Shubman Gill and Rohit Sharma: ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಅಕ್ಟೋಬರ್ 22 ರಂದು ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ ODI ವಿಶ್ವಕಪ್ ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕೂ ಮುನ್ನ ಶುಭ್ಮನ್ ಗಿಲ್ ಹಾಗೂ ನಾಯಕ ರೋಹಿತ್ ಶರ್ಮಾ ನಡುವಿನ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಧರ್ಮಶಾಲಾದಲ್ಲಿ ಗುಡುಗು ಸಹಿತ ಭಾರೀ ಮಳೆ: ಭಾರತ-ನ್ಯೂಜಿಲೆಂಡ್ ಪಂದ್ಯ ನಡೆಯೋದೇ ಡೌಟ್…!


ಬಾಂಗ್ಲಾದೇಶ ವಿರುದ್ಧದ ಪಂದ್ಯದ ನಂತರ ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ನಡುವಿನ ಸಂಭಾಷಣೆ ಇದಾಗಿತ್ತು. ಪುಣೆಯಲ್ಲಿ ನಡೆದ ಆ ಪಂದ್ಯದಲ್ಲಿ ರೋಹಿತ್ ಶರ್ಮಾ ಪುಲ್ ಶಾಟ್’ಗೆ ಯತ್ನಿಸಿ ಔಟಾದರು. ಆಗ ಅವರು 48 ರನ್ ಗಳಿಸಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಗಿಲ್ ರೋಹಿತ್‌ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. “ನೀವು ಔಟಾಗುವಾಗ ನಿಮಗೆ ಕೋಪ ಬಂದಿತು. ನೀವು ಯಾಕೆ ಮತ್ತಷ್ಟು ವೇಗವಾಗಿ ಬ್ಯಾಟ್ ಬೀಸಲಿಲ್ಲ” ಎಂದು…


ಅದಕ್ಕೆ ಉತ್ತರಿಸಿದ ಕ್ಯಾಪ್ಟನ್, “ಹೌದು, ನಾನು ಮಾಡಿದ್ದು ತಪ್ಪು, ಎತ್ತರಕ್ಕೆ ಬಾಲ್ ಹೋಗುವಂತೆ ಬ್ಯಾಟ್ ಬೀಸಬೇಕಿತ್ತು” ಎಂದರು.


ಮತ್ತೊಂದು ಪ್ರಶ್ನೆ ಕೇಳಿದ ಗಿಲ್ “2003 ರಿಂದ ಐಸಿಸಿ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಲು ನಮಗೆ ಸಾಧ್ಯವಾಗಲಿಲ್ಲ ಎಂದು ಯಾರೋ ಒಬ್ಬರು ಪತ್ರಿಕಾಗೋಷ್ಠಿಯಲ್ಲಿ ನನ್ನನ್ನು ಕೇಳಿದರು”


ಇದಕ್ಕೆ ಉತ್ತರಿಸಿದ ರೋಹಿತ್, “ಹೌದು ನಿಜ. ಆದರೆ ಸದ್ಯಕ್ಕೆ ನಾವು ಉತ್ತಮ ಕ್ರಿಕೆಟ್ ಆಡುತ್ತಿದ್ದು, ನಮ್ಮ ಕಡೆಯಿಂದ ಇಷ್ಟು ಮಾತ್ರ ಮಾಡಬಲ್ಲೆವು” ಎಂದಿದ್ದಾರೆ.


“ಹಾಗಾದರೆ, ನಾವು ಖಂಡಿತವಾಗಿಯೂ ಈ ಸರಣಿಯನ್ನು ಭಾನುವಾರದಂದು ಮುಗಿಸುತ್ತೇವೆಯೇ?” ಎಂದು ಗಿಲ್ ಮತ್ತೆ ಪ್ರಶ್ನಿಸಿದ್ದು, ಅದಕ್ಕೆ ಪ್ರತಿಕ್ರಿಯೆ ನೀಡಿದ ರೋಹಿತ್, “ನೋಡು, ನಾವು ಯಾವುದೇ ಗ್ಯಾರಂಟಿ ನೀಡುವಂಥ ಕ್ರಿಕೆಟ್ ಆಡುವುದಿಲ್ಲ. ಮೈದಾನಕ್ಕೆ ಇಳಿದಾಗ ತಂಡವಾಗಿ ಮಾಡುವುದನ್ನು ಮಾಡಬೇಕು. ನಾವು ತುಂಬಾ ಮುಂದೆ ಯೋಚಿಸಲು ಸಾಧ್ಯವಿಲ್ಲ” ಎಂದಿದ್ದಾರೆ.


ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಸೊಸೆ ಚಿತ್ರರಂಗವನ್ನೇ ಆಳುತ್ತಿರುವ ಖ್ಯಾತ ನಟಿ! ಯಾರು ಗೊತ್ತಾ ಆ ಸುಂದರಿ?


ಇನ್ನು ಸ್ಫೋಟಕ ಆರಂಭಿಕ ಆಟಗಾರ ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡುತ್ತಿರುವ ಭಾರತ ತಂಡ, ಐಸಿಸಿ ಏಕದಿನ ವಿಶ್ವಕಪ್‌’ನಲ್ಲಿ ಇದುವರೆಗೆ ಆಡಿದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಮತ್ತೊಂದೆಡೆ, ನ್ಯೂಜಿಲೆಂಡ್ ಕೂಡ ಆಡಿರುವ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಆದರೆ ಉತ್ತಮ ನೆಟ್ ರನ್ ರೇಟ್‌’ನಿಂದ ನ್ಯೂಜಿಲೆಂಡ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಅಕ್ಟೋಬರ್ 22 ರಂದು ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ ಪಂದ್ಯವನ್ನು ಆಡಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.