ಸಚಿನ್ ವಿಶ್ವದಾಖಲೆ ಬ್ರೇಕ್ ಮಾಡಿದ ವಿರಾಟ್ ಕೊಹ್ಲಿ: ಏಕದಿನದಲ್ಲಿ 50ನೇ ಶತಕ ಸಿಡಿಸಿ ಇತಿಹಾಸ ಬರೆದ ‘ನಮ್ಮ ಕಿಂಗ್’
Virat Kohli 50th Century, Cricket News in Kannada: ODI ವೃತ್ತಿಜೀವನದ 50 ನೇ ಶತಕವನ್ನು ಗಳಿಸುವ ಮೂಲಕ ಏಕದಿನದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ವಿರಾಟ್ ಶ್ರೇಷ್ಠ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
Virat Kohli 50th Century, Cricket News in Kannada: 2023ರ ವಿಶ್ವಕಪ್ ಸೆಮಿಫೈನಲ್ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಇತಿಹಾಸ ನಿರ್ಮಿಸಿದ್ದಾರೆ. ತಮ್ಮ ODI ವೃತ್ತಿಜೀವನದ 50 ನೇ ಶತಕವನ್ನು ಗಳಿಸುವ ಮೂಲಕ ಏಕದಿನದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ವಿರಾಟ್ ಶ್ರೇಷ್ಠ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಈ ಪಂದ್ಯವನ್ನು ವೀಕ್ಷಿಸಲು ಸ್ವತಃ ಸಚಿನ್ ವಾಂಖೆಡೆಗೆ ಆಗಮಿಸಿದಲ್ಲದೆ, ತಮ್ಮ ನೆಚ್ಚಿನ ಶಿಷ್ಯನ ಸಾಧನೆ ಕಂಡು ಎದ್ದುನಿಂತು ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದಾರೆ. ಸಚಿನ್ 452 ಏಕದಿನ ಇನ್ನಿಂಗ್ಸ್’ಗಳಲ್ಲಿ 49 ಶತಕಗಳನ್ನು ಗಳಿಸಿದ್ದರು. ಆದರೆ ಕೊಹ್ಲಿ ತಮ್ಮ 279 ನೇ ಇನ್ನಿಂಗ್ಸ್’ನಲ್ಲಿ 50 ಶತಕಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ: ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ: ಯಾವೊಬ್ಬ ಭಾರತೀಯ ನಾಯಕನೂ ಮಾಡಲು ಸಾಧ್ಯವಾಗದ ವಿಶೇಷ ರೆಕಾರ್ಡ್
ವಿರಾಟ್ ನಿರ್ದಿಷ್ಟ ಒಂದು ವಿಶ್ವಕಪ್’ನಲ್ಲಿ ಗರಿಷ್ಠ ಬಾರಿ 50+ ಸ್ಕೋರ್ ಮಾಡಿದ ದಾಖಲೆಯನ್ನೂ ಮಾಡಿದ್ದಾರೆ. ಇದು ಪ್ರಸಕ್ತ ವಿಶ್ವಕಪ್‌ನಲ್ಲಿ ಅವರ ಎಂಟನೇ 50+ ಸ್ಕೋರ್ ಆಗಿದೆ. ಇದಕ್ಕೂ ಮುನ್ನ 2003ರ ವಿಶ್ವಕಪ್’ನಲ್ಲಿ ಸಚಿನ್ ಮತ್ತು 2019ರಲ್ಲಿ ಶಕೀಬ್ ಅಲ್ ಹಸನ್ ತಲಾ ಏಳು ಬಾರಿ 50+ ರನ್ ಗಳಿಸಿದ್ದರು.
ಒಂದೇ ವಿಶ್ವಕಪ್’ನಲ್ಲಿ 50+ ಗರಿಷ್ಠ ಸ್ಕೋರ್”
8 - ವಿರಾಟ್ ಕೊಹ್ಲಿ (2023)
7 - ಸಚಿನ್ ತೆಂಡೂಲ್ಕರ್ (2003)
7 - ಶಾಕಿಬ್ ಅಲ್ ಹಸನ್ (2019)
6 - ರೋಹಿತ್ ಶರ್ಮಾ (2019)
ವಿರಾಟ್ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 50+ ಸ್ಕೋರ್’ಗಳ ವಿಷಯದಲ್ಲಿ ಜಂಟಿ ಎರಡನೇ ಸ್ಥಾನವನ್ನು ತಲುಪಿದ್ದಾರೆ. ವಿರಾಟ್ ಎಲ್ಲಾ ಮೂರು ಸ್ವರೂಪಗಳನ್ನು ಒಟ್ಟುಗೂಡಿಸಿ 50+ 217 ಬಾರಿ ಗಳಿಸಿದ್ದಾರೆ. ಈ ವಿಷಯದಲ್ಲಿ ಅವರು ರಿಕಿ ಪಾಂಟಿಂಗ್ ಅವರನ್ನು ಸರಿಗಟ್ಟಿದ್ದಾರೆ. ಆದರೆ, ಸಚಿನ್ ತೆಂಡೂಲ್ಕರ್ ಈ ಸಾಧನೆಯನ್ನು 264 ಬಾರಿ ಮಾಡಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 50+ ಗರಿಷ್ಠ ಸ್ಕೋರ್
264 - ಸಚಿನ್ ತೆಂಡೂಲ್ಕರ್
217 - ರಿಕಿ ಪಾಂಟಿಂಗ್
217-ವಿರಾಟ್ ಕೊಹ್ಲಿ
216 - ಕುಮಾರ್ ಸಂಗಕ್ಕಾರ
211 - ಜಾಕ್ವೆಸ್ ಕಾಲಿಸ್
ಇನ್ನು ಈ ಪಂದ್ಯದಲ್ಲಿ 80 ರನ್ ಗಳಿಸುವ ಮೂಲಕ ವಿರಾಟ್ ಒಂದೇ ವಿಶ್ವಕಪ್’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಚಿನ್ ದಾಖಲೆಯನ್ನು ಮುರಿದಿದ್ದಾರೆ. 2003ರ ವಿಶ್ವಕಪ್’ನಲ್ಲಿ ಸಚಿನ್ 673 ರನ್ ಗಳಿಸಿದ್ದರು. ಆದರೆ ಇದೀಗ 80 ರನ್ ಗಳಿಸಿದ ನಂತರ 674 ರನ್ ಗಳಿಸಿ ಸಚಿನ್ ಅವರನ್ನು ಹಿಂದಿಕ್ಕಿದ್ದಾರೆ.
ಒಂದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್:
674* ರನ್ - ವಿರಾಟ್ ಕೊಹ್ಲಿ (2023)
673 ರನ್ - ಸಚಿನ್ ತೆಂಡೂಲ್ಕರ್ (2003)
659 ರನ್ - ಮ್ಯಾಥ್ಯೂ ಹೇಡನ್ (2007)
648 ರನ್ - ರೋಹಿತ್ ಶರ್ಮಾ (2019)
647 ರನ್ - ಡೇವಿಡ್ ವಾರ್ನರ್ (2019)
2019 ರ ವಿಶ್ವಕಪ್’ನಲ್ಲಿ ಸತತ 50+ ಸ್ಕೋರ್’ಗಳನ್ನು ಗಳಿಸುವ ವಿಷಯದಲ್ಲಿ ವಿರಾಟ್ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. 1996 ಮತ್ತು 2003ರ ವಿಶ್ವಕಪ್’ನಲ್ಲಿ ಸಚಿನ್ ಸತತ 4 ಬಾರಿ 50+ ಸ್ಕೋರ್ ಮಾಡಿದ್ದರು. ವಿರಾಟ್ ಕೊಹ್ಲಿ 2019 ರ ವಿಶ್ವಕಪ್‌ನಲ್ಲಿ ಸತತ ಐದು ಬಾರಿ ಈ ಸಾಧನೆ ಮಾಡಿದರು.
ವಿಶ್ವಕಪ್’ನಲ್ಲಿ ಸತತ 50+ ಸ್ಕೋರ್‌ಗಳನ್ನು ಗಳಿಸಿದ ಭಾರತೀಯ ಆಟಗಾರರು
5 - ವಿರಾಟ್ ಕೊಹ್ಲಿ (2019)
4 - ಸಚಿನ್ ತೆಂಡೂಲ್ಕರ್ (1996)
4 - ಸಚಿನ್ ತೆಂಡೂಲ್ಕರ್ (2003)
4 - ನವಜೋತ್ ಸಿಂಗ್ ಸಿಧು (1987)
4 - ಶ್ರೇಯಸ್ ಅಯ್ಯರ್ (2023)
ಇದನ್ನೂ ಓದಿ: ಟೀಂ ಇಂಡಿಯಾಗೆ ಬಿಗ್ ಶಾಕ್…! ಗಾಯಕ್ಕೆ ತುತ್ತಾದ ಶುಭ್ಮನ್ ಗಿಲ್ ಪಂದ್ಯದಿಂದ ಔಟ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.