ್ತ ರೋಹಿತ್ ಶರ್ಮಾ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ