Inzamam-ul-Haq resigns as chief selector of Pakistan: ವಿಶ್ವಕಪ್‌’ನಲ್ಲಿ ತಂಡದ ನೀರಸ ಪ್ರದರ್ಶನದ ಮಧ್ಯೆ ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಇಂಜಮಾಮ್-ಉಲ್-ಹಕ್ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರೋಹಿತ್ ಶತಕದ ಗೀಳಿಲ್ಲದ ನಿಸ್ವಾರ್ಥ ನಾಯಕ, ಆದರೆ ಕೊಹ್ಲಿ…! ವಿರಾಟ್ ಬಗ್ಗೆ ಗೌತಮ್ ಹೇಳಿದ್ದೇನು?


ಇಂಜಮಾಮ್ ಉಲ್ ಹಕ್ ಅವರು ತಮ್ಮ ರಾಜೀನಾಮೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಝಕಾ ಅಶ್ರಫ್ ಅವರಿಗೆ ಕಳುಹಿಸಿದ್ದಾರೆ. 2016 ರಿಂದ 19ರವರೆಗಿನ ಒಂದು ಅವಧಿಯಲ್ಲಿ ಪಾಕಿಸ್ತಾನದ ಮುಖ್ಯ ಆಯ್ಕೆಗಾರರಾಗಿದ್ದರು. ಅಷ್ಟೇ ಅಲ್ಲದೆ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಇದಾದ ಬಳಿಕ ಮತ್ತೆ ಕೆಲ ಸಮಯದ ಹಿಂದೆ ಅಂದರೆ ಆಗಸ್ಟ್ ತಿಂಗಳಿನಲ್ಲಿ ಅವರಿಗೆ ಈ ಜವಾಬ್ದಾರಿ ನೀಡಲಾಗಿತ್ತು. ಆದರೆ ಪಾಕಿಸ್ತಾನ ತಂಡದ ಕಳಪೆ ಸ್ಥಿತಿಗೂ ಗುರಿಯಾಗಿದ್ದಲ್ಲದೆ, ಇಂಜಮಾಮ್ ವಿರುದ್ಧ ಪಕ್ಷಪಾತದ ಆರೋಪವೂ ಕೇಳಿಬಂದಿದೆ.


ಇಂಜಮಾಮ್ ರಾಜೀನಾಮೆಯೊಂದಿಗೆ, ಪಾಕಿಸ್ತಾನ ಕ್ರಿಕೆಟ್‌’ನಲ್ಲಿ ಪ್ರಕ್ಷುಬ್ಧತೆಯ ಅವಧಿ ಮುಂದುವರೆದಿದೆ.


ಇದನ್ನೂ ಓದಿ:  ಮಹಿಳೆಯ ದೇಹದ ಈ ಭಾಗ ಅಗಲವಾಗಿ ದುಂಡಾಗಿದ್ದರೆ ಅವರಷ್ಟು ಲಕ್ಕಿ ಮತ್ತೊಬ್ಬರಿಲ್ಲ..!


PCB ಹೇಳಿಕೆ:


ಇಂಜಮಾಮ್ ರಾಜೀನಾಮೆ ನಡುವೆಯೇ ಪಿಸಿಬಿ ಹೇಳಿಕೆಯೂ ಹೊರಬಿದ್ದಿದೆ. ಅದರಲ್ಲಿ “ತಂಡದ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬಂದ ಹಿತಾಸಕ್ತಿ ಸಂಘರ್ಷದ ಆರೋಪಗಳ ಕುರಿತು ತನಿಖೆ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಐವರು ಸದಸ್ಯರ ಸಮಿತಿಯನ್ನು ರಚಿಸಿದೆ. ಸಮಿತಿಯು ತನ್ನ ವರದಿಯನ್ನು ಮತ್ತು ಯಾವುದೇ ಸಲಹೆಗಳನ್ನು ಪಿಸಿಬಿ ನಿರ್ವಹಣೆಗೆ ಸಾಧ್ಯವಾದಷ್ಟು ಬೇಗ ಸಲ್ಲಿಸುತ್ತದೆ” ಎಂದು ಹೇಳಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ