Virat Kohli Bowling Video: ನೆದರ್ಲೆಂಡ್ಸ್ ವಿರುದ್ಧ ವಿಶ್ವಕಪ್ 2023ರ ಕೊನೆಯ ಲೀಗ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, 9 ವರ್ಷಗಳ ಬಳಿಕ ವಿಕೆಟ್ ಕಬಳಿಸಿದ ಚೀಕು ಕಮಾಲ್ ಮಾಡಿದ್ದಾರೆ. ಅಭಿಮಾನಿಗಳ ಬೇಡಿಕೆಯನ್ನು ಈಡೇರಿಸಿದ ರೋಹಿತ್ ಶರ್ಮಾ ಕೊಹ್ಲಿಗೆ ಬೌಲಿಂಗ್ ಮಾಡಲು ಅವಕಾಶ ನೀಡಿದರು. ಇದಕ್ಕೂ ಮುನ್ನ ಸ್ಟ್ಯಾಂಡ್‌’ನಲ್ಲಿ ಕುಳಿತಿದ್ದ ಅಭಿಮಾನಿಗಳು ಕೊಹ್ಲಿಯನ್ನು ಬೌಲಿಂಗ್ ಮಾಡುವಂತೆ ಒತ್ತಾಯಿಸುತ್ತಿದ್ದುದ್ದನ್ನು ಕಾಣಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿರಾಟ್ ಔಟ್ ಆಗಿದ್ದಕ್ಕೆ ಶಾಕ್ ಆದ ಅನುಷ್ಕಾ! ಸ್ಟೇಡಿಯಂನಲ್ಲೇ ಬೇಸರ ಹೊರಹಾಕಿದ್ದು ಹೀಗೆ…


ಇನ್ನು ರೋಹಿತ್ ಶರ್ಮಾ ಮತ್ತು ಅಭಿಮಾನಿಗಳ ನಂಬಿಕೆಯಂತೆ ಕೊಹ್ಲಿ ಎರಡನೇ ಓವರ್‌’ನಲ್ಲಿ ವಿಕೆಟ್ ಪಡೆದರು. ಈ ಸಂದರ್ಭದಲ್ಲಿ ಪತ್ನಿ ಅನುಷ್ಕಾ ಶರ್ಮಾ ಕುಣಿದು ಕುಪ್ಪಳಿಸಿದ್ದಾರೆ.


ಎರಡನೇ ಇನಿಂಗ್ಸ್‌’ನ 25ನೇ ಓವರ್‌’ನಲ್ಲಿ ಕೊಹ್ಲಿ ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರನ್ನು ಔಟ್ ಮಾಡಿದ್ದಾರೆ. ಇದನ್ನು ಕಂಡ ಅನುಷ್ಕಾ ಶರ್ಮಾ ಸಂತೋಷದಲ್ಲಿ ಜೋರಾಗಿ ನಗುತ್ತಿರುವುದು ಕಂಡುಬಂದಿದೆ.


ಅಂದಹಾಗೆ ಇದು ವಿರಾಟ್ ಕೊಹ್ಲಿ ಅವರ ಏಕದಿನ ವೃತ್ತಿಜೀವನದ ಐದನೇ ವಿಕೆಟ್ ಆಗಿತ್ತು. ಇದಲ್ಲದೇ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 4 ವಿಕೆಟ್ ಪಡೆದಿದ್ದಾರೆ. ಇದರರ್ಥ ಕೊಹ್ಲಿಯ ಒಟ್ಟು 9ನೇ ಅಂತಾರಾಷ್ಟ್ರೀಯ ವಿಕೆಟ್. ಇನ್ನು ಕೊಹ್ಲಿ 9 ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ವಿಕೆಟ್ ಪಡೆದಿದ್ದು ಇಲ್ಲಿ ಗಮನಾರ್ಹ. ಇದಕ್ಕೂ ಮೊದಲು ಬಾಂಗ್ಲಾದೇಶ ವಿರುದ್ಧದ ಪಂದ್ಯಾವಳಿಯಲ್ಲಿ, ಹಾರ್ದಿಕ್ ಪಾಂಡ್ಯನ್ ಅವರ ಓವರ್‌’ನ ಉಳಿದ ಮೂರು ಎಸೆತಗಳನ್ನು ಕೊಹ್ಲಿ ಬೌಲಿಂಗ್ ಮಾಡಿದ್ದರು.


ಈ ಬಳಿಕ ಅವರ ಅಭಿಮಾನಿಗಳು ಕೊಹ್ಲಿಯನ್ನು ಬೌಲಿಂಗ್ ಮಾಡುವಂತೆ ಅನೇಕ ಬಾರಿ ಒತ್ತಾಯಿಸುತ್ತಿರುವುದು ಕಂಡುಬಂದಿತ್ತು. ಇಂದು ರೋಹಿತ್ ಶರ್ಮಾ ಕೊಹ್ಲಿ ಅಭಿಮಾನಿಗಳ ಬೇಡಿಕೆಯನ್ನು ಈಡೇರಿಸಿದ್ದು, ಬೌಲಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.


 

 

 

 



 

 

 

 

 

 

 

 

 

 

 

A post shared by ICC (@icc)


 


ಇದನ್ನೂ ಓದಿ: ತೆಂಗಿನೆಣ್ಣೆ ಜೊತೆ ಈ ಎಲೆಯನ್ನು ಅರೆದು ತಲೆಗೆ ಹಚ್ಚಿದರೆ 10 ನಿಮಿಷದಲ್ಲಿ ಬಿಳಿಕೂದಲು ಕಪ್ಪಾಗುತ್ತೆ! ಹಚ್ಚಿದ ಕೂಡಲೇ ಪರ್ಮನೆಂಟ್ ರಿಸಲ್ಟ್!


ವಿರಾಟ್ ಅರ್ಧಶತಕ:


ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ಕೊಹ್ಲಿ ಅರ್ಧಶತಕ ಗಳಿಸಿದರು. 56 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಂತೆ 51 ರನ್ ಗಳಿಸಿದರು. ಕಿಂಗ್ ಕೊಹ್ಲಿ ಅವರಿಂದ 50ನೇ ಏಕದಿನ ಶತಕವನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದರೂ, ಸಹ ಅದನ್ನು ಪೂರ್ಣಗೊಳಿಸುವಲ್ಲಿ ವಿಫಲವಾಗಿದ್ದಾರೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ